• Home
 • »
 • News
 • »
 • uttara-kannada
 • »
 • Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!

Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!

ವಡೆ ತೆಗೆಯೋ ವಿಡಿಯೋ ನೋಡಿ

"ವಡೆ ತೆಗೆಯೋ ವಿಡಿಯೋ ನೋಡಿ"

ಕುದಿಯೋ ಎಣ್ಣೆಗೆ ಕೈ ಹಾಕಲು ಮುಂಚಿತವಾಗಿಯೇ ಭಕ್ತರು ಹರಕೆ ಹೇಳಿಕೊಳ್ಳಬೇಕಾಗುತ್ತದೆ. ಹೀಗೆ ಹರಕೆ ಕಟ್ಟಿಕೊಂಡ ಭಕ್ತರು ಮಹಾಲಯ ಅಮಾವಾಸ್ಯೆ ದಿನದಿಂದಲೇ ಉಪವಾಸ ಇರಬೇಕಾಗುತ್ತೆ.

 • Share this:

  ಕಾರವಾರ: ಕೊತ ಕೊತ ಅಂತಾ ಕುದಿಯುತ್ತಿರೋ ಎಣ್ಣೆ, ಅದರಲ್ಲಿ ಬೇಯುತ್ತಿರೋ ವಡೆ. ಬರಿಗೈಲಿ ಕುದಿಯೋ ಎಣ್ಣೆಯೊಳಗೆ ಕೈಹಾಕಿ ವಡೆಯನ್ನು ಎತ್ತುತ್ತಿರೋ ಭಕ್ತರು! ಸುತ್ತ ನಿಂತವರ ಶ್ರೀರಮಣ ಗೋವಿಂದ ಗೋವಿಂದ ಉದ್ಘೋಷ! ಮೈ ಝುಮ್ ಅನಿಸೋ ವಾತಾವರಣ! ಹೀಗೆ ಸಾಲು ಸಾಲಾಗಿ ನಿಂತ ಭಕ್ತರ ಒಬ್ಬೊಬ್ಬರಾಗಿ ಬಿಸಿ ಎಣ್ಣೆಯಲ್ಲಿರೋ ವಡೆಯನ್ನು ತೆಗೆದು ಆಚೆ ಹಾಕುತ್ತಲೇ ಸಾಗುತ್ತಾರೆ. ಹಿರಿಯ ಅರ್ಚಕರೊಬ್ಬರು ಮುಂದೆ ನಿಂತು ಮಾರ್ಗದರ್ಶನ ನೀಡುತ್ತಾರೆ. ಉತ್ತರ ಕನ್ನಡ ಜಿಲ್ಲೆಯ (Uttara Kannada) ಕುಮಟಾದ ಕಾಮಾಕ್ಷ್ಮಿ ದೇವಸ್ಥಾನದಲ್ಲಿ (Kamakshi Temple Kumta) ಇಂತಹ ಆಚರಣೆ ನಡೆಯುತ್ತಿದೆ. ಕೊತ ಕೊತ ಕುದಿಯುವ ಎಣ್ಣೆಗೆ ಕೈ ಹಾಕಿದ ಯಾವ ಭಕ್ತರಿಗೂ Kamakshi Temple Devotees) ಅಪಾಯ ಎದುರಾಗಿಲ್ಲ ಅಂತಾರೆ ಭಕ್ತರು.


  ಸಾಮಾನ್ಯವಾಗಿ ಭೂಮಿ ಹುಣ್ಣಿಮೆ ದಿನದಂದು ಕುಮಟಾದ ಗುಜ್ಜರಗಲ್ಲಿ ಹಾಗೂ ಮೂರೂರುಕಟ್ಟೆಯಲ್ಲಿರುವ ಕಾಮಾಕ್ಷಿ ದೇಗುಲಗಳಲ್ಲಿ ಇಂತಹ ಆಚರಣೆ ನಡೆಯುತ್ತದೆ. ಇಲ್ಲಿ ಕುದಿಯುವ ಎಣ್ಣೆಗೆ ಕೈ ಹಾಕಿ ವಡೆ ತೆಗೆಯಲಾಗ್ತದೆ. ಇಲ್ಲಿರೋ ಅಧಿದೇವತೆ ಕಾಮಾಕ್ಷ್ಮಿ ಕನ್ನಡದ ನೆಲದ ದೇವತೆಯಲ್ಲ. ದೂರದ ಗುವಾಹಟಿಯಿಂದ ಬಂದು ನೆಲೆಸಿದವಳು ಅನ್ನೋ ನಂಬಿಕೆಯಿದೆ. ಅವಳ ಜೊತೆಗೆ ರಾಯೇಶ್ವರ ಹಾಗೂ ಕಾಲಭೈರವನೂ ಬಂದ ಎಂಬ ಪ್ರತೀತಿಯಿದೆ. ಹಾಗಾಗಿ ಈ ಆಚರಣೆಯನ್ನ ಗೌಡ ಸಾರಸ್ವತ ಸಮುದಾಯದವರಷ್ಟೇ ಆಚರಿಸಿಕೊಂಡು ಬಂದಿದ್ದಾರೆ.


  ಕುದಿಯೋ ಎಣ್ಣೆಗೆ ಕೈ ಹಾಕಲು ಮುಂಚಿತವಾಗಿಯೇ ಭಕ್ತರು ಹರಕೆ ಹೇಳಿಕೊಳ್ಳಬೇಕಾಗುತ್ತದೆ. ಹೀಗೆ ಹರಕೆ ಕಟ್ಟಿಕೊಂಡ ಭಕ್ತರು ಮಹಾಲಯ ಅಮಾವಾಸ್ಯೆ ದಿನದಿಂದಲೇ ಉಪವಾಸ ಇರಬೇಕಾಗುತ್ತೆ.


  ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


  ನಂತರ ಭೂಮಿ ಹುಣ್ಣಿಮೆಯ ರಾತ್ರಿ ತೀರ್ಥಸ್ನಾನ ಮಾಡಿ ಮಡಿಯಲ್ಲಿ ಬಂದು ಅರ್ಚಕರು ನೀಡುವ ತೀರ್ಥವನ್ನು ಕೈಗೆ ತಾಗಿಸಿಕೊಂಡು ಕುದಿಯುವ ಎಣ್ಣೆಗೆ ಕೈ ಹಾಕಿ ವಡೆ ತೆಗೆಯಬೇಕು. ಈ ಆಚರಣೆಯಲ್ಲಿ ಗೋವಾ, ಮಹಾರಾಷ್ಟ್ರದ ಭಕ್ತರು ಕೂಡಾ ಭಾಗವಹಿಸುತ್ತಾರೆ.


  ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


  ಒಟ್ಟಿನಲ್ಲಿ ಕುದಿಯುವ ಬಿಸಿ ಎಣ್ಣೆಗೆ ಕೈ ಹಾಕಿ ಬರೀಗೈಯ್ಯಲ್ಲಿ ವಡೆ ತೆಗೆಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆಯಲಾಗುತ್ತದೆ.

  Published by:ಗುರುಗಣೇಶ ಡಬ್ಗುಳಿ
  First published: