• Home
  • »
  • News
  • »
  • uttara-kannada
  • »
  • Siddapur Stone Bridge: ಉತ್ತರ ಕನ್ನಡದ ಈ ಬೃಹತ್ ಕಲ್ಲಿನ ಸೇತುವೆ ನಿರ್ಮಿಸಿದ್ದಾದ್ರೂ ಯಾರು!?

Siddapur Stone Bridge: ಉತ್ತರ ಕನ್ನಡದ ಈ ಬೃಹತ್ ಕಲ್ಲಿನ ಸೇತುವೆ ನಿರ್ಮಿಸಿದ್ದಾದ್ರೂ ಯಾರು!?

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಸುಮಾರು 60 ಉದ್ದದ ಈ ನೈಸರ್ಗಿಕ ಸೇತುವೆ ಪಕ್ಕದಲ್ಲೇ ಭೂತರಾಜ ಹಾಗೂ ಚೌಡೇಶ್ವರಿಯ ಸನ್ನಿಧಾನವೂ ಇದೆ. ಹತ್ತಿರದಲ್ಲೇ ಇರೋ ಜೋಗ ಜಲಪಾತಕ್ಕೆ ಬರೋ ಅರ್ಧ ಪ್ರತಿಶತಃ ಪ್ರವಾಸಿಗರು ಇಲ್ಲಿಗೂ ಬಂದು ಹೋಗ್ತಾರೆ.

  • Share this:

    ಏಕಶಿಲಾ ವಿಗ್ರಹಗಳನ್ನ ನೋಡಿದ್ದೀವಲ್ಲ, ಆದ್ರೆ ಇಲ್ಲೊಂದು ಏಕಶಿಲಾ ಸೇತುವೆಯಿದೆ. ಅಚ್ಚರಿ ಅಂದ್ರೆ ಹೀಗೆ ಹಾಸಿಕೊಂಡಿರುವ ಈ ಸೇತುವೆಯನ್ನು (Natural Bridge)  ಯಾರೂ ಹೊತ್ತು ತಂದು ಹಾಕಿಲ್ಲ, ಬದಲಿಗೆ ಅದಾಗಿಯೇ ನಿರ್ಮಾಣವಾಗಿದೆ ಈ ನೈಸರ್ಗಿಕ ಸೇತುವೆ. ಇಂತಹ ನೈಸರ್ಗಿಕ ಸೇತುವೆ ಇರೋದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಆಡುಕಟ್ಟಾದ ಮುಸವಳ್ಳಿಯಲ್ಲಿ. ಇದು ಉತ್ತರ ಕನ್ನಡ ಜಿಲ್ಲೆಯ (Uttara Kannada) ಸಿದ್ದಾಪುರ - ಶಿವಮೊಗ್ಗದ ಗಡಿಭಾಗದ ಹಳ್ಳಿಯೂ ಹೌದು. ದೇಶದಲ್ಲಿ ನಾಲ್ಕೇ ನಾಲ್ಕು ನೈಸರ್ಗಿಕ ಸೇತುವೆಗಳಿದ್ದು, ಅದರಲ್ಲಿ ಇದೂ ಒಂದು ಎನ್ನಲಾಗಿದೆ. ಅದರಲ್ಲೂ ಕರ್ನಾಟಕದಲ್ಲಿರುವ ಏಕೈಕ ನೈಸರ್ಗಿಕ ಸೇತುವೆಯಿದು.


    ಸುಮಾರು 60 ಉದ್ದದ ಈ ನೈಸರ್ಗಿಕ ಸೇತುವೆ ಪಕ್ಕದಲ್ಲೇ ಭೂತರಾಜ ಹಾಗೂ ಚೌಡೇಶ್ವರಿಯ ಸನ್ನಿಧಾನವೂ ಇದೆ. ಹತ್ತಿರದಲ್ಲೇ ಇರೋ ಜೋಗ ಜಲಪಾತಕ್ಕೆ ಬರೋ ಅರ್ಧ ಪ್ರತಿಶತಃ ಪ್ರವಾಸಿಗರು ಇಲ್ಲಿಗೂ ಬಂದು ಹೋಗ್ತಾರೆ.


    ಇದನ್ನೂ ಓದಿ: Dharavati Ranga Temple: ಈ ದೇಗುಲದಲ್ಲಿ ಚಪ್ಪಲಿಯಲ್ಲಿ ಹೊಡೆದುಕೊಂಡ್ರೆ ಒಳ್ಳೇದಾಗುತ್ತಂತೆ!


    ಆದ್ರೆ ಕಳೆದ ವರ್ಷದ ಮಳೆಗೆ ತತ್ತರಿಸಿ ಹೋಗಿದ್ದ ಈ ನೈಸರ್ಗಿಕ ಸೇತುವೆ ಒಂಚೂರು ಬಿರುಕು ಬಿಟ್ಟಿತ್ತು. ಆದರೂ ಸದ್ಯ ಗಟ್ಟಿಮುಟ್ಟಾಗಿಯೇ ಇದೆಯೆನ್ನಿ. ಈ ಕಲ್ಲು ಸಂಕದ ಮೇಲೆ ಹಿಂದೆ ಎತ್ತಿನಗಾಡಿ ಅಡ್ಡಾಡುತ್ತಿದ್ವಂತೆ ಅಂತಾರೆ ಇಲ್ಲಿನ ಹಿರಿಯರು.


    ಇದನ್ನೂ ಓದಿ: Khapri God: ಮದ್ಯ, ಸಿಗರೇಟು ಇವೇ ಖಾಫ್ರಿ ದೇವರ ನೈವೇದ್ಯ! ಜೋಯ್ಡಾದಲ್ಲಿ ಜಾತ್ರೆ


    ಈ ಸೇತುವೆಯನ್ನ ತಲುಪಬೇಕಾದ್ರೆ ಸಿದ್ದಾಪುರದ ಕಾರ್ಗಲ್​ಗೆ ಹೋಗೋ ದಾರಿಯಲ್ಲಿ ಆಡುಕಟ್ಟಾ ಗ್ರಾಮ ತಲುಪೋ ಮುನ್ನ ಸ್ವಲ್ಪ ದೂರದಲ್ಲೇ ಕಾಡಿನೊಳಗೆ ಈ ಸೇತುವೆಯಿದೆ. ಮತ್ತೇಕೆ ತಡ? ಸ್ವಚ್ಛ ನೀರು, ಪವಿತ್ರ ದೇವಸ್ಥಾನ ನಡುವೆ ಇರೋ ಈ ನೈಸರ್ಗಿಕ ಸೇತುವೆಯನ್ನ ನೀವೂ ಒಂದ್ಸಲ ನೋಡಿಬನ್ನಿ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: