ಕಾರವಾರ: ವಾವ್! ಐಫೆಲ್ ಟವರ್, ಹಂಪಿಯ ಏಕಶಿಲಾ ರಥ, ಕೇದಾರನಾಥ ಮಂದಿರ, ಗೇಟ್ ವೇ ಆಫ್ ಇಂಡಿಯಾ. ಗಾತ್ರದಲ್ಲಿ ಪುಟ್ಟದಾದ್ರೂ ಕಣ್ಣಿಗಂತೂ ನಿಜವೇನೋ ಅನ್ನಿಸ್ಬಿಡುತ್ತೆ. ಅಷ್ಟರ ಮಟ್ಟಿಗೆ ಸ್ಟಿಕ್ನಲ್ಲಿ ಈ ಮಟ್ಟಿಗೆ ಜಗದ್ವಿಖ್ಯಾತಿ ಸ್ಮಾರಕಗಳು ಕಣ್ಮನ ಸೆಳೆಯುತ್ತೆ. ಜೊತೆಗೆ ಕಲಾವಿದನ (Uttara Kannada Artist) ಕಲಾ ನೈಪುಣ್ಯತೆಗೆ ಈ ಪುಟ್ಟ ಗಾತ್ರದ ಸ್ಮಾರಕಗಳ ತದ್ರೂಪಿ ಸಾಕ್ಷಿ ನುಡಿಯುತ್ತಿದೆ.
ಯೆಸ್, ಹೀಗೆ ಕಾಫಿ ಸ್ಟಿಕ್ಗಳಿಂದ ಇಂತಹ ಅತ್ಯಮೋಘ ಕಲಾಕೃತಿಗಳನ್ನ ರಚಿಸೋ ಇವರು ಉತ್ತರ ಕನ್ನಡ ಕಾರವಾರದ ಪ್ರಶಾಂತ ಗಡ್ಕರ. ಪಿಎಂಟಿ ಕ್ವಾಟರ್ಸ್ ಸಮೀಪದ ನಿವಾಸಿ ಆಗಿರುವ ಪ್ರಶಾಂತ ಗಡ್ಕರ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಕಾಫಿ, ಚಹಾಗೆ ಸಕ್ಕರೆ ಬೆರೆಸಿಕೊಳ್ಳಲು ನೀಡುವ ಕಾಫಿ ಸ್ಟಿಕ್ ಕಡ್ಡಿಗಳನ್ನೇ ಹೀಗೆ ತನ್ನ ಕಲಾ ನೈಪುಣ್ಯತೆಗೆ ಬಳಸಿಕೊಂಡಿದ್ದಾರೆ.
ಅಬ್ಬಬ್ಬಾ! ಅದ್ಭುತ
ಈ ಮೂಲಕ ಎಂತಹಾ ಅದ್ಭುತ ಅನ್ನೋವಂತಹ ಸ್ಮಾರಕಗಳ ತದ್ರೂಪವನ್ನ ಪುಟ್ಟದಾಗಿ ರಚಿಸಿ ಸೈ ಎನಿಸಿಕೊಂಡಿದ್ದಾರೆ. ಬಿದಿರಿನಿಂದ ತಯಾರಿಸುವ ಈ ಕಾಫಿ ಸ್ಟಿಕ್ ಬಳಕೆ ಮಾಡಿ ಐಫೆಲ್ ಟವರ್, ಹಂಪಿಯ ಏಕಶಿಲಾ ರಥ, ಕೇದಾರನಾಥ ಮಂದಿರ, ಅಮೃತಸರದ ಸ್ವರ್ಣ ಮಂದಿರ, ಮುಂಬೈನ ಗೇಟ್ ವೇ ಆಫ್ ಇಂಡಿಯಾ, ಆಗ್ರಾದ ತಾಜ್ಮಹಲ್ ಒಳಗೊಂಡು ಪ್ರಖ್ಯಾತ ತಾಣಗಳ ಕಲಾಕೃತಿಗಳನ್ನು ಸಿದ್ಧಪಡಿಸಿದ್ದಾರೆ.
ಅಪರೂಪದ ಕಲಾ ಚಾತುರ್ಯ
ಸದ್ಯ ಪ್ರಶಾಂತ್ ಅವರು ಅಯೋಧ್ಯೆಯ ರಾಮಮಂದಿರ ನಿರ್ಮಾಣದಲ್ಲಿ ತೊಡಗಿದ್ದು, ಸ್ವ ಉದ್ಯಮದಲ್ಲಿರುವ ಅವರು ಬಿಡುವಿನ ವೇಳೆಯಲ್ಲಿ ಇಂತಹ ಕಲಾಕೃತಿಗಳನ್ನು ರಚಿಸುತ್ತಾರೆ. ಒಂದು ಕಲಾಕೃತಿ ತಯಾರಿಸಲು ಒಂದು- ಒಂದೂವರೆ ತಿಂಗಳು ಶ್ರಮವಹಿಸುತ್ತಾರೆ.
ಇದನ್ನೂ ಓದಿ: Hanuman Temple: ನುಗ್ಗಿಕೇರಿಯ ಈ ಆಂಜನೇಯ ಬಲಭೀಮ ಎಂದೇ ಫೇಮಸ್!
ಪ್ರಾರಂಭದಲ್ಲಿ ಪ್ರಶಾಂತ ಬೆಂಕಿ ಕಡ್ಡಿಗಳನ್ನು ಬಳಸಿ ಪ್ರಖ್ಯಾತ ಕಲಾಕೃತಿಯನ್ನು ತಯಾರಿಸುವ ಪ್ರಯತ್ನವನ್ನು ಮಾಡಿ ಯಶಸ್ವಿಯಾಗಿದ್ದರು. ಬಳಿಕ ಹೋಟೆಲ್ಗೆ ಹೋದಾಗ ಅಲ್ಲಿ ನೀಡಿದ್ದ ಕಾಫಿ ಸ್ಟಿಕ್ಗಳನ್ನ ಬಳಸಿ ಇಂತಹ ಅಪರೂಪದ ಕಲಾ ಚಾತುರ್ಯತೆಯನ್ನು ಪ್ರಶಾಂತ್ ಅವರು ಮೆರೆದಿದ್ದಾರೆ.
ಅಷ್ಟೇ ಅಲ್ದೇ, ತನಗೆ ಬೇಕಾದ ಕಾಫಿ ಸ್ಟಿಕ್ ಗಳನ್ನು ಆನ್ಲೈನ್ನಿಂದಾನೂ ತರಿಸಿಕೊಳ್ಳುತ್ತಾರೆ. 500 ಸ್ಟಿಕ್ಗೆ 350 ರೂ. ಖರೀದಿಸುತ್ತಾರೆ. ಜೊತೆಗೆ ಫ್ಲೆಕ್ಸ್ ಗಮ್ಗಳನ್ನು ತರಿಸಿಕೊಂಡು ಇಂತಹ ಕಲಾಕೃತಿಗಳಿಗೆ ಜೀವ ತುಂಬುತ್ತಾರೆ.
ಇದನ್ನೂ ಓದಿ: Sharavati Hanging Bridge: ನದಿಯ ಮೇಲಿನ ತೂಗುಯ್ಯಾಲೆ, ಇಲ್ಲಿ ನಿಂತ್ರೆ ಗಾಳಿಯಲ್ಲೇ ತೇಲಿದಂತಾಗುತ್ತೆ!
ಖರ್ಚು ಎಷ್ಟೇ ಬಂದ್ರೂ ಇಷ್ಟಪಟ್ಟು ಇಂತಹ ಕಲಾಕೃತಿಗಳ ರಚನೆಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಒಟ್ಟಿನಲ್ಲಿ ಸ್ವಂತ ಉದ್ಯೋಗದ ನಡುವೆಯೂ ಇಂತಹ ಅಪರೂಪದ ಕಲೆಯ ಮೂಲಕ ಪ್ರಶಾಂತ ಗಡ್ಕರ್ ಹೆಸರುವಾಸಿಯಾಗುತ್ತಿರುವುದು ಖುಷಿಯ ಸಂಗತಿಯೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ