• Home
  • »
  • News
  • »
  • uttara-kannada
  • »
  • Uttara Kannada: ಕಲಾವಿದರೇ ಗಮನಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

Uttara Kannada: ಕಲಾವಿದರೇ ಗಮನಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕುಮಟಾ ವೈಭವ ಉತ್ಸವ ನವೆಂಬರ್ 11ರಂದು ಮಣಕಿ ಮೈದಾನದಲ್ಲಿ ಜರುಗಲಿದೆ.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ (Kannada Rajyotsava) ನವೆಂಬರ್ 2ನೇ ವಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಿರಸಿಯ (Uttara Kannada Sirsi) ಸ್ಪಂದನಾ ಸಾಂಸ್ಕೃತಿಕ ಅಕಾಡೆಮಿಯಿಂದ ಈ ಸ್ಪರ್ಧೆಗಳು ಆಯೋಜನೆಗೊಳ್ಳುತ್ತಿದ್ದು ಆಸಕ್ತ ಕಲಾವಿದರು (Artist) ಹಾಗೂ ಕಲಾವಿದರ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸುವಂತೆ ಶಿರಸಿಯ ಸ್ಪಂದನಾ ಸಾಂಸ್ಕೃತಿಕ ಅಕಾಡೆಮಿ ಸಂಸ್ಥೆ ತಿಳಿಸಿದೆ.


    ಯಾವ ಯಾವ ಕಾರ್ಯಕ್ರಮಗಳು ಜರುಗಲಿವೆ?
    ಕರ್ನಾಟಕದ ಕಲೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ನಾಡಗೀತೆ, ದೇಶಭಕ್ತಿಗೀತೆ, ವಿವಿಧ ನೃತ್ಯ, ಕಲೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾವಿದರು ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಭಾಗವಹಿಸಬಹುದಾಗಿದೆ.


    ಅರ್ಜಿ ಸಲ್ಲಿಕೆ ಹೇಗೆ? ಎಲ್ಲಿ?
    ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವ ಕಲಾವಿದರು ತಾವೇ ಖುದ್ದಾಗಿ ಶಿರಸಿಯ ಝೂ ಸರ್ಕಲ್ ನಲ್ಲಿರುವ ಸ್ಪಂದನಾ ಸಾಂಸ್ಕೃತಿಕ ಅಕಾಡೆಮಿಗೆ ಹೋಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 5 ರ ಸಂಜೆ 4 ರಿಂದ ಏಳು ಗಂಟೆಯ ತನಕ ಅರ್ಜಿ ಸಲ್ಲಿಕೆಗೆ ಗಡುವು ನೀಡಲಾಗಿದೆ.


    ಅರ್ಜಿ ಸಲ್ಲಿಸುವ ವಿಳಾಸ
    ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸ್ಪಂದನಾ ಅಕಾಡೆಮಿ, ಹಳೆ ಆರ್​ಟಿಓ ಕಛೇರಿ ಬಿಲ್ಡಿಂಗ್, ಝೂ ಸರ್ಕಲ್, ಶಿರಸಿ ಇಲ್ಲಿಗೆ ಬಂದು ತಮ್ಮ ವಿವರ ನೀಡಲು ಅವಕಾಶ ಕಲ್ಪಿಸಲಾಗಿದೆ.


    ಇದನ್ನೂ ಓದಿ: Uttara Kannada: ಜಬರ್ದಸ್ತ್ ಹೋರಿ ಬೆದರಿಸೋ ಸ್ಪರ್ಧೆ! ನೋಡೋರ ಎದೆಯಲ್ಲೂ ಗಢಗಢ!


    ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು
    ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವ ಕಲಾವಿದರು  ಹೆಚ್ಚಿನ ಮಾಹಿತಿಗಾಗಿ 8073847145 ಹಾಗೂ 9449193801 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ‌.


    ಕುಮಟಾ ವೈಭವ ಉತ್ಸವ
    ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕುಮಟಾ ವೈಭವ ಉತ್ಸವ ನವೆಂಬರ್ 11ರಂದು ಮಣಕಿ ಮೈದಾನದಲ್ಲಿ ಜರುಗಲಿದೆ.


    ಎಷ್ಟು ದಿನದ ಕಾರ್ಯಕ್ರಮ?
    ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು ದಿವಂಗತ ಲಿಂಗಪ್ಪ ಮಾಸ್ತರ ಅವರ ನೆನಪಿನಲ್ಲಿ ತಾಂಡವ ಕಲಾನಿಕೇತನ ಎಂಬ ಸಂಸ್ಥೆಯು ಈ ಒಂದು ಕಾರ್ಯಕ್ರಮವನ್ನು ನಡೆಸಿಕೊಡುತ್ತದೆ‌. ಈ ವರ್ಷ ನವೆಂಬರ್ 11ರಿಂದ 16ರವರೆಗೆ ಕುಮಟಾ ವೈಭವ ಕಾರ್ಯಕ್ರಮ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ನಾಯ್ಕ್ ಅವರು ತಿಳಿಸಿದ್ದಾರೆ.


    ಇದನ್ನೂ ಓದಿ: Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ


    ವಿಶೇಷಗಳೇನು?
    ಚುಂಚಾದ್ರಿ ಕಪ್ ಎನ್ನುವ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಕೃಷಿಕರು ಹಾಗೂ ಕಲಾವಿದರಿಗೆ ಸನ್ಮಾನ ಹಾಗೂ ಮಾಸಾಶನ ಕೊಡುವ ನಿರ್ಧಾರ ಕೈಗೊಳ್ಳಲಾಗಿದೆ. ಕನ್ನಡ ಹಾಗೂ ಹಿಂದಿ ಚಿತ್ರರಂಗದ ಗಾಯಕ-ಗಾಯಕಿಯರಿಂದ ಗಾಯನ ಹಾಗೂ ಮನೋರಂಜನಾ ಕಾರ್ಯಕ್ರಮವಿರಲಿದೆ‌.
    ಸ್ಥಳೀಯ ಕಲೆ ಹಾಗೂ ಕೌಶಲ್ಯಗಳನ್ನು ಪ್ರದರ್ಶಿಸುವ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: