ಎದುರುಗಡೆಯಿಂದ ನೋಡೋಕೆ ಥೇಟ್ ಕೇರಳ ಶೈಲಿಯ ಅರಮನೆ. ಆದ್ರೆ ಇದು ಅರಮನೆಯಲ್ಲ, ದೇಗುಲ! ಅದೂ ಶ್ರೀ ವೆಂಕಟೇಶ್ವರನ ದೇಗುಲ! ಕರ್ನಾಟಕದ ತಿರುಪತಿ (Tirupati Of Karnataka) ಎಂದೇ ಹೇಳಲಾಗೋ ಉತ್ತರ ಕನ್ನಡ ಜಿಲ್ಲೆಯ (Temple's In Uttara Kannada) ಶಿರಸಿಯ ಮಂಜುಗುಣಿಯ (Manjaguni Temple Sirs) ವೆಂಕಟೇಶ್ವರನ ಚೆಂದದ ಅರಮನೆ ಅರ್ಥಾತ್ ದೇಗುಲದ ವೈಭವವಿದು. ವಿಷ್ಣುವನ್ನು ಆರಾಧಿಸೋ ವೈಕುಂಠ ಏಕಾದಶಿಯ (Vaikuntha Ekadashi Manjaguni) ವೃತವನ್ನು ಈ ದೇಗುಲದಲ್ಲಿ ಆಚರಿಸೋಕೆ ಭಕ್ತರು ಹೆಚ್ಚು ಆಸಕ್ತಿ ವಹಿಸುತ್ತಾರೆ.
ಈ ದೇಗುಲ ಒಳಹೊಕ್ಕಂತೆ ಮೊದಲಿಗೆ ದಾಸ ಮಾರುತಿಯ ದರ್ಶನವಾಗುತ್ತೆ. ಒಳಗೆ ಹೋದಂತೆ ಶಿಲ್ಪಕಲಾ ಲೋಕದ ಅದ್ಭುತವೇ ತೆರೆದುಕೊಳ್ಳುತ್ತೆ. ವಿಷ್ಣು ಅಲಂಕಾರ ಪ್ರಿಯ ಆಗಿರೋದಕ್ಕೇ ಈ ದೇಗುಲ ನೋಡೋಕೂ ಇಷ್ಟು ಸುಂದರವಾಗಿದೆ ಅಂತಾರೆ ಭಕ್ತರು.
ಇದನ್ನೂ ಓದಿ: Success Story: ಮಹಿಳೆಯೇ ಇಲ್ಲಿ ಮೇಸ್ತ್ರಿ, ಪುರುಷರನ್ನು ಮೀರಿಸಿದ ಧೀರೆ!
ಸಹ್ಯಾದ್ರಿ ತಪ್ಪಲಲ್ಲಿರುವ ದೇವಸ್ಥಾನ
ಹರಿಭಕ್ತರಿಗೆಲ್ಲ ಪವಿತ್ರ ದಿನವಾದ ವೈಕುಂಠ ಏಕಾದಶಿಯಂದು ಶ್ರೀಕ್ಷೇತ್ರ ಮಂಜುಗುಣಿಗೆ ಸಾವಿರಾರು ಭಕ್ತರು ಆಗಮಿಸ್ತಾರೆ. ಸಹ್ಯಾದ್ರಿ ತಪ್ಪಲಲ್ಲಿರೋ ಈ ಈ ಪವಿತ್ರ ಕ್ಷೇತ್ರದ ದರ್ಶನವನ್ನು ನೀವೂ ಪಡೆಯಬಹುದು.
ಇದನ್ನೂ ಓದಿ: Uttara Kannada: ಕಂಬಳದ ಬಾರುಕೋಲು ಇಲ್ಲೇ ತಯಾರಾಗುತ್ತೆ!
ಈ ದೇವಸ್ಥಾನಕ್ಕೆ ಬರೋದು ಹೀಗೆ
ಮಂಜುಗುಣಿ ದೇವಸ್ಥಾನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಶಿರಸಿಗೆ ಬಂದು ಕುಮಟಾ ಮಾರ್ಗವಾಗಿ 25 ಕಿಲೋಮೀಟರ್ ಬಂದರೆ ನಿಷ್ಕಲ್ಮಶ ಪರಿಸರದಲ್ಲಿ ಅಲಂಕೃತನಾಗಿರೋ ಮಹಾವಿಷ್ಣುವಿನ ದರ್ಶನ ನಿಮಗೆ ಸಿಗುತ್ತೆ. ನಿಮ್ಮ ದೇಗುಲ ದರ್ಶನ ಪಟ್ಟಿಗೆ ಮಂಜುಗುಣಿಯನ್ನೂ ಸೇರಿಸ್ಕೋತಿರಲ್ಲ!
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ