• Home
  • »
  • News
  • »
  • uttara-kannada
  • »
  • Power Cut: ಉತ್ತರ ಕನ್ನಡದ ಜನರೇ ಗಮನಿಸಿ, ನವೆಂಬರ್ 15ರವರೆಗೆ ವಿದ್ಯುತ್ ವ್ಯತ್ಯಯ

Power Cut: ಉತ್ತರ ಕನ್ನಡದ ಜನರೇ ಗಮನಿಸಿ, ನವೆಂಬರ್ 15ರವರೆಗೆ ವಿದ್ಯುತ್ ವ್ಯತ್ಯಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನವೆಂಬರ್ 15ನೇ ತಾರೀಕಿನವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಲಾಗಿದೆ

  • Share this:

    ಉತ್ತರ ಕನ್ನಡ: ವಿದ್ಯುತ್ ವ್ಯತ್ಯಯ ಅನ್ನೋದು ಹಲವು ಕೆಲಸ ಕಾರ್ಯಗಳಿಗೆ ತಡೆ ಉಂಟುಮಾಡುತ್ತದೆ. ಇದೇ ಕಾರಣಕ್ಕೆ ಯಾವಾಗ ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಉತ್ತರ ಕನ್ನಡ ಜಿಲ್ಲೆಯ (Uttara Kannada News)  ಅಂಕೋಲಾ ತಾಲೂಕಿನ (Ankola News) ಸಾರ್ವಜನಿಕರು ಗಮನಿಸಲೇಬೇಕಾಧ ಮಹತ್ವದ ಮಾಹಿತಿಯೊಂದು ಇಲ್ಲಿದೆ.  ಅಂಕೋಲಾ ತಾಲೂಕಿನಲ್ಲಿ ನವೆಂಬರ್ 15ರವರೆಗೆ ವಿದ್ಯುತ್ ವ್ಯತ್ಯಯ (Power Cut In Uttara Kannada) ಉಂಟಾಗಲಿದೆ.  ಹೌದು, ಅಂಕೋಲಾ ತಾಲೂಕಿನ ಬಿಸಿ ಬಿಸಿ ಬೆವರಲ್ಲಿ ಬೆವೆತು ಬಂದು ಚೂರು ಫ್ಯಾನ್ ಹಾಕಿ ಅಂದ್ರೆ ಅಲರ್ಟ್! ನಿಮ್ಮ ಊರಲ್ಲಿ 15ನೇ ತಾರೀಖಿನ ತನಕ ಕರೆಂಟ್ ಸಮರ್ಪಕವಾಗಿ ಇರುವುದಿಲ್ಲ.


    ಅಂಕೋಲಾ ನಗರದಲ್ಲಿ ಮಾತ್ರವಲ್ಲ ಗ್ರಾಮಾಂತರ ವಿಭಾಗಗಳ ಎಲ್ಲಾ ಕಡೆಗಳಲ್ಲೂ ವಿದ್ಯುತ್ ದುರಸ್ತಿ ಕಾರ್ಯ ಮುಂದುವರೆಯುತ್ತಿದೆ. ಹೀಗಾಗಿ ನವೆಂಬರ್ 15ನೇ ತಾರೀಕಿನವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಲಾಗಿದೆ.


    ವಿದ್ಯುತ್ ಮಾರ್ಗಗಳು ಮತ್ತು ಪರಿವರ್ತಕ ಕೇಂದ್ರಗಳು ನಿರ್ವಹಣೆ ಕೆಲಸವಿರುವುದರಿಂದ ಅಂಕೋಲಾ ತಾಲೂಕಿನ ಗ್ರಾಮಾಂತರ ವಿಭಾಗಗಳಲ್ಲಿ ನವೆಂಬರ್ 15ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.


    ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?
    ನವೆಂಬರ್ 10 ರಿಂದ 11 ರಂದು ಬೆಳಿಗ್ಗೆ 8 ರಿಂದ 6ರವರೆಗೆ ಗುಂಡಬಾಳ ವ್ಯಾಪ್ತಿಯ ಈ ಕೆಳಗಿನ ಗ್ರಾಮಗಳಿಗೆ ಕರೆಂಟ್ ಇರುವುದಿಲ್ಲ.


    ಇದನ್ನೂ ಓದಿ: Uttara Kannada: ಗ್ರಹಣದ ನಂತರದ ಆಕಾಶ ಹೀಗಿರುತ್ತೆ! ಶಿರಸಿಯ ಆಗಸ 360 ತಂಡದಿಂದ ಹೊಸ ಪ್ರಯತ್ನ!


    ಕುದ್ರಿಗೆ, ವಾಸರೆ, ಮೇಲಿನಗುಳಿ, ಕಾರೇಬೈಲ್, ಕೆಂಕಣಿ, ಸಂತೆ ಪೇಟೆ, ಮರಕಲ್, ತಳಗದ್ದೆ
    ನವೆಂಬರ್ 12 ಮತ್ತು 13ರಂದು ಗುಂಡಬಾಳಾ ಹಾಗೂ ಅಂಬಾರಕೊಡ್ಲ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಗಳಲ್ಲಿ ಕರೆಂಟ್ ಇರುವುದಿಲ್ಲ.


    ಇಲ್ಲೆಲ್ಲ ಕರೆಂಟ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ
    ದೇವಿಗದ್ದೆ, ಬೋಳುಕುಂಟೆ, ಹುಲಿದೇವರವಾಡ, ವಕ್ಕಳ ಬೆಳಸೆ, ಅಂಬುಗೋಣ, ಶಿರೂರು
    ನವೆಂಬರ್ 14 ರಿಂದ 15ರವೆಗೆ ವಂದಿಗೆ ಹಾಗೂ ಅಂಕೋಲಾ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಗಳಲ್ಲಿ ಕರೆಂಟ್ ಇರುವುದಿಲ್ಲ.


    ಇದನ್ನೂ ಓದಿ: Uttara Kannada: ಸ್ವತಃ ಕರೆಂಟ್ ತಯಾರಿಸೋ ಶಿರಸಿಯ ಗ್ರಾಮಸ್ಥರು! ಇವರಿಗೆ ಸರ್ಕಾರಿ ವಿದ್ಯುತ್ ಬೇಕಂತಿಲ್ಲ!


    ಈ ಪ್ರದೇಶಗಳಲ್ಲೂ ಇರದು ವಿದ್ಯುತ್
    ಶೆಟಗೇರಿ, ಕೇಣಿ ಹಡವ, ತೆಂಕಣಕೇರಿವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿದ್ಯುತ್ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಈ ದಿನಾಂಕಗಳಲ್ಲಿ ಜನರು ವಿದ್ಯುತ್ ಸಂಬಂಧಿತ ಕೆಲಸಗಳಿದ್ದರೆ ಈ ವಾರದ ಮೊದಲೇ ಮಾಡಿ ಮುಗಿಸಿಕೊಳ್ಳುವುದು ಒಳ್ಳೆಯದು.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: