• Home
  • »
  • News
  • »
  • uttara-kannada
  • »
  • Uttara Kannada Travel Plan: 40 ರೂಪಾಯಿಯಲ್ಲಿ ಇಡೀ ಉತ್ತರ ಕನ್ನಡ ನೋಡಿ!

Uttara Kannada Travel Plan: 40 ರೂಪಾಯಿಯಲ್ಲಿ ಇಡೀ ಉತ್ತರ ಕನ್ನಡ ನೋಡಿ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಕೇವಲ 40 ರೂಪಾಯಿ ಟಿಕೆಟ್ ಪಡೆದರೆ ಸಾಕು, ಇಲ್ಲೆಲ್ಲ ಸುತ್ತಾಡಿ ಎಂಜಾಯ್ ಮಾಡಬಹುದು. ಮಕ್ಕಳಿಗಂತೂ ಆಟವಾಡಲು ಸೂಕ್ತ ಸ್ಥಳವಿದು. 35 ಎಕರೆಯ ಈ ಉದ್ಯಾನವನವು ಶಿರಸಿ ನಾಗರಿಕರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.

  • Share this:

    ಶಿರಸಿ: ಮೇಯಲು ಬಿಟ್ಟಿರೋ ಆಕಳು, ಸುತ್ತಲೂ ಹುಲಿಯಿಂದ ಹಿಡಿದು ನಾನಾ ಬಗೆಯ ಪ್ರಾಣಿಗಳು. ಈ ಕಾನನ ಹೊಕ್ಕರೆ ಸಾಕು ಇಡೀ ಉತ್ತರ ಕನ್ನಡ ಸುತ್ತಾಡಿದಂಥಾ ಫೀಲ್, ಯಾಕಂದ್ರೆ ಉತ್ತರ ಕನ್ನಡ ಜಿಲ್ಲೆಯ (Uttara Kannada News) ಇಡೀ ಜೀವ ವೈವಿಧ್ಯತೆಯೇ ಕಣ್ಮಂದೆ ಬರುತ್ತೆ. ಹುಲಿ, ಜಿಂಕೆ, ಕಡವೆ, ಕಾಡು ನಾಯಿ, ಕಾಡು ಬೆಕ್ಕು, ಕಾಡುಕೋಣ, ಸಿಂಗಳೀಕ ಹೀಗೆ ಪಶ್ಚಿಮ ಘಟ್ಟದ ಕಾಡೇ ಇಲ್ಲಿ ಮೈದಳೆದು ನಿಂತಿದೆ. ಕುಣಬಿ, ಸಿದ್ಧಿ, ಗೌಡ,ಗೌಳಿ ಸಮುದಾಯಗಳ ರೂಪಕವೂ ಗಮನ ಸೆಳೆಯುತ್ತದೆ. ಅಂದಹಾಗೆ ಇಂತಹ ಅದ್ಭುತ ಪರಿಸರ ಇರೋದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿಪಗಿಯ ಶಾಲ್ಮಲಾ ಶಿಲ್ಪಕಲಾ ಉದ್ಯಾನವನದಲ್ಲಿ.


    ಕೇವಲ 40 ರೂಪಾಯಿ ಟಿಕೆಟ್ ಪಡೆದರೆ ಸಾಕು, ಇಲ್ಲೆಲ್ಲ ಸುತ್ತಾಡಿ ಎಂಜಾಯ್ ಮಾಡಬಹುದು. ಮಕ್ಕಳಿಗಂತೂ ಆಟವಾಡಲು ಸೂಕ್ತ ಸ್ಥಳವಿದು. 35 ಎಕರೆಯ ಈ ಉದ್ಯಾನವನವು ಶಿರಸಿ ನಾಗರಿಕರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.


    ಇದನ್ನೂ ಓದಿ: Positive Story: ಕೊಂಕಣಿ ಮಾತನಾಡುವ ಅಣಶಿ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕಿ; ಸೌಲಭ್ಯವೇ ಇರದೆಡೆ ಸಾಹಸ


    ಕೇವಲ ಮನರಂಜನೆ ಮಾತ್ರವಲ್ಲ, ವನ್ಯಜೀವಿಗಳ ಕುರಿತು ಜಾಗೃತಿಯನ್ನೂ ಈ ಉದ್ಯಾನವನದಲ್ಲಿ ಮೂಡಿಸಲಾಗ್ತಿದೆ. ಉತ್ತರಕನ್ನಡದ ಪರಿಸರ ಹಾಗೂ ಜೀವವೈವಿಧ್ಯದ ಸಮಗ್ರ ಮಾಹಿತಿಯನ್ನು ಹಂಚಲಾಗ್ತಿದೆ. ಇಷ್ಟೆಲ್ಲ ನೋಡಿದ್ಮೇಲೆ ನೀವೂ ಇಲ್ಲಿ ಬರ್ಬೇಕು ಅನಿಸುತ್ತಿರ್ಬೇಕಲ್ಲ!


    ಇದನ್ನೂ ಓದಿ: Shaurya Award: ಜೀವ ಕೊಟ್ಟ ಅಪ್ಪನಿಗೇ ಪ್ರಾಣದಾತೆಯಾದ ಮಗಳು, ಉತ್ತರ ಕನ್ನಡದ ಬಾಲಕಿ ಮುಡಿಗೆ ಶೌರ್ಯ ಪ್ರಶಸ್ತಿಯ ಗರಿ


    ಶಿರಸಿಯಿಂದ ಹುಬ್ಬಳಿ ರಸ್ತೆಯಲ್ಲಿ ಚಿಪಗಿಯಿಂದ ಒಂದು ಕಿಲೋ ಮೀಟರ್ ದೂರ ಸಾಗಿದರೆ ಸಾಕು, ನಿಮ್ಮೆದುರು ಇಡೀ ಉತ್ತರ ಕನ್ನಡವೇ ಮೈದಳೆದು ನಿಲ್ಲುತ್ತೆ!

    Published by:ಗುರುಗಣೇಶ ಡಬ್ಗುಳಿ
    First published: