Uttara Kannada: ಉತ್ತರ ಕನ್ನಡದಲ್ಲಿ ಲೋಕ ಅದಾಲತ್; ನಿಮ್ಮ ಕಾನೂನು ಸಮಸ್ಯೆಯನ್ನು ಹೀಗೆ ಪರಿಹರಿಸಿಕೊಳ್ಳಿ

ಚೆಕ್ ಬೌನ್ಸ್, ಜೀವನಾಂಶ, ಸತಿ-ಪತಿ ಕಲಹ, ದಾಯಾದಿ ಕಲಹ, ಆಸ್ತಿ ಪ್ರಕರಣ ಸೇರಿದಂತೆ ಅಪರಾಧ ಪ್ರಕರಣಗಳ ರಾಜಿ ವಿಚಾರವನ್ನೂ ಈ ಅದಾಲತ್ ನಲ್ಲಿ ಕೈಗೊಳ್ಳಲಾಗುವುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಉತ್ತರ ಕನ್ನಡ: ಸಣ್ಣ ಪುಟ್ಟ ಪ್ರಕರಣಗಳನ್ನು ಸುದೀರ್ಘವಾಗಿ ಕೊಂಡೊಯ್ಯದೇ ತ್ವರಿತಗತಿಯಲ್ಲಿ ಮುಗಿಸುವ ಉದ್ದೇಶದಿಂದ ನಡೆಸಲಾಗುವ ಲೋಕ ಅದಾಲತ್ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada News) ನಡೆಯಲಿದೆ. ಇಲ್ಲಿನ ಸಿದ್ದಾಪುರ (Siddapur) ತಾಲೂಕು ನ್ಯಾಯಾಲಯ ಇಂತಹದ್ದೊಂದು ಅವಕಾಶವನ್ನು ಕಲ್ಪಿಸುತ್ತಿದೆ. ಸಣ್ಣ ಪುಟ್ಟ ಪ್ರಕರಣ, ರಾಜಿ ಪಂಚಾಯಿತಿಕೆ ಹಾಗೂ ಪರಸ್ಪರ ಒಪ್ಪಂದದಿಂದ ಮುಗಿದು ಹೋಗಬಹುದಾದ ಪ್ರಕರಣಗಳು ವಿಚಾರಣೆಗೆ ಬರಲಿದೆ. ಹಾಗೂ ಲೋಕ ಅದಾಲತ್ (Lok Adalat) ಮೂಲಕ ಹೆಚ್ಚು ದಂಡನೆಗೊಳಗಾಗದೇ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಏನಿದು ಲೋಕ ಅದಾಲತ್? ಹೇಗೆ ಇಲ್ಲಿ ಅರ್ಜಿ ಸಲ್ಲಿಸುವುದು? ಎಲ್ಲ ವಿವರ ಇಲ್ಲಿದೆ. 

  ಎಲ್ಲಿ? ಯಾವಾಗ?
  ಕಾರ್ಯಕ್ರಮವು ಸಿದ್ದಾಪುರ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಆಗಸ್ಟ್ 13ರಂದು ನಡೆಯಲಿದೆ.

  ಇದನ್ನೂ ಓದಿ: Uttara Kannada: ಅಬ್ಬಬ್ಬಾ! ಆಕಾಶಕ್ಕೇ ಸ್ಪರ್ಧೆ ನೀಡುವ ಆಲದಮರ! ನೋಡಿದ್ರೆ ಅಚ್ಚರಿ ಪಡೋದು ಗ್ಯಾರಂಟಿ

  ಯಾವೆಲ್ಲ ಕೇಸ್ ಪರಿಹಾರ?
  ಚೆಕ್ ಬೌನ್ಸ್, ಜೀವನಾಂಶ, ಸತಿ-ಪತಿ ಕಲಹ, ದಾಯಾದಿ ಕಲಹ, ಆಸ್ತಿ ಪ್ರಕರಣ ಸೇರಿದಂತೆ ಅಪರಾಧ ಪ್ರಕರಣಗಳ ರಾಜಿ ವಿಚಾರವನ್ನೂ ಈ ಅದಾಲತ್ ನಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

  ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

   ಈ ಹಿಂದಿನ ಅದಾಲತ್ ನಲ್ಲಿ 390 ಪ್ರಕರಣಗಳಿಗೆ ಮುಕ್ತಿ ಸಿಕ್ಕಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

  ಏನಿದು ಲೋಕ ಅದಾಲತ್?
  ಲೋಕ್ ಅದಾಲತ್ ಜನರ ನ್ಯಾಯಾಲಯ ಎಂದೇ ಹೆಸರು ಗಳಿಸಿದೆ. ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ, 1987 ರ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಇದು ಸ್ಥಾಪನೆಗೊಂಡಿದ್ದು ಭಾರತದಲ್ಲಿ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನವಾಗಿ ರಚಿಸಲಾಗಿದೆ. ಇದು ಬಾಕಿ ಇರುವ ಪ್ರಕರಣಗಳು ಅಥವಾ ನ್ಯಾಯಾಲಯವು ಇತ್ಯರ್ಥಗೊಳ್ಳುವ ಪೂರ್ವಭಾವಿ ಹಂತದಲ್ಲಿ ಇರುವ ವೇದಿಕೆಯಾಗಿದೆ.

  ಸಿವಿಲ್ ಪ್ರಕರಣಗಳಲ್ಲಿ ಎರಡೂ ಕಡೆಯ ವಾದಿಗಳ ನಡುವೆ ಸಂಧಾನ (Mutual Settlement) ಏರ್ಪಡಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯು ಲೊಕ ಅದಾಲತ್​ಗಳನ್ನು ರಚಿಸಿರುತ್ತದೆ.

  ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

  ಯಾವುದೇ ಕಕ್ಷಿದಾರರು ಲೋಕ ಅದಾಲತ್‌ನ ನಿರ್ಧಾರದಿಂದ ತೃಪ್ತರಾಗದಿದ್ದರೆ ಸೂಕ್ತವಾದ ನ್ಯಾಯವ್ಯಾಪ್ತಿಯ ನ್ಯಾಯಾಲಯವನ್ನು ಸಂಪರ್ಕಿಸುವ ಮೂಲಕ ದಾವೆ ಹೂಡಲು ಮುಕ್ತರಾಗಿದ್ದಾರೆ.

  ಯಾವ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ?
  ವೈವಾಹಿಕ, ಕೌಟುಂಬಿಕ ಮತ್ತು ಆಸ್ತಿ ಪಾಲು ವಿಭಾಗ, ಬ್ಯಾಂಕ್​ಗಳಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಚೆಕ್ ಬೌನ್ಸ್, ಭಾರತ ದಂಡ ಸಂಹಿತೆಯ ರಾಜಿಯಾಗಬಲ್ಲ ಪ್ರಕರಣಗಳು, ಹಣಕಾಸಿನ ದಾವೆಗಳು, ಸಿವಿಲ್ ವ್ಯಾಜ್ಯಗಳು, ಕಂದಾಯ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಪರಿಹಾರ ಮಾಡಿಕೊಳ್ಳಬಹುದಾಗಿದೆ.

  ಇದನ್ನೂ ಓದಿ: Uttara Kannada: ಅಬ್ಬಬ್ಬಾ! ಆಕಾಶಕ್ಕೇ ಸ್ಪರ್ಧೆ ನೀಡುವ ಆಲದಮರ! ನೋಡಿದ್ರೆ ಅಚ್ಚರಿ ಪಡೋದು ಗ್ಯಾರಂಟಿ

  ಅಷ್ಟೇ ಅಲ್ಲದೇ ಇತರೆ ಎಲ್ಲ ರೀತಿಯ ರಾಜಿಯಾಗಬಲ್ಲ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಲೋಕ ಅದಾಲತ್​ ಅಥವಾ ಜನತಾ ನ್ಯಾಯಾಲಯದ ಮೂಲಕ ಸಾರ್ವಜನಿಕರು ಪರಿಹಾರ ಕಂಡುಕೊಳ್ಳಬಹುದಾಗಿದೆ.
  Published by:guruganesh bhat
  First published: