• Home
 • »
 • News
 • »
 • uttara-kannada
 • »
 • Good News: ಉಚಿತ ತರಬೇತಿ, ಜೊತೆಗೆ 15 ಸಾವಿರ ಗೌರವ ಧನ; ಇಲ್ಲಿದೆ ಒಂದೊಳ್ಳೆ ಅವಕಾಶ!

Good News: ಉಚಿತ ತರಬೇತಿ, ಜೊತೆಗೆ 15 ಸಾವಿರ ಗೌರವ ಧನ; ಇಲ್ಲಿದೆ ಒಂದೊಳ್ಳೆ ಅವಕಾಶ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗಮನಾರ್ಹ ಸಂಗತಿಯೇನೆಂದರೆ ಈ ತರಬೇತಿ ಅವಧಿಯಲ್ಲಿ 15,000ರೂ.ಗಳ ಮಾಸಿಕ ಗೌರವಧನವನ್ನು ನೀಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.

 • News18 Kannada
 • Last Updated :
 • Uttara Kannada, India
 • Share this:

  ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಧಾರವಾಡದಿಂದ ಪತ್ರಿಕೋದ್ಯಮ ವಿಭಾಗದಲ್ಲಿ ಪದವೀಧರರಾದ ಹಾಗೂ ಸ್ನಾತಕೋತ್ತರ ಪದವಿ ಪಡೆದಂತಹ ಅಭ್ಯರ್ಥಿಗಳಿಗೆ ಹುಬ್ಬಳ್ಳಿಯ (Hubballi News) ರಾಜ್ಯ ಸಮಾಚಾರ ಕೇಂದ್ರ ಕಚೇರಿಯಲ್ಲಿ ಒಂದು ವರ್ಷದ ಉಚಿತ ತರಬೇತಿಯನ್ನು (Free Training) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ನೀಡಲಾಗುತ್ತಿದೆ‌. ಓರ್ವ ಅಭ್ಯರ್ಥಿ ಒಂದು ಬಾರಿ ಮಾತ್ರ ತರಬೇತಿ ಪಡೆಯಲು ಅವಕಾಶವಿದ್ದು ಈ ಹಿಂದೆ ತರಬೇತಿ ಪಡೆದವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲವೆಂದು ಇಲಾಖೆ ತಿಳಿಸಿದೆ.


  ನಿಯಮಗಳು ಹಾಗೂ ಸೌಲಭ್ಯಗಳು ಹೀಗಿವೆ
  ಗಮನಾರ್ಹ ಸಂಗತಿಯೇನೆಂದರೆ ಈ ತರಬೇತಿ ಅವಧಿಯಲ್ಲಿ 15,000ರೂ.ಗಳ ಮಾಸಿಕ ಗೌರವ ಧನವನ್ನು ನೀಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.


  ನಿಯಮಗಳು ಹೀಗಿವೆ
  ಅಂಗೀಕೃತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದ ಪದವಿ ಹಾಗೂ ಸ್ನಾತಕ ಪದವಿ ಪೂರೈಸಿರಬೇಕು.ಕಂಪ್ಯೂಟರ್ ತರಬೇತಿ ಹೊಂದಿರುವುದು ಕಡ್ಡಾಯ.ಮೆರಿಟ್ ಹಾಗೂ ಲಿಖಿತ ಪರೀಕ್ಷೆಯ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 18 ಆಗಿದೆ.


  ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಧಾರವಾಡದ ಜಿಲ್ಲಾಧಿಕಾರಿ ಕಛೇರಿ ಎದುರಿಗಿನ ವಾರ್ತಾ ಇಲಾಖೆಯನ್ನು ಸಂಪರ್ಕಿಸಬೇಕೆಂದು ಇಲಾಖೆ ಮಾಧ್ಯಮಗಳ ಮೂಲಕ ವಿನಂತಿಸಿಕೊಂಡಿದೆ.


  ಇದನ್ನೂ ಓದಿ: Hubballi: ಕನ್ನಡದ ಆದಿಕವಿ ಪಂಪನ ಮನೆಲಿ ಈಗ ಯಾರಿದ್ದಾರೆ? ವಿಳಾಸ ಇಲ್ಲಿದೆ ನೋಡಿ!


  ವಿಳಾಸ ಹೀಗಿದೆ
  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಧಿಕಾರಿ ಕಛೇರಿ ಆವರಣ, ವಾರ್ತಾ ಭವನ, ಧಾರವಾಡ – 580007


  ಇದನ್ನೂ ಓದಿ: Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ


  ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು
  ದೂರವಾಣಿ ಸಂಖ್ಯೆ: 9480841236 ಅಥವಾ 9480654365

  Published by:ಗುರುಗಣೇಶ ಡಬ್ಗುಳಿ
  First published: