• Home
  • »
  • News
  • »
  • uttara-kannada
  • »
  • Uttara Kannada: ವಿದ್ಯಾರ್ಥಿಗಳೇ ಗಮನಿಸಿ, ಈ ಸ್ಪರ್ಧೆಗಳಲ್ಲಿ ಗೆದ್ದರೆ ಸಿಗುತ್ತೆ 34 ಸಾವಿರ!

Uttara Kannada: ವಿದ್ಯಾರ್ಥಿಗಳೇ ಗಮನಿಸಿ, ಈ ಸ್ಪರ್ಧೆಗಳಲ್ಲಿ ಗೆದ್ದರೆ ಸಿಗುತ್ತೆ 34 ಸಾವಿರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕವೇ ಉತ್ತಮ ಬಹುಮಾನಗಳನ್ನು ಗೆಲ್ಲಲು ಇಲ್ಲೊಂದು ಭರ್ಜರಿ ಅವಕಾಶವಿದೆ. ಹೆಚ್ಚಿನ ವಿವರಗಳಿಗಾಗಿ ಮುಂದೆ ಓದಿ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada News) ನಡೆಯಲಿದೆ ಮಹತ್ವದ ವಿಜ್ಞಾನ ವಸ್ತು ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಉತ್ತರ ಕನ್ನಡದ ಕುಮಟಾದ ಕೆನರಾ ಕಾಲೇಜಿನಲ್ಲಿ (Canara College Kumta) ಇದೇ ತಿಂಗಳ 20 ರಿಂದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆ ನಡೆಯಲಿದೆ. ಕೆನರಾ ಜಿಲ್ಲೆಗಳ ಪ್ರಮುಖ ಸಹಕಾರಿ ಸಂಸ್ಥೆಯಾದ ಸೆಲ್ಕೋ ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.  ಬೆಳಗ್ಗೆ 10 ಗಂಟೆಗೆ ಸರಿಯಾಗಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಾಗೂ ವಿಜ್ಞಾನ ಮೇಳವನ್ನು ಕೋಟಾ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಲಿದ್ದಾರೆ.


    ನಡೆಯಲಿರುವ ಸ್ಪರ್ಧೆಗಳ ವಿವರ ಹೀಗಿದೆ
    1. ಪ್ರಬಂಧ ಸ್ಪರ್ಧೆ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ "ಭಾರತದ ಅಭಿವೃದ್ಧಿಯಲ್ಲಿ ನವೀಕರಿಸಬಹುದಾದ ಇಂಧನಗಳ ಪಾತ್ರ" ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ‌.


    ಕನ್ನಡ ಮತ್ತು ಇಂಗ್ಲೀಷ್ ಎರಡೂ ವಿಭಾಗದಲ್ಲಿ ಸ್ಪರ್ಧೆ
    ಕನ್ನಡ ಹಾಗೂ ಇಂಗ್ಲೀಷ್ ಎರಡೂ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ 10,000 ಬಹುಮಾನ, ದ್ವಿತೀಯ 5,000 ನಗದು ಬಹುಮಾನ ಮತ್ತು ತೃತೀಯ 2,000 ರೂಪಾಯಿಗಳ ವಿಶೇಷ ಪ್ರೋತ್ಸಾಹ ಧನ ನೀಡಲಾಗುವುದು.


    2. ವಿಜ್ಞಾನ ವಸ್ತು ಪ್ರದರ್ಶನ
    ವಿಜ್ಞಾನದ ಸರ್ವ ವಿಭಾಗದ ಮಾದರಿಗಳನ್ನು ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸುವ ಅವಕಾಶ ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ಕಲ್ಪಿಸಿಕೊಡಲಾಗಿದೆ. ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ 10,000 ನಗದು ಬಹುಮಾನ,  ದ್ವಿತೀಯ 5,000 ನಗದು ಬಹುಮಾನ, ತೃತೀಯ 2000 ನಗದು ಬಹುಮಾನ ಪ್ರೋತ್ಸಾಹಧನ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.


    ಇದನ್ನೂ ಓದಿ: Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ


    3. ಜಿಲ್ಲಾ ಯುವ ವಿಜ್ಞಾನಿ
    ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಕಾರ್ಯಸಾಧುವೆನಿಸುವ ಉನ್ನತ ತಂತ್ರಜ್ಞಾನ ಹೊಂದಿರುವ ಮಾದರಿಗಳನ್ನು ತಯಾರಿಸಿದವರಿಗೆ "ಜಿಲ್ಲಾ ಯುವ ವಿಜ್ಞಾನಿ" ಪ್ರಶಸ್ತಿ ಘೋಷಿಸಲಾಗುವುದು ಎಂದು ಎಂದು ಶಿಕ್ಷಣ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.


    ಇದನ್ನೂ ಓದಿ: Uttara Kannada: ಜಬರ್ದಸ್ತ್ ಹೋರಿ ಬೆದರಿಸೋ ಸ್ಪರ್ಧೆ! ನೋಡೋರ ಎದೆಯಲ್ಲೂ ಗಢಗಢ!


    ಮುಂದಿನ ವಾರದಿಂದ ತಾಲೂಕಾ ಮಟ್ಟದಲ್ಲಿ ಶಿಕ್ಷಣ ಇಲಾಖೆಯು ಈ ಸ್ಪರ್ಧೆಗಳನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ಆಯಾ ಶಾಲೆಗಳಿಂದ ಭಾಗವಹಿಸುವಂತೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: