Uttara Kannada: ಹುಷಾರು ತಪ್ಪಿದರೆ ದೇವರೇ ಗತಿ! ಇದು ಹೊನ್ನಾವರದ ಮಹಿಮೆ!

ಓಟು ಹಾಕಿಸಿಕೊಂಡಿರುವ ಮಹಾನುಭಾವರು ಈ ಕಡೆ ಒಮ್ಮೆಯೂ ತಲೆ ಹಾಕದೇ ಎಷ್ಟು ಸಹಜವಾಗಿ ಈ ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ‌.

ಮಹಿಮೆ ಗ್ರಾಮದ ಅವ್ಯವಸ್ಥೆಯಿದು

"ಮಹಿಮೆ ಗ್ರಾಮದ ಅವ್ಯವಸ್ಥೆಯಿದು"

  • Share this:
    ಇದು ನಮ್ಮ ಹೊನ್ನಾವರದ ಮಹಿಮೆ ಗ್ರಾಮ ಇಲ್ಲಿ ಟ್ರಾಲಿಯಲ್ಲಿ ವಸ್ತುಗಳನ್ನಲ್ಲ, ಮನುಷ್ಯರನ್ನ ಸಾಗಿಸುತ್ತಾರೆ. ಇದ್ಯಾವುದೋ ಹಳ್ಳಿ ಜನರ ಸಂಪ್ರದಾಯ ಇರ್ಬೇಕು ಅನ್ಕೊಂಡ್ರೆ ಅದು ಶುದ್ಧ ಸುಳ್ಳು. ಇದು ಆ ಹಳ್ಳಿ ಜನರ ಸಂಕಷ್ಟದ ಕೈಗನ್ನಡಿ!  ಹೊನ್ನಾವರಕ್ಕೆ (Honnavara) ಬಂದು ಸಮುದ್ರದಲ್ಲಿ ಆಟವಾಡಿ, ಇಡಗುಂಜಿ ಗಣೇಶನ ದರ್ಶನ ಪಡೆದು, ಅಪ್ಸರಕೊಂಡದ ಜಲಪಾತದಲ್ಲಿ (Apsarkonda Falls) ಕುಣಿದಾಡಿ ಆರಾಮಾಗಿ ಎರಡೂ ಹೊತ್ತು ಮೀನೂಟ ಮಾಡಿ ಬರುವ ಯಾರಿಗೂ ಉತ್ತರ ಕನ್ನಡ ಜಿಲ್ಲೆಯ (Uttara Kannada) ಹೊನ್ನಾವರದ ಈ ಇನ್ನೊಂದು ಮುಖ ಕಾಣೋದಿಲ್ಲ, ಗೂಟದ ಕಾರುಗಳಿಗಂತೂ ಇದು ದೂರದ ದಾರಿ!

    ಓಟು ಹಾಕಿಸಿಕೊಂಡಿರುವ ಮಹಾನುಭಾವರು ಈ ಕಡೆ ಒಮ್ಮೆಯೂ ತಲೆ ಹಾಕದೇ ಎಷ್ಟು ಸಹಜವಾಗಿ ಈ ಗ್ರಾಮವನ್ನು ನಿರ್ಲಕ್ಷಿಸಿದ್ದಾರೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ‌.
    ಅಪ್ಪಿ ತಪ್ಪಿ ಇಂತಹ ಹಳ್ಳಿಗಾಡಿನಲ್ಲಿ ನೀವು ಹುಷಾರು ತಪ್ಪಿದರೆ ದೇವರೇ ಗತಿ!

    500 ಕ್ಕೂ ಹೆಚ್ಚು ಕುಟುಂಬ
    ಸುಮಾರು ಭಟ್ಕಳ ವಿಧಾನಸಭಾ ಕ್ಷೇತ್ರದ ಸುಮಾರು 500 ಕುಟುಂಬ ವಾಸವಾಗಿರೋ ಈ ಹಳ್ಳಿಗೆ ಇನ್ನೂ ಕೂಡ ಮೂಲಭೂತ ಸೌಕರ್ಯಗಳ ಲಭ್ಯತೆ ಇಲ್ಲ‌. ಜನ ಬೆಳೆಯುತ್ತಲೇ ಇದ್ದಾರೆ ಸಾಗುತ್ತಲೇ ಇದ್ದಾರೆ.

    Honnavara Mahime
    ಹೊನ್ನಾವರದ ಮಹಿಮೆ ಗ್ರಾಮಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಇದನ್ನೂ ಓದಿ: Havyaka Food Recipes: ಭಾರೀ ರುಚಿರುಚಿ ಹವ್ಯಕರ ಹಲಸಿನ ಬುಡ್ನಾ ! ಇಲ್ಲಿದೆ ರೆಸಿಪಿ

    ಯಾಕಂದ್ರೆ ಈ ರೀತಿ ನಿಮ್ಮನ್ನ ಹೈವೇ ತನಕ ಕರೆದುಕೊಂಡು ಬಂದು ನಂತರ ಬಾಡಿಗೆ ವಾಹನ ಮಾಡಿಕೊಂಡೇ ಆಸ್ಪತ್ರೆಗೆ ಕರೆದೊಯ್ಯಬೇಕು. ಅಬ್ಬಾ ಅನ್ನಿಸ್ತಿದೆಯಾ! ಬೇಸರ ಆಗ್ತಿದೆಯಾ? ಹಾಗಾದ್ರೆ ಅದನ್ನೆಲ್ಲ ಅನುಭವಿಸ್ತಿರೋ ಇವರ ಪಾಡು ಏನು ಹೇಳಿ ಇವರು ನಡೆಯುತ್ತಿರೋ ಪಡಿಪಾಟಲಿಗೆ ಆ ಊರಿನ ಗಿಡ, ಮರ, ತೊಂದರೆಗಳೇ ಮೂಕ ಸಾಕ್ಷಿ.

    ಇದನ್ನೂ ಓದಿ: Uttara Kannada: ಗೋಕರ್ಣದಲ್ಲಿ ಹೆಣ್ಣು ಹೆಣ್ಣಿಗೆ ಮದುವೆ! ಅದ್ದೂರಿ ವಿಡಿಯೋ ನೋಡಿ

    ಇದಕ್ಕೆಲ್ಲ ಅವರು ಯಾರನ್ನು ದೂರಬೇಕು? ವ್ಯವಸ್ಥೆಯನ್ನೋ ಅಥವಾ ಅವರ ಅವಸ್ಥೆಯನ್ನೋ? ಅದೇನೆ ಆಗಲಿ ಈ ಜನರಿಗೊಂದು ಉತ್ತಮ ಬದುಕು ಸಿಗಲಿ ಅನ್ನೋದೆ ನಮ್ಮ ಆಶಯ.

    ವರದಿ: ಎ.ನಿ.ನಿಖಿಲ್ ಮುಂಡಗೋಡು
    Published by:guruganesh bhat
    First published: