Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಶಿವರಾತ್ರಿ ಬಳಿಕ ನೀರಿನ ಅಬ್ಬರ ಇಳಿಕೆಯಾಗ್ತಿದ್ದಂತೆ ಇಲ್ಲಿನ ಹವ್ಯಕರು ಈ ಭಸ್ಮವನ್ನು ನೀರಿಗಿಳಿದು ಸಂಗ್ರಹಿಸುತ್ತಾರೆ.

  • Share this:

ಉತ್ತರ ಕನ್ನಡ: ನೀರೊಳಗೆ ಕೈ ಹಾಕಿ ತೆಗೆದ್ರೆ ಸಿಗುತ್ತೆ ನೋಡಿ ಭಸ್ಮ. ಅರೇ! ಹೀಗೆ ನ್ಯಾಚುರಲ್ ಆಗಿ ಹೇಗೆ ಸಿಗುತ್ತೆ  ಭಸ್ಮ ಅಂದ್ಕೊಂಡ್ರಾ? ಹೌದು, ಭಸ್ಮ ನ್ಯಾಚುರಲ್ (Natural Vibhuti) ಆಗಿ ಸಿಗುತ್ತಿದೆ.‌ ಆದ್ರೆ ಎಲ್ಲ ನದಿಯಲ್ಲಲ್ಲ. ಬದಲಿಗೆ ಉತ್ತರ ಕನ್ನಡದ (Uttara Kannada News) ಅಘನಾಶಿಯಲ್ಲಷ್ಟೇ. ಹಾಗಂತ ಪೂರ್ತಿ ಅಘನಾಶಿನಿ (Aghanashini River) ಹುಡುಕೋಕೆ ಹೋಗ್ಬೇಡ್ರಿ. ಅದು ಎಲ್ಲಿ ಸಿಗೋದು ಅಂತಾ ನಾವು ಹೇಳ್ತೀವಿ ನೋಡಿ.


ನದಿಯಲ್ಲಿ ಸಿಗುತ್ತೆ ವಿಭೂತಿ
ಹೌದು, ಉತ್ತರ ಕನ್ನಡದ ಶಿರಸಿ- ಸಿದ್ದಾಪುರ ತಾಲೂಕಿನ ಗಡಿಪ್ರದೇಶ ಗಿಳಲಗುಂಡಿಯಲ್ಲಿ ಇಂತಹ ಅದ್ಭುತ ನದಿ ಒಡಲಲ್ಲಿ ಕಂಡು ಬರ್ತವೆ. ಹಾಗಂತ ಅಘನಾಶಿನಿ ಪೂರಾ ಈ ಭಸ್ಮ ದೊರೆಯುವುದಿಲ್ಲ. 117 ಕಿಲೋಮೀಟರ್ ಹರಿಯುವ ಈ ನದಿಯಲ್ಲಿ ಕೇವಲ ಈಶ್ವರ ಗೌಡ ಎಂಬುವರ ತೋಟದ ಬದಿಯ ಒಂದು ಕೊಳ್ಳದಲ್ಲಿ ಮಾತ್ರ ಈ ಭಸ್ಮ ಸಿಗುತ್ತೆ.




ಸಂಧ್ಯಾವಂದನೆಗೆ ಇದೇ ಭಸ್ಮದ ಬಳಕೆ!
ಸುಮಾರು ಒಂದು ತಾಸು ದೆರಕು, ರೇತಿ ಬೇರ್ಪಡಿಸಿ ಈ ಭಸ್ಮ ಪಡೆಯಲಾಗುತ್ತದೆ. ಅದನ್ನು ದೇವರ ಪ್ರಸಾದವಾಗಿ ಸಂಗ್ರಹಿಸಿ ಇಡಲಾಗುತ್ತದೆ. ಈ ಭಾಗದ ಹವ್ಯಕರು ಸಂಧ್ಯಾವಂದನೆಗೆ ಹಾಗೂ ಬೇರೆಯವರು ತಿಲಕವಾಗಿ ಇದನ್ನು ಉಪಯೋಗಿಸುತ್ತಾರೆ.




ಪುರಾಣ ಏನನ್ನುತ್ತೆ?
ಪುರಾಣ ಪ್ರಕಾರ ಬೇಟೆಗೆ ಬಂದ ವೆಂಕಟರಮಣ ಇಲ್ಲಿ ಶಿಲಾಸನದಲ್ಲಿ ದಣಿದು ಮಲಗಿದ್ದ. ಅವನ ಹಸಿವು ನೀಗಿಸಲು ಬ್ರಹ್ಮ ಆಕಳಾಗಿಯೂ, ರುದ್ರನು ಕರುವಾಗಿ ಅವನ ಸೇವೆ ಮಾಡತೊಡಗಿದರು. ಆಗ ಕರುವಿನ ಬಾಯಿಗೆ ಕೆಚ್ಚಲಿಂದ ಬಂದ ಹಾಲಿನ ತುಣುಕುಗಳು ಪರಮಾತ್ಮನ ದೇಹವನ್ನು ತಾಗಿ ಅಭಿಷೇಕವಾಗಿ ನೀರಿನಲ್ಲಿ ಒಂದೇ ಕಡೆ ಸಂಗ್ರಹವಾಯಿತು.


ಇದನ್ನೂ ಓದಿ: Uttara Kannada Viral News: ನಾಯಿ ಉಳಿಸಲು ಪ್ರಾಣಿ ಪ್ರಿಯರ ಹರಸಾಹಸ, ಇದು ರೀಲ್‌ ಅಲ್ಲ ರಿಯಲ್‌!




ಮುಂದೆ ಅದೇ ಘನೀಕೃತವಾಗಿ ಈಗ ಭಸ್ಮದ ರೂಪದಲ್ಲಿ ದೊರೆಯುತ್ತಿದೆ ಅನ್ನೋ ನಂಬಿಕೆಯಿದೆ. ಶಿವರಾತ್ರಿ ಬಳಿಕ ನೀರಿನ ಅಬ್ಬರ ಇಳಿಕೆಯಾಗ್ತಿದ್ದಂತೆ ಇಲ್ಲಿನ ಹವ್ಯಕರು ಈ ಭಸ್ಮವನ್ನು ನೀರಿಗಿಳಿದು ಸಂಗ್ರಹಿಸುತ್ತಾರೆ. ಹೀಗೆ ಮಳೆಗಾಲ ತನಕ ಎರಡು ಮೂರು ತಿಂಗಳ ಕಾಲ ಭಸ್ಮ ತೆಗೆಯುತ್ತಾರೆ.


ಏನಿರಬಹುದು?
ಕ್ಯಾಲ್ಸಿಯಂ ಸಂಯುಕ್ತದಂತೆ ಬಿಳಿ ಬಣ್ಣದಲ್ಲಿರುವ ಈ ಕಲ್ಲು ಭಸ್ಮ ಅನ್ನೋದಾಗಿ ಜನ ಸ್ವೀಕರಿಸಿದ್ದಾರೆ.‌ ಹಾಲಿನ ಪರಿಮಳ ಹೊಂದಿರುವ ಇದನ್ನ ಸ್ಥಳೀಯರು ಗಾಢವಾಗಿ ನಂಬುತ್ತಾರೆ.


ಇದನ್ನೂ ಓದಿ: Children Swimming: ಈ ಹಳ್ಳಿ ಮಕ್ಕಳು ಹೇಗೆ ಈಜ್ತಾರೆ ನೋಡಿ, ಮಜಾ ಅಂದ್ರೆ ಇದು ಕಣ್ರೀ!

top videos


    ಪ್ರಕೃತಿಯ ವಿಸ್ಮಯವೋ, ದೇವರ ಪವಾಡವೋ ಒಟ್ಟಿನಲ್ಲಿ ಶಿಲೆಯಂತೆ ಕಾಣುವ ಈ ಬಿಳಿ ಪದರ ಜನರ ನಂಬಿಕೆಗೆ ಇಂಬು ನೀಡುತ್ತಾ ಬಂದಿದೆ.

    First published: