• Home
 • »
 • News
 • »
 • uttara-kannada
 • »
 • Rangoli Festival: ಉತ್ತರ ಕನ್ನಡದಲ್ಲಿ ರಂಗೋಲಿ‌ ಹಬ್ಬ, ಸೃಷ್ಟಿಯಾಯ್ತು ಮಾಯಾಲೋಕ

Rangoli Festival: ಉತ್ತರ ಕನ್ನಡದಲ್ಲಿ ರಂಗೋಲಿ‌ ಹಬ್ಬ, ಸೃಷ್ಟಿಯಾಯ್ತು ಮಾಯಾಲೋಕ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇಡೀ ದೇಶದಲ್ಲಿ ನಡೆದ ಟ್ರೆಂಡ್​ಗಳ ಹೊಸ ಲೋಕವನ್ನೇ ಈ ರಂಗೋಲಿಗಳು ಮರು ನಿರ್ಮಾಣ ಮಾಡಿದ್ದವು. ಅಂಕೋಲಾ ಕಾರ್ತಿಕ ಉತ್ಸವಕ್ಕೆ ಮತ್ತೆ ಮತ್ತೆ ಬರ್ಬೇಕು ಅನ್ನೋ ಫೀಲ್​ಅನ್ನು ಸೃಷ್ಟಿಸಿದ್ದವು.

 • News18 Kannada
 • Last Updated :
 • Uttara Kannada, India
 • Share this:

  ಕಾರವಾರ: ರಸ್ತೆಯುದ್ದಕ್ಕೂ ರಂಗು ರಂಗಿನ ರಂಗೋಲಿಗಳು. ವಾಹನ ತಿರುಗಾಡೋ ರಸ್ತೇಲಿ ಏಕೆ ರಂಗೋಲಿ ಬಿಡಿಸಿದ್ದಾರೆ ಅಂದ್ಕೊಂಡ್ರೇ ಅದೇ ಸ್ಪೆಷಲ್ ಇಲ್ಲಿ. ರಸ್ತೆ ಮೇಲೆಲ್ಲ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ಕಾಂತಾರದ ಪಂಜುರ್ಲಿ, ಗಂಧದಗುಡಿಯ ರಂಗೋಲಿ! ಉತ್ತರ ಕನ್ನಡದ (Uttara Kannada) ಅಂಕೋಲಾ ತಾಲೂಕಿನಲ್ಲಿ ಕಲಾವಿದರ ಕೈಚಳಕದಲ್ಲಿ ಮೂಡಿದ ಈ ಬಣ್ಣದ ಚಿತ್ತಾರಕ್ಕೆ ಎಲ್ರೂ ಭೇಷ್ ಅಂದ್ರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕಾರ್ತಿಕ ಉತ್ಸವದ (Karthik Utsav) ಪ್ರಯುಕ್ತ ಸೇವೆಯೆಂದು ಜನರೆಲ್ಲ ತಮ್ಮ ಮನೆಮುಂದೆ ರಂಗೋಲಿ ಹಾಕುವ ಸಂಪ್ರದಾಯವಿದೆ. ಈ ಸೇವೆಯಡಿ ರಸ್ತೆಗಳ ಮೇಲೆ ವಿವಿಧ ಕಲರ್​ಫುಲ್ ರಂಗೋಲಿಗಳು ಮೂಡಿಬಂದವು.


  ಅದ್ರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗಂಧದ ಗುಡಿಯ ರೂಪಕ ಗಮನಸೆಳೆಯಿತು. ದೇಶದಲ್ಲೇ ಟ್ರೆಂಡ್ ಕ್ರಿಯೇಟ್ ಮಾಡಿರುವ ಕಾಂತಾರದ ದೈವ, ಸಿನೆಮಾದ ಪೋಸ್ಟರ್ಗಳೆಲ್ಲವೂ ರಂಗೋಲಿ ಮೂಲಕ ಅದ್ಭುತ ರೂಪ ತಳೆದಿದ್ದವು. ಉಳಿದಂತೆ ಹತ್ತಾರು ಧವಸ ಧಾನ್ಯಗಳಿಂದ ರಚಿಸಲಾದ ಸಾಂಪ್ರದಾಯಿಕ ರಂಗೋಲಿಗಳು ಗಮನಸೆಳೆದವು.


  ಬೇರೆ ಬೇರೆ ಕೆಲಸದಲ್ಲಿದ್ರೂ ರಂಗೋಲಿ ಬಿಡಿಸ್ತಾರೆ
  ವಿಶೇಷ ಅಂದ್ರೆ, ಅಂಕೋಲಾದ ಪ್ರತಿ ಮನೆಯಲ್ಲೂ ಕನಿಷ್ಟ ಓರ್ವನಾದರೂ ರಂಗೋಲಿ ಬಿಡಿಸುವ ಚಾಕಚಕ್ಯತೆ ಹೊಂದಿರ್ತಾರೆ. ತಮ್ಮ ಜೀವನ ನಿರ್ವಹಣೆಗಾಗಿ ಬೇರೆಬೇರೆ ಕೆಲಸ ಮಾಡುತ್ತಿದ್ರೂ, ಕಾರ್ತಿಕ ಮಾಸ ಬಂತಂದ್ರೆ ಸಾಕು ಕಲಾವಿದರಾಗಿ ಬಿಡ್ತಾರೆ.‘


  ಇದನ್ನೂ ಓದಿ: Dharavati Ranga Temple: ಈ ದೇಗುಲದಲ್ಲಿ ಚಪ್ಪಲಿಯಲ್ಲಿ ಹೊಡೆದುಕೊಂಡ್ರೆ ಒಳ್ಳೇದಾಗುತ್ತಂತೆ!


  ಯಾವುದೇ ಸ್ಪರ್ಧೆ ಇಲ್ದೇ ಹೋದ್ರೂ ತಮ್ಮಷ್ಟಕ್ಕೇ ತಾವು ಸೇವೆಯ ರೂಪದಲ್ಲಿ ಅಂಬರಕೊಡ್ಲುವಿನಿಂದ ಶಿರಕೋಳವರೆಗೂ ಮನೆ ಅಂಗಳವನ್ನು ಕಲರ್ ಫುಲ್ ಮಾಡ್ತಾರೆ. ದೇವರ ಪಲ್ಲಕ್ಕಿ ಈ ರಸ್ತೆಯಲ್ಲಿ ಹೋದ ಬಳಿಕ ರಂಗೋಲಿ ಬಿಡಿಸಲಾಗ್ತದೆ. ವಾಪಸ್ ಬರೋ ಹೊತ್ತಿಗೆ ರಂಗೋಲಿಗಳು ಅರಳಿ ನಿಂತಿರ್ತವೆ.


  ಇದನ್ನೂ ಓದಿ: Apsarakonda: ಇಲ್ಲೇ ಅಪ್ಸರೆಯರು ಸ್ನಾನ ಮಾಡ್ತಾರಂತೆ! ಉತ್ತರ ಕನ್ನಡದ ಬೊಂಬಾಟ್ ಅಪ್ಸರಕೊಂಡ


  ಹೊಸ ಲೋಕವೇ ಸೃಷ್ಟಿ
  ಒಟ್ಟಿನಲ್ಲಿ ಇಡೀ ದೇಶದಲ್ಲಿ ನಡೆದ ಟ್ರೆಂಡ್​ಗಳ ಹೊಸ ಲೋಕವನ್ನೇ ಮರು ನಿರ್ಮಾಣ ಮಾಡಿದ್ದವು. ಅಂಕೋಲಾ ಕಾರ್ತಿಕ ಉತ್ಸವಕ್ಕೆ ಮತ್ತೆ ಮತ್ತೆ ಬರ್ಬೇಕು ಅನ್ನೋ ಫೀಲ್​ಅನ್ನು ಸೃಷ್ಟಿ ಮಾಡಿದವು.


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: