• Home
  • »
  • News
  • »
  • uttara-kannada
  • »
  • Bank Jobs: ಈ ಪ್ರತಿಷ್ಠಿತ ಬ್ಯಾಂಕ್​ನಲ್ಲಿದೆ ಉದ್ಯೋಗ! ಹೀಗೆ ಅಪ್ಲೈ ಮಾಡಿ

Bank Jobs: ಈ ಪ್ರತಿಷ್ಠಿತ ಬ್ಯಾಂಕ್​ನಲ್ಲಿದೆ ಉದ್ಯೋಗ! ಹೀಗೆ ಅಪ್ಲೈ ಮಾಡಿ

ಕೆ.ಡಿ.ಸಿ.ಸಿ ಬ್ಯಾಂಕ್

ಕೆ.ಡಿ.ಸಿ.ಸಿ ಬ್ಯಾಂಕ್

Uttara Kannada News: ಸದ್ಯ ಯಾವೆಲ್ಲ ಹುದ್ದೆಗಳಿಗೆ ಕೆ.ಡಿ.ಸಿ.ಸಿ ಬ್ಯಾಂಕ್​ನಲ್ಲಿ ಅರ್ಜಿ ಕರೆಯಲಾಗಿದೆ? ಹೇಗೆ ಅರ್ಜಿ ಸಲ್ಲಿಸುವುದು? ಎಲ್ಲ ವಿವರ ಇಲ್ಲಿದೆ ನೋಡಿ.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಉತ್ತರ ಕನ್ನಡ ಜಿಲ್ಲೆಯ (Uttara Kannada Job News) ಮುಂಚೂಣಿ ಸಹಕಾರಿ ಬ್ಯಾಂಕ್ ನಲ್ಲಿ ಒಂದಾಗಿರುವ ಕೆ.ಡಿ.ಸಿ.ಸಿ ಬ್ಯಾಂಕ್​ನಲ್ಲಿ (KDCC Bank Jobs) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೊತೆಗೆ ಈ ಮುನ್ನವೇ ಕರೆಯಲಾಗಿದ್ದ ಗುಮಾಸ್ತ ಹುದ್ದೆಗಳಿಗೂ ಅರ್ಜಿ ಹಾಕುವ ದಿನಾಂಕವನ್ನು ವಿಸ್ತರಿಸಲಾಗಿದೆ. ಕೆ.ಡಿ.ಸಿ.ಸಿ ಈಗ ಅರ್ಜಿ ಸಲ್ಲಿಕೆಯ ಅವಧಿಯನ್ನು ಕೆ.ಡಿ.ಸಿ.ಸಿ ಹೆಚ್ಚಿಸಿದ್ದು ಜೊತೆಗೆ ಬ್ಯಾಂಕುಗಳ ನಿಯಮಾವಳಿಗಳ ಪ್ರಕಾರ ಕೆಲವು ತಿದ್ಧುಪಡಿಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಮಾಡಿದೆ. ಹಾಗಾದರೆ ಸದ್ಯ ಯಾವೆಲ್ಲ ಹುದ್ದೆಗಳಿಗೆ ಕೆ.ಡಿ.ಸಿ.ಸಿ ಬ್ಯಾಂಕ್​ನಲ್ಲಿ (KDCC Bank Sirsi) ಅರ್ಜಿ ಕರೆಯಲಾಗಿದೆ? ಹೇಗೆ ಅರ್ಜಿ ಸಲ್ಲಿಸುವುದು? ಅರ್ಜಿ ಸಲ್ಲಿಕೆ ಮಾಡಬೇಕಾದ ವಿಳಾಸವೇನು? ಎಲ್ಲ ವಿವರ ನಿಮಗೆ ಎಂದೇ ಇಲ್ಲಿದೆ ನೋಡಿ. 

    ಸಂಸ್ಥೆಯ ಹೆಸರುಕೆ.ಡಿ.ಸಿ.ಸಿ
    ಕೆಲಸದ ಸ್ಥಳಶಿರಸಿ
    ಹುದ್ದೆಯ ಹೆಸರುಕಿರಿಯ ಗುಮಾಸ್ತ/ಕಿರಿಯ ಮೇಲ್ವಿಚಾರಕ ಹುದ್ದೆ
    ಒಟ್ಟು ಹುದ್ದೆಗಳ ಸಂಖ್ಯೆ41
    ವಯೋಮಿತಿ18-35 ವರ್ಷ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಅಕ್ಟೋಬರ್ 27ರ ಸಂಜೆ 5.30 ಒಳಗಾಗಿ
    ಅರ್ಜಿ ಸಲ್ಲಿಸಬೇಕಾದ ವಿಳಾಸವ್ಯವಸ್ಥಾಪಕ ನಿರ್ದೇಶಕರು, ಕೆನರಾ ಡಿ ಸಿ ಸಿ ಬ್ಯಾಂಕ್,ಲಿಮಿಟೆಡ್ ಹೊಸ ಮಾರುಕಟ್ಟೆ ಶಿರಸಿ 581402 ಉತ್ತರ ಕನ್ನಡ.

    ಈ ಮೊದಲು ಯಾವುದೇ ಪದವೀಧರರು ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿತ್ತು ಆದರೆ ಈಗ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. 41 ಕಿರಿಯ ಗುಮಾಸ್ತ/ಕಿರಿಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.


    ಇದನ್ನೂ ಓದಿ: Mangaluru News: ಆಳ್ವಾಸ್​ನಲ್ಲಿ ಬೃಹತ್ ಉದ್ಯೋಗ ಮೇಳ; ಹೀಗೆ ನೀವೂ ಭಾಗವಹಿಸಿ


    ಅರ್ಜಿ ಸಲ್ಲಿಕೆಗೆ ನಿಯಮಗಳು ಅಭ್ಯರ್ಥಿಗೆ 18-35 ವರ್ಷ ವಯಸ್ಸಿನವನಾಗಿರಬೇಕು. ಇದು ಆಫ್ ಲೈನ್ ಅರ್ಜಿ ಅಗಿರುತ್ತದೆ. ಹತ್ತಿರದ ಶಾಖೆಯಿಂದ ಅಕ್ಟೋಬರ್ 20 ರ ಒಳಗೆ ಅರ್ಜಿ ಪಡೆಯಬೇಕು. ಅಕ್ಟೋಬರ್ 27ರ ಸಂಜೆ 5.30 ಒಳಗಾಗಿ ಅರ್ಜಿಯನ್ನು ಕೆ.ಡಿ.ಸಿ.ಸಿ ಬ್ಯಾಂಕ್ ನ ಕಛೇರಿಗೆ ನೀಡತಕ್ಕದ್ದುಅರ್ಜಿ ಸಲ್ಲಿಕೆಯ ಲಕೋಟೆ ಮೇಲೆ ಹುದ್ದೆಯ ಹೆಸರನ್ನು ನಮೂದಿಸಿರಬೇಕು.


    ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


    ಅರ್ಜಿಯ ದರ ಮತ್ತು ಪಾವತಿ ವಿಧಾನ ಹೀಗಿದೆ
    ಅರ್ಜಿಯ ದರ ಹಾಗೂ ಪಾವತಿ ವಿಧಾನ ಪ. ಜಾತಿ ಹಾಗೂ ಪ. ಪಂಗಡ ಪ್ರವರ್ಗ-1, ಅಂಗವಿಕಲರಿಗೆ-295 ರೂಪಾಯಿಜನರಲ್, ಓಬಿಸಿ-590 ರೂಪಾಯಿ ಇದಿಷ್ಟನ್ನು ಕೆ.ಡಿ.ಸಿ.ಸಿಯ ಚಾಲ್ತಿ ಖಾತೆ ಸಂಖ್ಯೆ: 122000553848 ಈ ಖಾತೆಗೆ ಜಮೆ ಮಾಡಿ ಚಲನ್ ಪ್ರತಿ ಪಡೆದುಕೊಳ್ಳಬೇಕು.


    ಅರ್ಜಿ ಸಲ್ಲಿಸುವ ವಿಳಾಸ ಹೀಗಿದೆ
    ವ್ಯವಸ್ಥಾಪಕ ನಿರ್ದೇಶಕರು, ಕೆನರಾ ಡಿ ಸಿ ಸಿ ಬ್ಯಾಂಕ್,ಲಿಮಿಟೆಡ್ ಹೊಸ ಮಾರುಕಟ್ಟೆ ಶಿರಸಿ 581402 ಉತ್ತರ ಕನ್ನಡ.

    Published by:ಗುರುಗಣೇಶ ಡಬ್ಗುಳಿ
    First published: