• Home
  • »
  • News
  • »
  • uttara-kannada
  • »
  • Uttara Kannada: ಉತ್ತರ ಕನ್ನಡದ ಗ್ರಾಮ ಪಂಚಾಯತ್​ಗಳು ರಾಜ್ಯಕ್ಕೇ ಫಸ್ಟ್!

Uttara Kannada: ಉತ್ತರ ಕನ್ನಡದ ಗ್ರಾಮ ಪಂಚಾಯತ್​ಗಳು ರಾಜ್ಯಕ್ಕೇ ಫಸ್ಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಂದಿನ ಎರಡು ತಿಂಗಳ ಒಳಗಾಗಿ ಇಡೀ ಉತ್ತರ ಕನ್ನಡದ ಎಲ್ಲಾ ಗ್ರಾಮ ಪಂಚಾಯತ್​ಗಳಲ್ಲೂ ಡಿಜಿಟಲ್ ಕರ ಪಾವತಿಯ ಪಿಒಎಸ್ ಮೆಷಿನ್ ವಿತರಿಸಲಾಗುತ್ತಿದೆ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಕರ್ನಾಟಕದಲ್ಲೇ ಮೊದಲ ಬಾರಿಗೆ ಆನ್​ಲೈನ್​ನಲ್ಲಿ ಕರ ವಸೂಲಾತಿ (Online Tax Payment)  ಕೇಂದ್ರಗಳು ಉತ್ತರ ಕನ್ನಡದ ಎಲ್ಲಾ ಗ್ರಾಮ ಪಂಚಾಯತ್​ಗಳಲ್ಲೂ ಶುರು ಆಗಲಿವೆ, ಈ ಮೂಲಕ ಸಂಪೂರ್ಣ ನಗದು ರಹಿತ ವಹಿವಾಟಿಗೆ ಉತ್ತರ ಕನ್ನಡ ಜಿಲ್ಲೆಯ ಗ್ರಾಮಗಳು ಸಜ್ಜಾಗಿವೆ. ಈ ಮೊದಲೂ ಕೂಡ ಆನ್​ಲೈನ್ ಪಾವತಿಗೆ (Online Payment) ಅವಕಾಶವಿತ್ತು ಆದರೆ ಗೂಗಲ್ ಪೇನಂತಹ ಖಾಸಗಿ ಅಪ್ಲಿಕೇಶನ್​ಗಳಿಗೆ ಅವಕಾಶವನ್ನು ನೀಡಲಾಗಿರಲಿಲ್ಲ ಆದರೆ ಈಗ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ (Uttara Kannada Zilla Panchayat) ಜಿಲ್ಲಾ ಸಹವರ್ತಿ ಬ್ಯಾಂಕ್ ಕೆನರಾ ಬ್ಯಾಂಕ್ (Canara Bank) ಮೂಲಕ ಈ ಕೊರತೆಯನ್ನು ನೀಗಿಸಲು ಮುಂದಾಗಿದೆ.


    ಉತ್ತರ ಕನ್ನಡ ಜಿಲ್ಲಾ ಪಂಚಾಯತ್​ನ ಕಾರ್ಯನಿರ್ವಹಣಾಧಿಕಾರಿ ಸಿ. ಪ್ರಿಯಾಂಕಾ ಅವರ ದೂರದೃಷ್ಟಿಯ ಮೂಲಕ ಈ ಯೋಜನೆ ಜಾರಿಯಾಗುತ್ತಿದೆ. ಹಾಗೂ ಜಿಲ್ಲೆಯ 95 ಗ್ರಾಮ ಪಂಚಾಯಿತಿಗೆ ಪಿಓಎಸ್ ಮೆಷಿನ್ ನೀಡಲಾಗಿದೆ.


    ಇದನ್ನೂ ಓದಿ: Uttara Kannada: ಶಿವನಿಗೂ ಗಂಗೆಗೂ ಅದ್ದೂರಿ ಕಲ್ಯಾಣ! ಮದುವೆ ಆಲ್ಬಂ ನೋಡಿ!


    ಈಗಾಗಲೇ 95 ಗ್ರಾಮಗಳಲ್ಲಿ ನಗದು ರಹಿತ ವಹಿವಾಟು
    ಈ ಯೋಜನೆಯ ಮೂಲಕ ಪ್ರಾಥಮಿಕವಾಗಿ 229 ಗ್ರಾಮ ಪಂಚಾಯತ್​ಗಳಿಗೆ ಪಿಓಎಸ್ ಮೆಷಿನ್​ಗಳನ್ನು ವಿತರಿಸುವ ಗುರಿ ಇತ್ತು ಅದರಲ್ಲಿ ಈಗಾಗಲೇ 95 ಗ್ರಾಮಗಳು ನಗದು ರಹಿತ ವಹಿವಾಟು ನಡೆಸುತ್ತಿವೆ. ಮುಂದಿನ ಎರಡು ತಿಂಗಳ ಒಳಗಾಗಿ ಇಡೀ ಉತ್ತರ ಕನ್ನಡದ ಎಲ್ಲಾ ಗ್ರಾಮ ಪಂಚಾಯತ್​ಗಳಲ್ಲೂ ಡಿಜಿಟಲ್ ಕರ ಪಾವತಿಯ ಪಿಒಎಸ್ ಮೆಷಿನ್ ವಿತರಿಸಲಾಗುತ್ತಿದೆ.


    ಇದನ್ನೂ ಓದಿ: Uttara Kannada: ಆಕಳ ರಕ್ಷಣೆ ಹುಲಿಯ ಹೊಣೆ! ಕದಿಯೋಕೂ ಇದೆ ಅನುಮತಿ!


    ಈ ಮೂಲಕ ಕರ್ನಾಟಕದ ಮೊದಲ ಡಿಜಿಟಲ್ ಗ್ರಾಮ ಪಂಚಾಯತ್​ಗಳು ಎಂಬ ಹೆಗ್ಗಳಿಕೆಗೆ ಉತ್ತರ ಕನ್ನಡದ ಪಂಚಾಯತ್​ಗಳು ಪಾತ್ರವಾಗಲಿವೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: