Uttara Kannada: ಗೋಕರ್ಣದಲ್ಲಿ ಹೆಣ್ಣು ಹೆಣ್ಣಿಗೆ ಮದುವೆ! ಅದ್ದೂರಿ ವಿಡಿಯೋ ನೋಡಿ

ಗಂಡು ಹೆಣ್ಣು ಮದುವೆ ಆಗೋದನ್ನ ನೀವೆಲ್ಲ ನೋಡಿಯೇ ಇರ್ತೀರ.. ಆದರೆ, ಇಲ್ಲಿ ಹೆಣ್ಣು ಹೆಣ್ಣಿನ ನಡುವೆ ಮದುವೆಯೊಂದು ನಡೆದಿದೆ. ಅದೂ ಎರಡು ಕುಟುಂಬಿಕ ಪರಸ್ಪರ ಸಮ್ಮತಿಯೊಂದಿಗೆ. ಹಾಗಿದ್ರೆ ಈ ಮದುವೆ ಯಾಕೆ ನಡೆಯಿತು ಗೊತ್ತಾ..?

ಸಾಂದರ್ಭಿಕ ಚಿತ್ರ

"ಸಾಂದರ್ಭಿಕ ಚಿತ್ರ"

  • Share this:
    ಉತ್ತರ ಕನ್ನಡ: ಇಲ್ಲಿ ಹೆಣ್ಣು ಹೆಣ್ಣಿಗೆ ಮದುವೆ ನಡೆಸುವ ಸಂಪ್ರದಾಯವೊಂದಿದೆ. ಹಾಗಂತ ಇದು ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವಂತಹ ಮದುವೆಗಳೂ ಅಲ್ಲ. ಎಲ್ಲರೂ ಪರಸ್ಪರ ಸಮ್ಮತಿಸಿ ನಡೆಯುವ ಮದುವೆ. ಹೇಳಿ ಕೇಳಿ ಈ ಮದುವೆ ಅದ್ದೂರಿಯಾಗಿಯೂ ನಡೆಯುತ್ತದೆ. ಎಲ್ಲಾ ವಿಧಿ ವಿಧಾನಗಳು ನಡೆಸಲಾಗುತ್ತದೆ. ಆದರೆ, ಇಂತಹ ಮದುವೆ ಹಿಂದೆ ಇಲ್ಲಿನ ಹಿರಿಯರದ್ದು ಬೇರೆಯದ್ದೇ ಲೆಕ್ಕಚಾರವಿದೆ. ಇದೆಂತ ಮಾರ್ರೇ ಇವರು, ಎಂತೆಂತದೋ ಹೇಳ್ತಾರಲ್ಲ, ಇವರಿಗೆಂತಾ ಮರ್ಲಾ? ಅನ್ಬೇಡಿ ಮಾರ್ರೇ. ಇದು ನೂರಕ್ಕೆ ನೂರು ಸತ್ಯ. ನೀವ್ ಉತ್ತರ ಕನ್ನಡ ಜಿಲ್ಲೆಯ (Uttara Kannada)  ಗೋಕರ್ಣದ (Gokarna) ಹುಳಸೀಕೇರಿ ಊರಿಗೆ ಬಂದ್ರೆ ಇಲ್ಲಿ ಜನ ಮಳೆ ಸರಿಯಾಗಿ ಬರೋ ಸಲುವಾಗಿ ಇದೊಂದ್ ರಿವಾಜ್ ಇಟ್ಕೊಂಡಿದಾರೆ.  

    ಇದು ಹೆಣ್ಣು ಹೆಣ್ಣಿನ ಮದುವೆ
    ಅತಿವೃಷ್ಟಿಯೂ ಆಗ್ಬಾರ್ದು ಅನಾವೃಷ್ಟಿಯೂ ಆಗ್ಬಾರ್ದು ಸಮಷ್ಠಿಯಿಂದ ಇಂದ್ರದೇವ ಮಳೆ, ಬೆಳೆ ಕರುಣಿಸಬೇಕು ಎನ್ನೋ ಉದ್ದೇಶದಿಂದ ಹೆಣ್ಣು ಹೆಣ್ಣಿನ ಮದ್ವೆನ ಹಾಲಕ್ಕಿ ಒಕ್ಕಲಿಗರು ಹಮ್ಮಿಕೊಳ್ಳುತ್ತಾರೆ.

    ವರನೂ ಹೆಣ್ಣು, ವಧುವೂ ಹೆಣ್ಣು
    ಈ ವಿಶೇಷ ಪದ್ಧತಿಯಲ್ಲಿ ವಿವಾಹ ಶಾಸ್ತ್ರದ ಎಲ್ಲಾ ಆಚರಣೆಗಳನ್ನು ಪಾಲಿಸಲಾಗುತ್ತದೆ. ಇಲ್ಲಿ ವಧುವೂ ಹೆಣ್ಣು, ವರವೂ ಹೆಣ್ಣು ಇಲ್ಲಿ ಎಷ್ಟೋ ಜನ ಸಂಭ್ರಮದಿಂದ ಮದುವೆಯಲ್ಲಿ ಪಾಲ್ಗೊಂಡು ಉತ್ಸವದಂತೆ ಈ ಆಚರಣೆಯನ್ನು ಮಾಡುತ್ತಾರೆ.

    ಇದನ್ನೂ ಓದಿ: Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!

    ಈ ಬಾರಿ ಕರ್ಕಿವಿನಾಯಕ ಹಾಗೂ ಕರಿಯಮ್ಮನ ಸನ್ನಿಧಾನದಲ್ಲಿ ಮದುವೆ ನಡೆಯಿತು. ಹಾಲುಗಲ್ಲದವರಿಂದ ಹಿಡಿದು ಮುದುಕರವರೆಗೂ ಒಟ್ಟಾಗಿ ಪಾಲ್ಗೊಂಡು ಸಂಭ್ರಮದಿಂದ ಈ ದುದ್ದುವೆ ಮದುವೆಯನ್ನು ಆಚರಿಸಿದರು.

    ಇದನ್ನೂ ಓದಿ: Uttara Kannada Special: ಹಿಂಗ್ ಎಂಜಾಯ್ ಮಾಡ್ಬೇಕ್ರಿ! 'ಕೆಸರಲಿ ಜೊತೆಯಲಿ' ವೀಡಿಯೋ ವೀಕ್ಷಿಸಿ

    ಒಟ್ಟಿನಲ್ಲಿ ನಾಡಿನಲ್ಲಿ ಅತಿವೃಷ್ಟಿ, ಅನಾವೃಷ್ಟಿಯಾದಾಗ ವಿಶಿಷ್ಟ ಆಚರಣೆಗಳ ಮೂಲಕ ದೇವರ ಮೊರೆ ಹೋಗ್ತಾರ್ರೆ. ಇದ್ಯಾವುದಕ್ಕೂ ವೈಜ್ಞಾನಿಕ ಆಧಾರಗಳು ಇಲ್ದೇ ಹೋದ್ರೂ, ಜಾನಪದ ಹಿನ್ನೆಲೆ ಇಂತಹ ಸಂಪ್ರದಾಯಗಳಿಗೆ ಜೀವ ತುಂಬಿದೆ ಅಂದರೆ ತಪ್ಪಾಗದು.

    ವರದಿ: ಎ.ಬಿ.ನಿಖಿಲ್. ಮುಂಡಗೋಡು
    Published by:guruganesh bhat
    First published: