Gadi Mari: ಈ ದೇವಿಗೆ ರಸ್ತೆಬದಿಯೇ ಗತಿ! ಊರಿಂದೂರಿಗೆ ಕಸ ಸಾಗಿಸುವ ದೇವರು!

ಪ್ರತಿ ಎರಡು ವರ್ಷಕ್ಕೊಮ್ಮೆ ಇಂತಹ ಜಾನಪದ ಆಚರಣೆಯನ್ನ ಉತ್ತರ ಕನ್ನಡ ಭಾಗದಲ್ಲಿ ಕಾಣಬಹುದು. ಇನ್ನು ಮಾರಿ ಹೊರೆಯನ್ನು ಊರಿಂದ ಹೊರಗೆ ಸಾಗಿಸುವಾಗಲೂ ಯಾವುದೇ ಆಚರಣೆ ಮಾಡಲ್ಲ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಶಿರಸಿ: ಇಲ್ಲಿ ಗುಡಿ ಗುಂಡಾರಗಳಿಲ್ಲ, ಪೂಜೆ, ಮಂತ್ರ ತಂತ್ರಗಳಿಲ್ಲ. ವೈಭವದಿಂದ ಅಲಂಕಾರಗೊಂಡ ಮೂರ್ತಿಯೂ ಇಲ್ಲ. ಅದೆಲ್ಲೋ ರಸ್ತೆ ಬದಿಯಲ್ಲೇ ಈ ದೇವರಿಗೆ ಜಾಗ! ಹಾಗಾಗಿಯೇ ನೋಡಿ, ಗಡಿಯಿಂದ ದೂರವೇ ಇಳಿಸಿ ಈ ದೇವರಿಗೆ ಹರಕೆ ಸಲ್ಲಿಸಿ ಭಕ್ತರು ವಾಪಸ್ ಆಗ್ತಾರೆ. ಇಂತಹ ಆಚರಣೆ ಇಂದಿಗೂ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿದೆ. ಊರ ಮಾರಿಯನ್ನ ದೂರ ಮಾಡುವ ಉದ್ದೇಶ ಈ ಆಚರಣೆಯಲ್ಲಿದೆ. ಇಲ್ಲಿ ಮಾರಿ ದೇವತೆಯ (Mari Goddess)ಮೂರ್ತಿಗಳನ್ನ ಕಟ್ಟಿಗೆಯಿಂದ ಮಾಡಿರುತ್ತಾರೆ. ಊರಿನ ಎಲ್ಲಾ ಜನ ಭೇದ-ಭಾವವಿಲ್ಲದೇ ಪೂಜಿಸುವ ಈ ಮೂರ್ತಿಗಳಿಗೆ ಕೆಂಪಿದ್ದರೆ ಮಾರಿ, ಬೆಳ್ಳಗಿದ್ದರೆ ದುರ್ಗೆ ಎಂದು ಹೇಳಲಾಗುತ್ತೆ.

    ಮೊರದಲ್ಲಿ ಹಾಳಾಗಿರುವ ಬಟ್ಟೆ ಎಲೆ-ಅಡಿಕೆ, ಬಾಳೆಹಣ್ಣಿನೊಂದಿಗೆ ಸೇರಿಸಿ ಅದರ ಜೊತೆ ಕಸ ಎಂದು ಬೇಡವಾದ ವಸ್ತುಗಳನ್ನು ಹರಕೆ ರೂಪದಲ್ಲಿ ದೇವಿಗೆ ಅರ್ಪಿಸಲಾಗುತ್ತದೆ. ಜನ ಭಯ-ಭಕ್ತಿಯಿಂದ ಹರಕೆ ಕಟ್ಟಿಕೊಂಡು ನಮಗೆ ರೋಗ-ರುಜಿನಗಳು ಕಾಡದಿರಲಿ ಅಂತ ಬೇಡಿಕೊಳ್ತಾರೆ.

    ಇದನ್ನೂ ಓದಿ: Uttara Kannada: ಉತ್ತರ ಕನ್ನಡಕ್ಕೆ ಸದ್ದಿಲ್ದೇ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ!

    ಹಳೆ ಬಟ್ಟೆ, ಹಳೆ ವಸ್ತು, ಉಪ್ಪು ನೀಡಿ ಸಾಗಣೆ
    ಪ್ರತಿ ಎರಡು ವರ್ಷಕ್ಕೊಮ್ಮೆ ಇಂತಹ ಜಾನಪದ ಆಚರಣೆಯನ್ನ ಉತ್ತರ ಕನ್ನಡ ಭಾಗದಲ್ಲಿ ಕಾಣಬಹುದು. ಇನ್ನು ಮಾರಿ ಹೊರೆಯನ್ನು ಊರಿಂದ ಹೊರಗೆ ಸಾಗಿಸುವಾಗಲೂ ಯಾವುದೇ ಆಚರಣೆ ಮಾಡಲ್ಲ. ಒಂದು ವಾಹನ ಮಾಡಿಕೊಂಡು ಪಕ್ಕದ ಗಡಿಗೆ ಬಿಡುತ್ತಾರೆ. ಹಾಗೆ ಮುಂದಿನ ಊರಿನವರು ತಮ್ಮ ಹರಕೆ ಕಟ್ಟಿಕೊಂಡು ದೇವಿಗೆ ಇದೇ ರೀತಿ ಮರದ ತುಂಬಾ ಹಳೆ ಬಟ್ಟೆ, ಹಳೆ ವಸ್ತು, ಉಪ್ಪು ನೀಡಿ ಸಾಗಿಸುತ್ತಾರೆ.

    ಇದನ್ನೂ ಓದಿ: Sirsi Red Fort: ಶಿರಸಿಯಲ್ಲೇ ಇದೆ ಕೆಂಪುಕೋಟೆ! ಒಳಗಿದ್ದಾನೆ ಗಣಪ!

    ಗಡಿ ಮಾರಿ ಆಚರಣೆ ಧಾರ್ಮಿಕವಾಗಿ ಅದೆಷ್ಟು ಸತ್ಯವೋ, ಅಸತ್ಯವೋ ಅನ್ನೋದು ಗೊತ್ತಿಲ್ಲ. ಆದ್ರೆ ಮನೆಯಲ್ಲಿರೋ ನಿರುಪಯುಕ್ತ ವಸ್ತುಗಳ ವಿಲೇವಾರಿಯಂತೂ ಈ ಆಚರಣೆಯಿಂದ ಆಗ್ತಿದೆ ಅನ್ನೋದಂತೂ ಸತ್ಯ.

    ವರದಿ: ಎ.ಬಿ.ನಿಖಿಲ್, ಮುಂಡಗೋಡು
    Published by:ಗುರುಗಣೇಶ ಡಬ್ಗುಳಿ
    First published: