Uttara Kannada: ನಿಮ್ಮಲ್ಲೂ ಈ ಪ್ರತಿಭೆಯಿದೆಯೇ? ಯುವ ಉತ್ಸವಕ್ಕೆ ಈಗ್ಲೇ ಅರ್ಜಿ ಹಾಕಿ

ಉತ್ತರ ಕನ್ನಡ ಜಿಲ್ಲೆಯ ಯುವ ಪ್ರತಿಭೆಗಳಿಗೊಂದು ಅತ್ಯುತ್ತಮ ವೇದಿಕೆ ಇಲ್ಲಿದೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಗುರುತಿಸಿಕೊಳ್ಳುವ ಅವಕಾಶ ನಿಮಗಾಗಿಯೇ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಉತ್ತರ ಕನ್ನಡ: ಜಿಲ್ಲಾಡಳಿತ ಹಾಗೂ ನೆಹರೂ ಯುವ ಕೇಂದ್ರದ ವತಿಯಿಂದ ಜಿಲ್ಲಾ ಮಟ್ಟದ ‘ಯುವ ಉತ್ಸವ 22'ಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಹೀಗಾಗಿ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಕಳುಹಿಸುವ ಮೂಲಕ ಜಿಲ್ಲೆಯ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಯುವಜನತೆಗೆ ಇದೊಂದು ಅದ್ಭುತ ಅವಕಾಶವಾಗಿದ್ದು, ‘ಯುವ ಉತ್ಸವ'ದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕುರಿತು ವಿವರ ಇಲ್ಲಿದೆ.

    ಯಾವೆಲ್ಲ ಸ್ಪರ್ಧೆಗಳು ನಡೆಯಲಿವೆ?
    ‘ಯುವ ಉತ್ಸವ‘ ಕಾರ್ಯಕ್ರಮದಲ್ಲಿ ಪೇಂಟಿಂಗ್, ಗೀತಾ ರಚನೆ, ಗಾಯನ, ಮೊಬೈಲ್ ಫೋಟೋಗ್ರಾಫಿ, ಭಾಷಣ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಈ ವಿಭಾಗಗಳಲ್ಲಿ ಕಾರ್ಯಕ್ರಮ ನಡೆಯಲಿದೆ.

    ಭಾಷೆ ಆಯ್ಕೆ ಹೇಗೆ
    ಸ್ಪರ್ಧೆಯು ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಮೂರೂ ಭಾಷೆಯಲ್ಲೂ ಜರುಗಲಿವೆ. ಅಭ್ಯರ್ಥಿಗಳು ಇದರಲ್ಲಿ ಯಾವುದಾದರೂ ಒಂದು ಭಾಷೆಯನ್ನ ಆಯ್ಕೆ ಮಾಡಬಹುದಾಗಿದೆ.

    ಇದನ್ನೂ ಓದಿ: Sirsi Red Fort: ಶಿರಸಿಯಲ್ಲೇ ಇದೆ ಕೆಂಪುಕೋಟೆ! ಒಳಗಿದ್ದಾನೆ ಗಣಪ!

    ಅರ್ಜಿ ಸಲ್ಲಿಕೆ ವಿಧಾನ
    ಆಸಕ್ತ ಅಭ್ಯರ್ಥಿಗಳು  ವೆಬ್ ಸೈಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸುವುದಾಗಿದೆ. ಈ ಯುವ ಉತ್ಸವ 2022ರಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ಇಲ್ಲಿ ಕ್ಲಿಕ್ ಮಾಡಿ

    ವಯೋಮಿತಿ ಎಷ್ಟಿರಬೇಕು?
    ಆಸಕ್ತ ಉತ್ತರ ಕನ್ನಡದ ಯುವ ಜನರು 15 ರಿಂದ 29 ವರ್ಷ ವಯೋಮಿತಿಯವರೇ ಆಗಿರಬೇಕು ಎಂದು ನಿಯಮ ರೂಪಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು?
    ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟಂಬರ್ 16 ಕೊನೆಯ ದಿನಾಂಕವಾಗಿರುತ್ತದೆ. ಈ ದಿನಾಂಕದ ಒಳಗೇ ನೀವೂ ಸಹ ಅರ್ಜಿ ಹಾಕಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?
    ನೆಹರೂ ಯುವ ಕೇಂದ್ರದ ದೂರವಾಣಿ ಸಂಖ್ಯೆಗಳಾದ 08382226965 ಹಾಗೂ 9449995195 ಇವುಗಳಿಗೆ ಕರೆ ಮಾಡಿ ಆಸಕ್ತರು ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

    ಇದನ್ನೂ ಓದಿ: Free Health Check-up: ಉಚಿತವಾಗಿ ಕ್ಯಾನ್ಸರ್, ಹೃದ್ರೋಗ ತಪಾಸಣೆ; ಎಲ್ಲಿ, ಏನು, ಎತ್ತ?

    ಇನ್ನೇಕೆ ತಡ? ಈಗಲೆ ಅರ್ಜಿ ಹಾಕಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ. ನಿಮ್ಮೊಳಗಿನ ಪ್ರತಿಭೆಗೆ ಅವಕಾಶ ಕಲ್ಪಿಸಿ! ಭವಿಷ್ಯದಲ್ಲಿ ಮಹೋನ್ನತ ಕಲಾವಿದರಾಗಲು ನಿಮಗೆ ಇದು ವೇದಿಕೆ ಒದಗಿಸಬಹುದು.
    Published by:ಗುರುಗಣೇಶ ಡಬ್ಗುಳಿ
    First published: