• Home
  • »
  • News
  • »
  • uttara-kannada
  • »
  • Uttara Kannada: ಉತ್ತರ ಕನ್ನಡದ ಈ ಬ್ಯಾಂಕ್​ನಲ್ಲಿ ಸಿಗೋದು ಹಣವಲ್ಲ!

Uttara Kannada: ಉತ್ತರ ಕನ್ನಡದ ಈ ಬ್ಯಾಂಕ್​ನಲ್ಲಿ ಸಿಗೋದು ಹಣವಲ್ಲ!

ಇಲ್ಲಿದೆ ನೋಡಿ ಬ್ಯಾಂಕ್ ವಿಡಿಯೋ

"ಇಲ್ಲಿದೆ ನೋಡಿ ಬ್ಯಾಂಕ್ ವಿಡಿಯೋ"

ಬ್ಯಾಂಕ್ ಅಂದಾಕ್ಷಣ ನೆನಪಾಗೋದೇ ಹಣ. ಆದ್ರೆ ಉತ್ತರ ಕನ್ನಡದ ಈ ಬ್ಯಾಂಕ್​ನಲ್ಲಿ ಸಿಗೋದು ಹಣವಲ್ಲ! ಹಾಗಾದ್ರೆ ಇಲ್ಲಿ ಏನು ಸಿಗುತ್ತೆ ಅಂತ ನೀವೇ ನೋಡಿ

  • Share this:

    ಉತ್ತರ ಕನ್ನಡ: ಸಾಲಾಗಿ ಜೋಡಿಸಿಟ್ಟ ಬಟ್ಟೆಗಳು. ನೂರಾರು ಪುಸ್ತಕಗಳು. ಹಸಿವು ಅಂತಾ ಬಂದವರಿಗೆ ಆಹಾರ. ಇದುವೇ ನೋಡಿ, ಕಪಡಾ ಕಿತಾಬ್ ರೋಟಿ ಬ್ಯಾಂಕ್. ಇಲ್ಲಿ (Kapada Kitab Roti Bank) ಒಂದೆರಡಲ್ಲ, ಹತ್ತಾರು ಬಗೆಯ ಇಂತಹ ಸೇವೆಗಳು ಸಿಗುತ್ತೆ. ಆದ್ರೆ ಯಾವ ಸೇವೆಗೂ ಒಂದು ಪೈಸೆ ಹಣವನ್ನೂ ಕೊಡಬೇಕೆಂದಿಲ್ಲ. ಶಿರಸಿ ತಾಲೂಕು (Sirsi) ಮೈನಾರಿಟಿ ಎಜ್ಯುಕೇಶನ್ ಆ್ಯಂಡ್ ವೆಲ್ಫೇರ್ ಟ್ರಸ್ಟ್  (Sirsi Taluk Minority Education and Welfare Trust) ವತಿಯಿಂದ ನೀಡಲಾಗ್ತಿರೋ ಹತ್ತಾರು ಸೇವೆಗಳಿವು. ಒಮ್ಮೆ ಉಪಯೋಗಿಸಿದ ಬಟ್ಟೆ, ಪುಸ್ತಕಗಳನ್ನ ಇಲ್ಲಿಗೆ ನೀಡಿದ್ರೆ ಇದನ್ನ ಅರ್ಹರಿಗೆ ತಲುಪಿಸುವ ಕಾರ್ಯವನ್ನ ಈ ಟ್ರಸ್ಟ್ ಮಾಡುತ್ತಿದೆ.


    ಶಿರಸಿ ಅಲ್ಪಸಂಖ್ಯಾತರ ಸಂಘ ಶುರು ಮಾಡಿರುವ ಈ ವಿಶಿಷ್ಟ ಬ್ಯಾಂಕ್​ನಲ್ಲಿ ಉಪಯೋಗ ಮಾಡಿರುವ ಒಳ್ಳೆ ಗುಣಮಟ್ಟದ ಬಟ್ಟೆಗಳನ್ನು ಸಂಗ್ರಹಿಸಲಾಗುತ್ತದೆ. ಈ ಬಟ್ಟೆಗಳನ್ನ ಸಂಸ್ಕರಿಸಿ ತೀರಾ ಬಡತನದಲ್ಲಿರುವ ಕುಟುಂಬಗಳಿಗೆ ನೀಡೋ ಕಾರ್ಯ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಈಗಾಗಲೇ ಬ್ಯಾಂಕ್​ನಲ್ಲಿ 2000ಕ್ಕಿಂತ ಹೆಚ್ಚು ವಿವಿಧ ಬಟ್ಟೆಗಳಿವೆ. ಸಿಇಟಿ ಕಾಮೆಡ್-ಕೆ, ಎಂಬಿಬಿಎಸ್ ಸೇರಿದಂತೆ ಹಲವು ವೃತ್ತಿಪರ ಕೋರ್ಸ್​ಗಳಿಗೆ ಸಂಬಂಧಿಸಿದ ಪುಸ್ತಕಗಳಿವೆ.


    ಹಲವು ವೈದ್ಯಕೀಯ ಸೇವೆ ಉಚಿತ
    ಅವುಗಳನ್ನು ಬಡ ವಿದ್ಯಾರ್ಥಿಗಳಿಗೆ ಹಂಚಿ ರೋಟೇಶನ್ ಮೂಲಕ ನಿರಂತರವಾಗಿ ಅವಶ್ಯಕತೆ ಇರುವವರಿಗೆ ಒದಗಿಸಲಾಗ್ತಿದೆ. 4 ಆಕ್ಸಿಜನ್ ಕಾನ್ಸಂಟ್ರೇಟರ್, ವಾಕಿಂಗ್ ಸ್ಟಿಕ್ಗಳು ಸೇರಿದಂತೆ ಮೆಡಿಕಲ್ ಕ್ಯಾಂಪ್ ಆಂಬುಲೆನ್ಸ್ ಹೀಗೆ ಹಲವು ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.


    ಇದನ್ನೂ ಓದಿ: Siddi Community: ಬರ್ತಿದೆ ಸಿದ್ದಿ ಸಮುದಾಯದ ಸಿನಿಮಾ!


    ಯಾವುದೇ ಮತ ಭೇದವಿಲ್ಲದೇ ಎಲ್ಲರಿಗೂ ಈ ಸೇವೆ
    ಮಹಿಳೆಯರ ಸಬಲೀಕರಣಕ್ಕಾಗಿ ಟೇಲರಿಂಗ್ ಕ್ಲಾಸ್ ಹಾಗೂ ಕಂಪ್ಯೂಟರ್ ತರಬೇತಿ ಸೇರಿದಂತೆ ಸ್ಪೋಕನ್ ಇಂಗ್ಲೀಷ್ ಕ್ಲಾಸನ್ನೂ ಕೂಡ ನಡೆಸಲಾಗ್ತಿದೆ. ಯಾವುದೇ ಮತ ಭೇದವಿಲ್ಲದೇ ಎಲ್ಲರಿಗೂ ಈ ಸೇವೆಗಳು ಲಭ್ಯವಿವೆ.


    ಅಷ್ಟೇ ಅಲ್ಲ, ಮಹಿಳೆಯರಿಗಾಗಿ ಟೈಲರಿಂಗ್, ಸ್ಪೋಕನ್ ಇಂಗ್ಲಿಷ್ ಕ್ಲಾಸ್​ಗಳೂ ಇವೆ. ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕಗಳನ್ನೂ ಇಲ್ಲಿ ಕಾಪಿಡಲಾಗಿದೆ. ಉಚಿತ ಆರೋಗ್ಯ ಶಿಬಿರ, ಆ್ಯಂಬುಲೆನ್ಸ್ ಸೇವೆಗೂ ಈ ಸಂಸ್ಥೆ ಹೆಸರುವಾಸಿಯಾಗಿದೆ. ಹೀಗೆ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಸೇವೆಗಳಲ್ಲೂ ಶಿರಸಿ ಅಲ್ಪಸಂಖ್ಯಾತ ಟ್ರಸ್ಟ್ ಮಹತ್ವದ ಸೇವೆ ಸಲ್ಲಿಸ್ತಿದೆ.


    ಇದನ್ನೂ ಓದಿ: Success Story: ಕ್ಯಾಪ್ಸಿಕಂ ಕೃಷಿಯಿಂದ ಲಕ್ಷ ಲಕ್ಷ ಲಾಭ! ಹೆಸರು, ಹಣ ಒಟ್ಟಿಗೇ ಬಂತು!


    ಮನೇಲಿ ಊಟ ಉಳಿದರೆ ಇವರಿಗೆ ತಲುಪಿಸಿ
    ಇನ್ನು ಯಾರದ್ದಾದರೂ ಮನೆಯಲ್ಲಿ ಊಟ ಉಳಿದಿದ್ದರೆ ಅದನ್ನು ಸಂಗ್ರಹಿಸಿ ನಿರ್ಗತಿಕರಿಗೆ ಕೊಡುವ ಕೆಲಸವನ್ನೂ ಮಾಡಲಾಗ್ತಿದೆ. ಜನ ಸೇವೆಯೆ ಜನಾರ್ಧನ ಸೇವೆ ಅನ್ನೋ ಮಾತು ಶಿರಸಿಲಿ ಹೀಗೆ ಸಾಕಾರಾವಾಗಿದೆ ಅಂತಿದೆ ಇಲ್ಲಿಯ ಜನರು.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: