Havyaka Food Recipes: ಭಾರೀ ರುಚಿರುಚಿ ಹವ್ಯಕರ ಹಲಸಿನ ಬುಡ್ನಾ ! ಇಲ್ಲಿದೆ ರೆಸಿಪಿ

ಮಳೆಗಾಲದಲ್ಲಿ ಬಗೆಬಗೆಯ ಟೈಂ‌ ಪಾಸ್ ತಿಂಡಿಗಳನ್ನು ತಯಾರಿಸುವಲ್ಲಿ ಹಳ್ಳಿ ಜನರು ಎತ್ತಿದ ಕೈ. ಅದರಲ್ಲೂ ಹವ್ಯಕರು ಹಲಸಿನ ಬೀಜದಿಂದಲೂ ಸಿಹಿ ತಿಂಡಿಯನ್ನು ತಯಾರಿಸುತ್ತಾರೆ. ಅದ್ಹೇಗೆ ಅಂತೀರಾ? ಇಲ್ಲಿ ನೋಡಿ..

ಹಲಸಿನ ಬೇಳೆ ಬುಡ್ನಾ ಸವಿಯಿರಿ

"ಹಲಸಿನ ಬೇಳೆ ಬುಡ್ನಾ ಸವಿಯಿರಿ"

  • Share this:
    ಉತ್ತರ ಕನ್ನಡ: ಆಡು ಮುಟ್ಟದ ಸೊಪ್ಪಿಲ್ಲ ಹವ್ಯಕರು (Havyaka Community) ಮಾಡ್ದೇ ಇರೋ ಅಡುಗೆ ಇಲ್ಲ ಅಂತಾರೆ. ಹೌದು ,ಅದು ನಿಜಾನೇ.. ಯಾವ್ದು ವೇಸ್ಟ್ ಅಂತ ಬಿಸಾಕಿ ಬಿಡಬಹುದೋ ಅಂತಾದ್ರಲ್ಲೂ ಟೇಸ್ಟ್​ನ ಕಂಡುಹಿಡಿಯೋ ಜನ ಹವ್ಯಕರು. ಅಂತಹ ಹವ್ಯಕರ (Havyaka Food Recipes) ವಿಶೇಷ ಖಾದ್ಯವಾದ ಬೇಳೆ ಬುಡ್ನಾ ಮಾಡೋದನ್ನ ಇವತ್ ನಮ್ಗೆ ಹೇಳಿ ಕೊಡ್ತಾರೆ ಉತ್ತರ ಕನ್ನಡ ಜಿಲ್ಲೆಯ (Uttara Kannada)  ಶಿರಸಿಯ ಜ್ಯೋತಿ ಶಾಮ್ ಸುಂದರ್ (Sirsi Jyoti Shyamsundar) ಇವರು.. ಪ್ರತಿಭಾನ್ವಿತ ಬರಹಗಾರ್ತಿಯಾಗಿದ್ದು ಅಡುಗೆನ ಹವ್ಯಾಸ (Cooking) ಮಾಡ್ಕೊಂಡಿದಾರೆ. ಇಂದು ನಿಮಗೆ ಎಂದೇ ಹಲಸಿನ ಬೇಳೆಯ ಬುಡ್ನಾ ತಯಾರ್ಸಿದ್ದಾರೆ..ನೀವೂ ನೋಡಿ ಕಲಿಯಿರಿ, ಮಾಡಿ ಸವಿಯಿರಿ!

    ಬೇಳೆ ಬುಡ್ನಾ ಅಂದ್ರೆ ಇದೇ..
    ಏನಪ್ಪ ಬೇಳೆ ಬುಡ್ನಾ ಅಂತಿದೀರಾ? ಜಾಸ್ತಿ ಯೋಚನೆ ಮಾಡ್ಬೇಡಿ, ನಾವು ತಿಂದು ಬಿಸಾಡೋ ಹಲಸಿನ ಬೀಜದಿಂದ ತಯಾರಾಗೋ ರಸವತ್ತಾದ ಅಡುಗೆ ಇದು. ಈಗೆಲ್ಲ ಯಾರ್ರೀ ಹಳ್ಳಿ ಥರ ಹಲಸಿನ ಬೀಜನ ಸುಟ್ಕೊಂಡ್ ತಿಂತಾರೆ, ಬೇಯಿಸ್ಕೋಂಡ್ ತಿಂತಾರೆ ತೊಳೆ ಜೊತೆ ಅದನ್ನೂ ಕೂಡ ವೇಸ್ಟ್ ಅಂತ ಬಿಸಾಕಿಬಿಡ್ತಾರೆ.

    ಇದನ್ನೂ ಓದಿ: Gayatri Temple Tadas: ದಕ್ಷಿಣ ಭಾರತದ ಏಕೈಕ ಗಾಯತ್ರಿ ದೇಗುಲ! ತಡಸದಲ್ಲಿದೆ ತಪೋಭೂಮಿ!

    ಆದ್ರೆ ನಮ್ಗಳಿಗೆ ಮಾತ್ರ ಅದು ತಿನ್ನೋ ಪದಾರ್ಥಗಳೇ. ಯಾವುದೇ ಹಣ್ಣಿನ ಬೀಜಕ್ಕೆ ಇನ್ನೊಂದು ಮರನ ಸೃಷ್ಟಿ ಮಾಡೋ ಶಕ್ತಿ ಇರುತ್ತಂದ್ರೆ ಅದರಲ್ಲಿ ಎಷ್ಟು ಪೌಷ್ಠಿಕತೆ ಇರ್ಬೋದು ಯೋಚನೆ ಮಾಡಿ.. ಹಾಗಂತ ಎಲ್ಲಾ ಹಣ್ಣಿನ ಬೀಜ ತಿನ್ನೋಕಾಗೋಲ್ಲ ತಿನ್ನೋಕಂತನೇ ಕೆಲವು ಹಣ್ಣೀನ ಬೀಜಗಳಿವೆ ಅದರಲ್ಲೊಂದು ಹಲಸಿನ ಹಣ್ಣಿಂದು.

    ಹಲಸಿನ ಬುಡ್ನಾ ಹೀಗೆ ಮಾಡಿ
    ನಮ್ ಜ್ಯೋತಿ ಮೇಡಂ ಸಂಜೆ ಹೊತ್ತು ತಿನ್ನೋಕೆ, ಮಗಳಿಗೆ ಚಾಕಲೇಟ್ ಅನ್ನ ಮರೆಸೋಕೆ ಮಾಡೋ ಈ ತಿಂಡಿ ಬಗ್ಗೆ ಹೇಳ್ತಾರೆ ನೋಡಿ. ಮೊದ್ಲು ಹಲಸಿನ ಬೀಜದ ಸಿಪ್ಪೆ ಬಿಡ್ಸಿ ನಂತರ ಅದನ್ನ ಕುಕ್ಕರ್ ಅಲ್ಲಿ ಜಾಸ್ತಿ ನೀರು ಹಾಕದೇ ಬೇಯಿಸಿ, ಕಡೆಗೆ ಅದನ್ನ ಸೋಸಿ ಚೂರು ಒಣಗಿಸೋಕೆ ಇಟ್ಟು ಆ ಬೆಂದಿರೋ ಬೇಳೆಯನ್ನ ಮಿಕ್ಸಿಗೆ ಹಾಕಬೇಕು. ನಂತರ ಕಾಯಿತುರಿ ಹಾಗೂ ಏಲಕ್ಕಿ ಜೊತೆ ಪೇಸ್ಟ್ ಥರ ಆಗೋ ರೀತಿ ರುಬ್ಬಿಕೊಳ್ಳಿ, ನಂತರ ನಿಮಗೆ ಬೇಕಾದ ರೀತಿ ಅದನ್ನ ಕತ್ತರಿಸಿಕೊಂಡು ತುಪ್ಪದಲ್ಲಿ ಹದವಾಗಿ ಹುರಿಯಿರಿ. ಸಂಪೂರ್ಣ ಹುರಿದ ನಂತರ ನಿಮ್ಮ "ಹಲಸಿನ ಬುಡ್ನಾ" ರೆಡಿಯಾಗಿರುತ್ತೆ.

    ಇದನ್ನೂ ಓದಿ: Uttara Kannada: ಗೋಕರ್ಣದಲ್ಲಿ ಹೆಣ್ಣು ಹೆಣ್ಣಿಗೆ ಮದುವೆ! ಅದ್ದೂರಿ ವಿಡಿಯೋ ನೋಡಿ

    ಹಲಸಿನ ಬುಡ್ನಾ ಹೇಗೆ ಮಾಡೋದು ಅಂತಾ ಗೊತ್ತಾಯ್ತಲ್ವ, ಹಾಗಿದ್ರೆ ಇನ್ನೇಕ ತಡ, ಈ ಮಾನ್ಸೂನ್ ಮುಗಿಯೋದ್ರೊಳಗೆ ನೀವು ಒಂದ್ಸಲ ಟೇಸ್ಟ್ ಮಾಡ್ಕೊಳ್ಳಿ.

    ವರದಿ: ಎ.ಬಿ.ನಿಖಿಲ್
    Published by:guruganesh bhat
    First published: