Free Health Check-up: ಉಚಿತವಾಗಿ ಕ್ಯಾನ್ಸರ್, ಹೃದ್ರೋಗ ತಪಾಸಣೆ; ಎಲ್ಲಿ, ಏನು, ಎತ್ತ?

ಹಾಗಾದರೆ ಈ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ತಪಾಸಣೆ ಮಾಡಿಸುವುದು ಹೇಗೆ? ನೀವೂ ಈ ಶಿಬಿರದಲ್ಲಿ ಭಾಗವಹಿಸಬಹುದೇ? ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಯಾವ ತಪಾಸಣೆಗಳನ್ನು ನಡೆಸಲಾಗುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada) ಉಚಿತ ಆರೋಗ್ಯ ತಪಾಸಣೆ  ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯವರಿಗೆ ಫ್ರೀ ಆಗಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್​ಗಳ (Super Speciality Hospital) ತಜ್ಞರಿಂದ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಹೌದು, ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ (Bhatkal Government Hospital) ಅಕ್ಟೋಬರ್ 1 ರಿಂದ ಸುರತ್ಕಲ್​ನ ಶ್ರೀನಿವಾಸ್ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಮೊದಲ ಬಾರಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ‌‌. ಹಾಗಾದರೆ ಈ ಆರೋಗ್ಯ ತಪಾಸಣೆ (Health Camp) ಕಾರ್ಯಕ್ರಮದಲ್ಲಿ ತಪಾಸಣೆ ಮಾಡಿಸುವುದು ಹೇಗೆ? ನೀವೂ ಈ ಶಿಬಿರದಲ್ಲಿ ಭಾಗವಹಿಸಬಹುದೇ? ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ (Free Health Check- up Camp) ಯಾವ ತಪಾಸಣೆಗಳನ್ನು ನಡೆಸಲಾಗುತ್ತದೆ? ಎಲ್ಲ ವಿವರ ಇಲ್ಲಿದೆ ನೋಡಿ.

    ಅಕ್ಟೋಬರ್ 1 ರ 9.00ರಿಂದ ಶಿಬಿರ ಆರಂಭವಾಗಲಿದ್ದು ಶಿಬಿರದಲ್ಲಿ ನಡೆಸುವ ತಪಾಸಣೆಗಳ ವಿವರ ಹೀಗಿದೆ. ಹೃದ್ರೋಗ ತಪಾಸಣೆ, ಕ್ಯಾನ್ಸರ್ ತಪಾಸಣೆ ಸೇರಿದಂತೆ ಹಲವು ರೋಗಿಗಳ ತಪಾಸಣೆ ಮಾಡಲಾಗುವುದು, ರೋಗ ಲಕ್ಷಣ ಕಂಡುಬಂದಲ್ಲಿ ಆಯುಷ್ಮಾನ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

    ಈ ಶಿಬಿರದಲ್ಲಿ ವೈದ್ಯರಾದ ಡಾ‌.ಸವಿತಾ ಕಾಮತ್, ಹೃದ್ರೋಗ ತಜ್ಞ ಡಾ‌.ಎಂ ಸುಬ್ರಹ್ಮಣ್ಯ ಸೇರಿದಂತೆ ಹಲವು ವೈದ್ಯರು ಚಿಕಿತ್ಸೆ ನೀಡಲಿದ್ದಾರೆ‌‌.

    ಅಂಕೋಲಾದಲ್ಲಿ ಸ್ವಾಸ್ಥ್ಯ ತಪಾಸಣಾ ಶಿಬಿರ
    ಸೆಪ್ಟೆಂಬರ್ 11ರಿಂದ ನಗರದ ಕೆ.ಎಲ್‌.ಇ ಸಂಸ್ಥೆಯ ಇನ್ಸ್​ಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಅಂಕೋಲಾದಲ್ಲಿ ಕೆ.ಎಂ.ಸಿ ಮಣಿಪಾಲ್ ತಜ್ಞ ವೈದ್ಯರ ತಂಡದಿಂದ ಆಯೋಜಿಸಲಾಗಿದೆ‌‌.  ಈ ಶಿಬಿರದಲ್ಲಿ  ಲಭ್ಯವಿರುವ ತಪಾಸಣೆಗಳ ವಿವರ ಹೀಗಿದೆ ನೋಡಿ.

    ಇದನ್ನೂ ಓದಿ: Kadubu Recipe: ಸಿಹಿಸಿಹಿಯಾದ ಉತ್ತರ ಕನ್ನಡ ಸ್ಪೆಷಲ್ ಕಡುಬು ಮಾಡಿ! ಇಲ್ಲಿದೆ ನೋಡಿ ರೆಸಿಪಿ

    1. ನೇತ್ರ ತಪಾಸಣೆ
    2. ಸಾಮಾನ್ಯ ಔಷಧಿ
    3. ಪ್ರಸೂತಿ ಮತ್ತು ಸ್ತ್ರೀರೋಗ
    4. ಚರ್ಮ, ಕಿವಿ, ಮೂಗು, ಗಂಟಲು

    ಸಂಬಂಧಿತ ಖಾಯಿಲೆಗೆ ತಪಾಸಣೆ ಹಾಗೂ ಔಷಧಿಯನ್ನು ಈ ಸ್ವಾಸ್ಥ್ಯ ತಪಾಸಣಾ ಶಿಬಿರದಲ್ಲಿ ದೊರೆಯಲಿದೆ.

    ಇದನ್ನೂ ಓದಿ: Sirsi Marikamba Temple Buffalo: ಮಾರಿಕಾಂಬೆಯ ಪಟ್ಟದ ಕೋಣ! ಇದು ಬಾಹುಬಲಿಗಿಂತ ಅಜಾನುಬಾಹು!

    ಈ ಎರಡೂ ಕೂಡ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜನಾನುರಾಗಿ ಯೋಜನೆಗಳಿಗೆ ಮಾದರಿ ಕೆಲಸವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರು ಈ ಎರಡೂ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

    ವರದಿ: ಎ.ಬಿ.ನಿಖಿಲ್, ಮುಂಡಗೋಡು
    Published by:ಗುರುಗಣೇಶ ಡಬ್ಗುಳಿ
    First published: