Uttara Kannada: ವೆಂಕಟೇಶ್ವರನಿಗೆ ಪುಷ್ಪರಥೋತ್ಸವ ಸಂಭ್ರಮ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮಾಘ ಮಾಸ ದೇವರಿಗೆ ಇಷ್ಟದ ಮಾಸವಾದ್ದರಿಂದ ಈ ದಿನಗಳಲ್ಲಿ ರಥೋತ್ಸವ ನಡೆಸಲಾಗುತ್ತೆ.  ಈ ರಥೋತ್ಸವದಲ್ಲಿ ಮಕ್ಕಳು, ಹಿರಿಯರೂ ಎಲ್ಲರೂ ತೇರೆಳೆದರು.

  • News18 Kannada
  • 3-MIN READ
  • Last Updated :
  • Kumta, India
  • Share this:

    ಉತ್ತರ ಕನ್ನಡ: ಎಲ್ಲೆಡೆ ಗೋವಿಂದ ನಾಮಸ್ಮರಣೆ, ಭಕ್ತಿಸಾಗರದಲ್ಲಿ ಮಿಂದೆದ್ದ ಇಡೀ ಪೇಟೆ. ಹಾರ ತೋರಣಗಳು, ನಾದಸ್ವರ, ರಥಬೀದಿಯಲ್ಲಿ (Ratha Beedi) ಚಂಡೆಯ ಧ್ವನಿಯಲ್ಲಿ ಸಾಗುತ್ತಿರುವ ಮೆರವಣಿಗೆ. ಇದು ವೆಂಕಟೇಶ್ವರನ ಪುಷ್ಪರಥೋತ್ಸವದ (Venkateshwar Rathotsav) ಸಂಭ್ರಮ.


    ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ 500 ವರ್ಷಗಳ ಹಿಂದೆ ಸನ್ಯಾಸಿ ದೇವರು ಅಥವಾ ಬಾಗಿಲು ಜಟಿಗನಿಂದ ಪ್ರತಿಷ್ಠಾಪನೆಗೊಂಡ ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಮಾಘ ಶುದ್ಧ ಸಪ್ತಮಿಯಂದು ರಥೋತ್ಸವ ನಡೆಯುತ್ತೆ. ಅದರ ಅಂಗವಾಗಿ ಪಲ್ಲಕ್ಕಿ ಹಾಗೂ ಪುಷ್ಪ ರಥೋತ್ಸವ ಅದ್ದೂರಿಯಾಗಿ ನೆರವೇರಿತು.


    ಇದನ್ನೂ ಓದಿ: Uttara Kannada: ಕಲರ್ ಕಲರ್ ಜೋಕಾಲಿ ಮಾಡೋ ಗೃಹಿಣಿಯ ಸಕ್ಸಸ್ ಸ್ಟೋರಿ


    ಪರ್ತಗಾಳಿ ಮಠಾಧೀಶರಿಂದ ಪೂಜೆ
    ಸಂಜೆ 7:30ಕ್ಕೆ ಸಾಮೂಹಿಕ ವಿಷ್ಣು ಸಹಸ್ರನಾಮದೊಂದಿಗೆ ಕಾರ್ಯಕ್ರಮ ಆರಂಭವಾಯಿತು. 9 ಗಂಟೆ ವೇಳೆಗೆ ದೇವರು ರಥಾರೂಢನಾದ. ಪರ್ತಗಾಳಿ ಮಠಾಧೀಶರು ಪೂಜೆ ನೆರವೇರಿಸಿದ ನಂತರ ರಥ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.




    ಇದನ್ನೂ ಓದಿ: Uttara Kannada: ಆಟೋ ಸಾರಥಿಯಾಗಿ ಬದುಕು ಕಟ್ಟಿಕೊಂಡ ಮಹಿಳೆ


    5,000 ಜನರಿಗೆ ಅನ್ನದಾನ
    ಮಾಘ ಮಾಸ ದೇವರಿಗೆ ಇಷ್ಟದ ಮಾಸವಾದ್ದರಿಂದ ಈ ದಿನಗಳಲ್ಲಿ ರಥೋತ್ಸವ ನಡೆಸಲಾಗುತ್ತೆ.  ಈ ರಥೋತ್ಸವದಲ್ಲಿ ಮಕ್ಕಳು, ಹಿರಿಯರೂ ಎಲ್ಲರೂ ತೇರೆಳೆದರು. ಭಕ್ತಿ ಭಾವವೇ ತುಂಬಿದ್ದ ಈ ರಥೋತ್ಸವದಲ್ಲಿ ಸುಮಾರು 5,000 ಜನರಿಗೆ ಅನ್ನದಾನ ಮಾಡಲಾಯಿತು. ರಥದಲ್ಲಿ ವಿರಾಜಮಾನರಾದ ದೇವರನ್ನು ಕಂಡು ಭಕ್ತರು ಕಣ್ತುಂಬಿಕೊಂಡರು.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: