• Home
  • »
  • News
  • »
  • uttara-kannada
  • »
  • Uttara Kannada Viral Video: ವಯೋವೃದ್ಧರ ಮಸ್ತ್ ಮನರಂಜನೆ! ಬಾಲ್ಯ ಮತ್ತೆ ನೆನಪಾಯ್ತು!

Uttara Kannada Viral Video: ವಯೋವೃದ್ಧರ ಮಸ್ತ್ ಮನರಂಜನೆ! ಬಾಲ್ಯ ಮತ್ತೆ ನೆನಪಾಯ್ತು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

60 ಮೇಲ್ಪಟ್ಟವರಿಗೆ ನಡೆದ ಈ ಕ್ರೀಡಾಕೂಟದಲ್ಲಿ ಸುತ್ತಲಿದ್ದ ಯುವಕರು ಮುಖಮುಖ ನೋಡಿ ನಿಲ್ಲುವಂತಿತ್ತು.

  • Share this:

    ಕಾರವಾರ: ಇಳಿವಯಸ್ಸಾದರೂ ಇಳಿಯದ ಉತ್ಸಾಹ. ಯುವಕರನ್ನೂ ನಾಚಿಸುವಂತಹ ಹುರುಪು! ಹೀಗಾಗಿಯೇ ನೋಡಿ ಓಟ, ನಡಿಗೆ, ಮ್ಯೂಸಿಕಲ್ ಚೇರ್, ರಿಂಗ್ ಎಸೆತ.. ಹೀಗೆ ಯಾವ ಗೇಮ್ ಆದ್ರೆ ಏನಂತೇ? ಈ ಹಿರಿಯರು ವಯಸ್ಸನ್ನೂ ಲೆಕ್ಕಿಸದೇ ಭಾಗವಹಿಸಿದರು. ಮನಸ್ಸೋ ಇಚ್ಛೆ ಕುಣಿದು ನಲಿದರು. ಹೀಗೆ ಹಿರಿಯರೊಳಗಿನ ಪ್ರತಿಭೆ ಹೊರತರಲು ಕಾರಣವಾಗಿದ್ದು ಉತ್ತರ ಕನ್ನಡ ಜಿಲ್ಲೆಯ (Uttara Kannada) ಭಟ್ಕಳದ ಅಂಜುಮನ್ ಶಾಲೆ. ಇಲ್ಲಿದೆ ನೋಡಿ ವಯೋವೃದ್ಧರ ಸಖತ್ ಮನೋರಂಜನೆಯ (Games For Old People) ವಿಡಿಯೋ!


    ಶಿಶು ಕಲ್ಯಾಣ ಇಲಾಖೆ ಸಹಯೋಗದಲ್ಲಿ ಈ ಹಿರಿಯರ ಮನೋರಂಜನಾ ಕೂಟ ಆಯೋಜಿಸಲಾಗಿತ್ತು. 60 ವರ್ಷ ಮೇಲ್ಪಟ್ಟ ಮಹಿಳಾ ಸ್ಪರ್ಧಿಗಳಂತೂ ತುಂಬಾನೇ ಖುಷಿಪಟ್ಟರು.


    ಇದನ್ನೂ ಓದಿ: Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ


    ಇದೇ ನೆಪದಲ್ಲಿ ಕೆಲವರು ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಿದರು. ಸ್ನೇಹಿತರ ಜೊತೆಗೂಡಿ ಶಾಲಾ ದಿನಗಳ ಬಗ್ಗೆ ಮಾತಾಡ್ತಾ, ಆಡುತ್ತಾ ಎಂಜಾಯ್ ಮಾಡಿದರು.


    ಇದನ್ನೂ ಓದಿ: Sirsi Todadevu: ರುಚಿರುಚಿ ತೊಡದೇವು ತಯಾರಿಸಲು ಇವರು ಫೇಮಸ್! ರೆಸಿಪಿನೂ ಇಲ್ಲಿದೆ


    60 ಮೇಲ್ಪಟ್ಟವರಿಗೆ ನಡೆದ ಈ ಕ್ರೀಡಾಕೂಟದಲ್ಲಿ ಸುತ್ತಲಿದ್ದ ಯುವಕರು ಮುಖಮುಖ ನೋಡಿ ನಿಲ್ಲುವಂತಿತ್ತು. ವಯಸ್ಸು 60 ಮೇಲ್ಪಟ್ಟವರಲ್ಲಿ ಒಬ್ರು ಇನ್ನೊಬ್ಬರಿಗಿಂತ ಸ್ಟ್ರಾಂಗ್ ಅಂತಾ ತೋರಿಸಿಕೊಟ್ರು. ಮಹಿಳೆಯರು ಹಾಗೂ ಪುರುಷರು ಎರಡೂ ವಿಭಾಗದಲ್ಲಿ ಹಲವು ಬಗೆಯ ಕಾಂಪಿಟೇಶನ್ ನಡೆದವು. ವೀಕ್ಷಕರ ಚಪ್ಪಾಳೆ ಹಿರಿಯ ನಾಗರಿಕರ ಉತ್ಸಾಹ ಹೆಚ್ಚಿಸಿತು.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: