• Home
  • »
  • News
  • »
  • uttara-kannada
  • »
  • Balloon Festival: ಇಲ್ಲಿ ಬಲೂನ್ ಹಾರಿಸಿದರೆ ಸಮಸ್ಯೆಗಳೆಲ್ಲ ಮಾಯ!

Balloon Festival: ಇಲ್ಲಿ ಬಲೂನ್ ಹಾರಿಸಿದರೆ ಸಮಸ್ಯೆಗಳೆಲ್ಲ ಮಾಯ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬಲೂನ್ ಜಾತ್ರೆ ಎಂದೇ ಫೇಮಸ್ ಆಗಿರುವ ಈ ಜಾತ್ರಾ ಮಹೋತ್ಸವಕ್ಕೆ ಊರ, ಪರವೂರ ಭಕ್ತರೂ ಆಗಮಿಸಿದ್ರು. ಬಲೂನಿನಂತೆ ತಮ್ಮ ಜೀವನ ಉನ್ನತ ಮಟ್ಟಕ್ಕೆ ಏರಲಿ, ಸಮಸ್ಯೆಗಳು ನಿವಾರಣೆ ಆಗಲಿ ಅನ್ನೋ ಆಶಯದೊಂದಿಗೆ ಜಾತ್ರೆ ಮುಕ್ತಾಯವಾಯ್ತು.

  • News18 Kannada
  • Last Updated :
  • Karwar, India
  • Share this:

    ಕಾರವಾರ: ಬಾನಿನತ್ತ ಮುಖ ಮಾಡಿದ ವಾಫರ್ ಬಲೂನು, ಹರ ಹರ ಮಹಾದೇವ ಎಂದು ಉದ್ಘೋಷ ಮೊಳಗಿಸುತ್ತಿರುವ ಜನರು. ಅರೆ! ಇದೇನಿದು ಬಲೂನು ಕಾಂಪಿಟೇಶನ್ ಅಂದ್ಕೊಂಡ್ರ? ಅದಲ್ಲ ಕಥೆ. ಬಲೂನಿನ ಮೂಲಕ ಜನ ಸಂಕಟಕ್ಕೆ ಅಂತ್ಯ ಹಾಡೋ ಸೂಚನೆಯಿದು. ದೇವರಿಗೆ ಮೊರೆ ಇಡುವ ಬಗೆಯಿದು. ಇಂತಹ ಭಕ್ತಿ ಪರಾಕಾಷ್ಠೆ ಮೆರೆಯುವ ಈ ದೃಶ್ಯ ಕಂಡು ಬರುವುದು ಕಾರವಾರದ (Karwar)  ರಾಮನಾಥೇಶ್ವರ ದೇವಸ್ಥಾನದಲ್ಲಿ. ಇಲ್ಲಿನ ವಾರ್ಷಿಕ ರಾಮನಾಥ ದೇವರ (Ramnath Temple  Fair Karwar) ಕಾರ್ತಿಕೋತ್ಸವದ ಅಂಗವಾಗಿ ಈ ಎಲ್ಲಾ ಆಚರಣೆಗಳನ್ನು ನಡೆಸಲಾಯ್ತು. ಉತ್ಸವದ ದಿನ ದೇವರ ಪಲ್ಲಕ್ಕಿಯನ್ನು ರಾಮನಾಥ ದೇವಾಲಯದಿಂದ ಸಾತೇರಿ ದೇವಾಲಯಕ್ಕೆ ತಂದು ಪೂಜೆ ಮಾಡಲಾಯ್ತು. ಸುತ್ತಲಿನ ಊರ ಜನರು ಕುಲಾವಿ ತೋರಣದಿಂದ ಊರನ್ನು ಸಿಂಗರಿಸಿ ದೇವರಿಗೆ ದೀಪಾರತಿ ಬೆಳಗಿ ಸೇವೆ ನೀಡಿದ್ರು


    ಆದರೆ ಇದೆಲ್ಲಕ್ಕೂ ಜಾಸ್ತಿ ಜನರು ಇಷ್ಟಪಡುವುದೇ ವಾಫರ್ ಬಲೂನು ಹಾರಾಟ. ಹೀಗೆ ಬಲೂನು ಹಾರಿಸೋಕೂ ಒಂದು ಕಾರಣವಿದೆ. ಈ ಬಾರಿಯ ಬಲೂನು 20 ಅಡಿ ಎತ್ತರ ಹಾಗೂ 8 ಅಡಿ ಅಗಲ ಹೊಂದಿತ್ತು. ಸಂಜೆಯಾಗುತ್ತಲೇ ರಾಮನಾಥ ದೇವಾಲಯದ ಬಳಿ ಬಿಸಿ ಗಾಳಿ ತುಂಬಿದ ಬಲೂನ್ ಅನ್ನು ಹಾರಿ ಬಿಡಲಾಯ್ತು. ನೆರೆದಿದ್ದ ಭಕ್ತರೆಲ್ಲರೂ ಹರಹರ ಮಹಾದೇವ್ ಎಂದು ಕೂಗುತ್ತಾ, ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದರು.


    ಇದನ್ನೂ ಓದಿ: Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ


    ಬಲೂನ್ ಮೇಲೇರಇದಷ್ಟೂ ಸಮಸ್ಯೆ ದೂರ
    ಜೊತೆಗೆ ವಾಫರ್ ಬಲೂನ್ ಮೇಲೆ ಹೋದಂತೆ ಹೇಗೆ ಚಿಕ್ಕದಾಗುತ್ತದೆಯೋ ಹಾಗೆಯೇ ಕಷ್ಟಗಳು ಸಣ್ಣದಾಗಲಿ ಎಂದು ಪ್ರಾರ್ಥಿಸಿಕೊಂಡ್ರು. ಒಂದು ಸುದೀರ್ಘ ಹಾರಾಟದ ನಂತರ ಅದು ಸಮುದ್ರಕ್ಕೆ ಸೇರಬೇಕು. ಹಾಗೆ ಸೇರಿದರೆ ಊರಿನವರ ಸಂಕಷ್ಟ ನಿವಾರಣೆಯಾಗುತ್ತದೆ ಅನ್ನೋದು ಜನರ ನಂಬಿಕೆ.


    ಇದನ್ನೂ ಓದಿ: Success Story: ಸಾವಿರಾರು ಮಹಿಳೆಯರ ತಿಂಗಳ ರಗಳೆಗೆ ಪರಿಹಾರ! ಸ್ಟಾರ್ಟಪ್ ಮಾಡಿ ಸಕ್ಸಸ್ ಕಂಡ ಗೋಕರ್ಣದ ಯುವತಿ


    ಬಲೂನ್ ಜಾತ್ರೆ ಎಂದೇ ಫೇಮಸ್ ಆಗಿರುವ ಈ ಜಾತ್ರಾ ಮಹೋತ್ಸವಕ್ಕೆ ಊರ, ಪರವೂರ ಭಕ್ತರೂ ಆಗಮಿಸಿದ್ರು. ಬಲೂನಿನಂತೆ ತಮ್ಮ ಜೀವನ ಉನ್ನತ ಮಟ್ಟಕ್ಕೆ ಏರಲಿ, ಸಮಸ್ಯೆಗಳು ನಿವಾರಣೆ ಆಗಲಿ ಅನ್ನೋ ಆಶಯದೊಂದಿಗೆ ಜಾತ್ರೆ ಮುಕ್ತಾಯವಾಯ್ತು.

    Published by:ಗುರುಗಣೇಶ ಡಬ್ಗುಳಿ
    First published: