• Home
  • »
  • News
  • »
  • uttara-kannada
  • »
  • Marikamba Devi: ಮಾರಿ ಜಾತ್ರೆಗೂ ಮುನ್ನ ಹೊರಬೀಡು ಆಚರಣೆಯ ರಹಸ್ಯ!

Marikamba Devi: ಮಾರಿ ಜಾತ್ರೆಗೂ ಮುನ್ನ ಹೊರಬೀಡು ಆಚರಣೆಯ ರಹಸ್ಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಜಾತ್ರೆಗೆ ಒಂದು ತಿಂಗಳ ಮುನ್ನ ಬರುವ ಪ್ರತಿ ಮಂಗಳವಾರ, ಶುಕ್ರವಾರ ತಾಯಿ ಮಾರಿಕಾಂಬೆಯೇ ತನ್ನ ಭಕ್ತರ ಯೋಗಕ್ಷೇಮ ವಿಚಾರಿಸಲು ನಗರ ಸಂಚಾರ ನಡೆಸುತ್ತಾಳೆ ಅನ್ನೋ ಪ್ರತೀತಿಯಿದೆ.

  • News18
  • Last Updated :
  • Mundgod, India
  • Share this:

    ಉತ್ತರ ಕನ್ನಡ: ಹೀಗೆ ತರಾತುರಿಯಲ್ಲಿ ಮಕ್ಕಳು, ಮಹಿಳೆಯರು, ಹಿರಿ ಕಿರಿಯರು ಹೊರಟು ನಿಂತಿದ್ದಾರೆ. ಅದ್ಯಾವುದೋ ವಿಕೋಪ ನಡೆಯುವ ಸೂಚನೆಯಂತೆ ಜನ ಊರಿಗೆ ಊರೇ (Village Lockdown) ಬಿಟ್ಟು ತೆರಳುತ್ತಿದ್ದಾರೆ. ಒಟ್ಟಿನಲ್ಲಿ ಗ್ರಾಮಕ್ಕೆ ಗ್ರಾಮವೇ ಲಾಕ್​ಡೌನ್. ಅಷ್ಟಕ್ಕೂ ಈ ಸೂಚನೆ ಯಾರದ್ದು? ಯಾಕಾಗಿ ಕರ್ಫ್ಯೂ ಮಾದರಿಯ (Marikamba Jatra Horabeedu) ವಾತಾವರಣ ಅಂತೀರಾ? ಅದೆಲ್ಲವನ್ನ ಹೇಳ್ತೀವಿ ನೋಡಿ.


    ಯೆಸ್, ಈ ಸೂಚನೆ ಯಾವುದೋ ಅಧಿಕಾರಿಯದ್ದೂ ಅಲ್ಲ, ಜನಪ್ರತಿನಿಧಿಯದ್ದೂ ಅಲ್ಲ. ಬದಲಿಗೆ ಊರ ದೇವತೆ ಮಾರಿಕಾಂಬೆಯ ಆದೇಶ. ಹಾಗಾಗಿಯೇ ಯಾರೊಬ್ಬರೂ ಚಕಾರವೆತ್ತದೇ ಊರ ಗಡಿ ದಾಟಿ ಹೋಗುತ್ತಾರೆ. ಯಾವ ಕಳ್ಳಕಾಕರ ಭಯವಿಲ್ಲದೇ ಊರು ತೊರೆದು ದೂರದೂರಿಗೆ ಹೋಗುತ್ತಾರೆ.


    ಊರಿಗೆ ಊರೇ ಅಘೋಷಿತ ಲಾಕ್​ಡೌನ್!
    ಆ ದಿನ ಗಡಿ ಒಳಗಿರೋ ಯಾವೊಂದು ಅಂಗಡಿ ಮುಂಗಟ್ಟುಗಳು ತೆರೆಯೋದಿಲ್ಲ. ಜನರಂತೂ ಬೀದಿಯಲ್ಲಿ ಕಾಣಿಸಿಕೊಳ್ಳೋದೇ ಇಲ್ಲ! ಮನೆಗಳಂತೂ ಲಾಕ್ ಆಗಿ ಊರೇ ನಿಶ್ಶಬ್ಧವಾಗಿರುವುದು. ಒಂದು ರೀತಿಯ ಕರ್ಫ್ಯೂ, ಲಾಕ್​ಡೌನ್ ಮಾದರಿಯ ವಾತಾವರಣ ಕಂಡುಬರುತ್ತೆ.




    ಗ್ರಾಮದೇವಿಯ ಜಾತ್ರೆಯ ವಿಶೇಷ ಈ ಸಂಪ್ರದಾಯ
    ಇಂತಹ ಆಚರಣೆಗೂ ಒಂದು ಕಾರಣವಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು ಸೀಮೆಯ ಜನರು ಎರಡು ವರ್ಷಕ್ಕೋ, ಮೂರು ವರ್ಷಕ್ಕೋ ತಮ್ಮೂರಿನ ಗ್ರಾಮದೇವಿಯ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. 


    ಮಾರಿಕಾಂಬೆಯ ಕಣ್ಣಿಗೆ ಬಿದ್ದರೆ ಎಚ್ಚರ!
    ಅದಕ್ಕೂ ಮುಂಚೆ ಕೆಲವೊಂದು ವಿಶೇಷ ಕಟ್ಟುಪಾಡುಗಳನ್ನು ಆಚರಿಸುತ್ತಾರೆ. ಜಾತ್ರೆಗೆ ಒಂದು ತಿಂಗಳ ಮುನ್ನ ಬರುವ ಪ್ರತಿ ಮಂಗಳವಾರ, ಶುಕ್ರವಾರ ತಾಯಿ ಮಾರಿಕಾಂಬೆಯೇ ತನ್ನ ಭಕ್ತರ ಯೋಗಕ್ಷೇಮ ವಿಚಾರಿಸಲು ನಗರ ಸಂಚಾರ ನಡೆಸುತ್ತಾಳೆ ಅನ್ನೋ ಪ್ರತೀತಿಯಿದೆ. ಮಾರಿಕಾಂಬೆ ಉಗ್ರಸ್ವರೂಪಿಣಿ ಆಗಿದ್ರಿಂದ, ಆಕೆಯ ಬರುವಿಕೆ ಸಮಯದಲ್ಲಿ ಯಾರೂ ಆಕೆಯ ಕಣ್ಣಿಗೆ ಬೀಳಬಾರದು.


    ಇದನ್ನೂ ಓದಿ: Bananti Devi Temple: ಬಲು ವಿಶೇಷ ಈ ಬಾಣಂತಿ ಜಾತ್ರೆ, ನೀರಿನಲ್ಲಿ ಮಕ್ಕಳನ್ನು ತೇಲಿಬಿಡುವ ಹರಕೆ!


    10 ಗಂಟೆಯಿಂದ ಸಂಜೆ 4:30 ರವರೆಗೆ ಊರು ಬಂದ್!
    ಒಂದು ವೇಳೆ ಆ ದೇವಿಯ ಕಣ್ಣಿಗೆ ಬಿದ್ದರೆ ಪರಿಣಾಮ ನೆಟ್ಟಗಿರದು. ಹೀಗಾಗಿ ಜನರೆಲ್ಲ ಬೇಗನೆ ಮನೆಯ ಕೆಲಸ ಕಾರ್ಯಗಳನ್ನ ಮುಗಿಸಿ 10 ಗಂಟೆಗೆ ದೇವಿಯ ಪೂಜೆಯೊಂದಿಗೆ ಮನೆ ಬಿಟ್ಟರೆ ಮತ್ತೆ ಸಂಜೆ 4:30 ಕ್ಕೆ ಮರಳಿ ಬರುತ್ತಾರೆ. ಇದನ್ನ ಹೊರಬೀಡು ಆಚರಣೆ ಎಂದು ಕರೆಯಲಾಗುತ್ತೆ.


    ಇದನ್ನೂ ಓದಿ: Positive Story: 25 ಸಾವಿರಕ್ಕೂ ಹೆಚ್ಚು ಗ್ರಾಮೀಣ ಯುವಕರ ಭವಿಷ್ಯ ರೂಪಿಸಿದ ನಮ್ಮ ಕರ್ನಾಟಕದ ಸಂಸ್ಥೆಯಿದು!


    ಇಷ್ಟು ಮಾತ್ರವಲ್ಲ, ಒಂದು ವೇಳೆ ಹೊರಬೀಡು ಕಟ್ಟಳೆಯನ್ನ ಉಲ್ಲಂಘಿಸಿದವರಿಗೆ ವಿಚಿತ್ರ ಅನುಭವಗಳೂ ಆಗಿವೆಯಂತೆ!  ಕಳ್ಳತನ ಮಾಡಲು ಬಂದವರು ತಾಯಿಯ ಸನ್ನಿಧಿಗೆ ಶರಣಾದ ಘಟನೆಯೂ ಜರುಗಿದೆಯಂತೆ. ಹೀಗಾಗಿ ಜನರು ದೇವಿಯ ಕ್ರೋಧಕ್ಕೆ ತುತ್ತಾಗದಂತೆ ಹೊಲ, ಗದ್ದೆ ಅಥವಾ ಪ್ರವಾಸಕ್ಕೆ ತೆರಳುವುದೂ ಇದೆ. ಒಟ್ಟಿನಲ್ಲಿ ಇಂತಹ ನಂಬಿಕೆಗಳು ವಿಚಿತ್ರವೆನಿಸಿದರೂ ಇಡೀ ಊರಿಗೆ ಊರೇ ಇಂತಹ ಕಟ್ಟಳೆ ಪಾಲಿಸುತ್ತಿರುವುದು ವಿಶೇಷವೇ ಸರಿ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: