• Home
  • »
  • News
  • »
  • uttara-kannada
  • »
  • Uttara Kannada: ಆಕಳ ರಕ್ಷಣೆ ಹುಲಿಯ ಹೊಣೆ! ಕದಿಯೋಕೂ ಇದೆ ಅನುಮತಿ!

Uttara Kannada: ಆಕಳ ರಕ್ಷಣೆ ಹುಲಿಯ ಹೊಣೆ! ಕದಿಯೋಕೂ ಇದೆ ಅನುಮತಿ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಈ ಹಬ್ಬದಂದು ಚಿಕ್ಕ ಪುಟ್ಟ ವಸ್ತುಗಳನ್ನು ಕದಿಯಲು ಅನುಮತಿ ಇರುತ್ತದೆ‌. ಇದೊಂದು ಸಂಪ್ರದಾಯವಾಗಿ ಆಚರಿಸಿಕೊಂಡು ಬರಲಾಗಿದೆ‌.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ನೀವು ದೇವರಿಗೆ ಪೂಜೆ ಮಾಡುವುದರ ಕುರಿತು ಕೇಳಿರುತ್ತೀರಿ ಆದರೆ ಪ್ರಾಣಿಯನ್ನು ದೇವರರೂಪದಲ್ಲಿ ಪೂಜಿಸುವುದನ್ನು ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಕಾಣಬಹುದು. ಉತ್ತರ ಕನ್ನಡದ (Uttara Kannada) ಯಲ್ಲಾಪುರ, ಸಿದ್ದಾಪುರ, ಶಿರಸಿ ಭಾಗದಲ್ಲಿ ಹುಲಿಯಪ್ಪನ ಪೂಜೆ ಮಾಡಲಾಗುತ್ತದೆ. ಹುಲಿಯಪ್ಪನ ಪೂಜೆ (Huliyappa Puja) ಒಂದು ವಿಶೇಷ ಆಚರಣೆ. ನಮ್ಮಲ್ಲಿ ಪ್ರಾಣಿಗಳನ್ನೂ ಸಹ ದೇವರ ಸ್ಥಾನದಲ್ಲಿಟ್ಟೂ ಪೂಜಿಸುವ ಪದ್ದತಿ ಇದೆ.‌ ಈ ಪದ್ದತಿಯಂತೆ ಹುಲಿಯನ್ನು ದೇವರೆಂದು ಪೂಜಿಸಲಾಗುತ್ತದೆ. ಕಾಡಿಗೆ ಮೇಯಲು ಹೋದ ದನ ಕರುಗಳಿಗೆ ಅಪಾಯವಾಗದಿರಲಿ ಎಂದು ಈ ಪದ್ದತಿ ಆಚರಣೆಯಲ್ಲಿದೆ.


    ಮನೆಯಲ್ಲಿ ಎಷ್ಟು ದನ, ಕರು, ನಾಯಿ, ಬೆಕ್ಕುಗಳಿರುತ್ತವೆಯೋ ಅಷ್ಟು ಕಾಯಿಯನ್ನು ಒಡೆಯಲಾಗುತ್ತದೆ. ಊರಿನ‌ ಜನರೆಲ್ಲಾ ಒಂದೆಡೆ‌‌ ಸೇರಿ ಒಡೆಸಿದ ಕಾಯಿ ರಾಶಿಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ.


    ದನ ಕರುಗಳಿಗೆ ಅಪಾಯ ಬಾರದಿರಲಿ
    ಅದರಲ್ಲೂ ದೀಪಾವಳಿಯ ಸಮಯದಲ್ಲಿ ಹುಲಿಯಪ್ಪನಿಗೊಂದು ವಿಶೇಷ ಪೂಜೆ ಇದ್ದೇ ಇರುತ್ತದೆ. ಕಾಡಿಗೆ ಮೇಯಲು ಹೋದ ದನ ಕರುಗಳಿಗೆ ಅಪಾಯ ಬಾರದಿರಲಿ ಎಂದು ಹುಲಿಯಪ್ಪನನ್ನು ಬೇಡಿಕೊಳ್ಳಲಾಗುತ್ತದೆ.


    ಇದನ್ನೂ ಓದಿ: Uttara Kannada: ಶಿವನಿಗೂ ಗಂಗೆಗೂ ಅದ್ದೂರಿ ಕಲ್ಯಾಣ! ಮದುವೆ ಆಲ್ಬಂ ನೋಡಿ!


    ಬೂದೆ ಕಳು ಬಗ್ಗೆ ನಿಮಗೆ ಗೊತ್ತೇ?
    ಉತ್ತರ ಕನ್ನಡದಲ್ಲಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹಲವಾರು ಸಂಪ್ರದಾಯಗಳನ್ನು ದೀಪಾವಳಿಯ ಮೂರು ದಿನಗಳ ಕಾಲ ನಡೆಸಲಾಗುತ್ತದೆ. ಬೂದೆ ಕಳು ಎಂಬ ಹಬ್ಬವನ್ನು ದೀಪಾವಳಿ ಹಿಂದಿನ ದಿನ ಆಚರಿಸಲಾಗುತ್ತದೆ.


    ಕದಿಯೋಕೆ ಇರುತ್ತೆ ಅಧಿಕೃತ ಅನುಮತಿ
    ಈ ಹಬ್ಬದಂದು ಚಿಕ್ಕ ಪುಟ್ಟ ವಸ್ತುಗಳನ್ನು ಕದಿಯಲು ಅನುಮತಿ ಇರುತ್ತದೆ‌. ಇದೊಂದು ಸಂಪ್ರದಾಯವಾಗಿ ಆಚರಿಸಿಕೊಂಡು ಬರಲಾಗಿದೆ‌. ಅದೇ ದಿನ ರಾತ್ರಿ ಬಲೀಂದ್ರ ಬರುತ್ತಾ ಸ್ನಾನದ ನೀರಿನ ಹಂಡೆ ಪೂಜೆ ಮಾಡಲಾಗುತ್ತದೆ‌. ಮರುದಿನ‌ ಬೆಳಿಗ್ಗೆ ಗಣಪತಿ ಮಂಡಲ ಪೂಜಿಸಿ ಒಬ್ಬರಿಗೊಬ್ಬರು ಎಣ್ಣೆ ಹಚ್ಚುವ ಸಂಪ್ರದಾಯವಿದೆ. ಇದಾದ ನಂತರ ಬಿಸಿ ನೀರಿನ ಸ್ನಾನ ಮಾಡಿ ಮನೆಯಲ್ಲೇ ಮಾಡಿದ ಕಾಡಿಗೆ ಹಚ್ಚಿಕೊಳ್ಳುತ್ತಾರೆ.


    ಇದನ್ನೂ ಓದಿ: Uttara Kannada: ಮಹಿಳೆಯರಿಂದ ರುದ್ರ ಪಠಣ! ಮಂತ್ರಘೋಷದ ಝೇಂಕಾರ

    ಇನ್ನು ಕೆಲ ಸಂದರ್ಭದಲ್ಲಿ ದನ,ಕರು, ಬೆಕ್ಕು, ನಾಯಿ ಯಾವುದೇ ಸಾಕು ಪ್ರಾಣಿಗೆ ಅನಾರೋಗ್ಯ ಉಂಟಾದಲ್ಲಿ ಹುಲಿಯಪ್ಪನಿಗೆ ಕಾಯಿ ಒಡೆಸಿಕೊಳ್ಳುವುದಾಗಿ ಹರಕೆ ಹೊತ್ತುಕೊಂಡಿರುತ್ತಾರೆ. ಹುಲಿಯಪ್ಪ ಬೆಣ್ಣೆ ಪ್ರಿಯ, ಪ್ರತಿವರ್ಷವೂ ಪ್ರತಿ ಮನೆಯಿಂದಲೂ ಹುಲಿಯಪ್ಪನ ಪೂಜೆಯಂದು ಬೆಣ್ಣೆ ಮಾಡಲಾಗುತ್ತದೆ.


    ವರದಿ: ಸುಮಾ ಕಂಚೀಪಾಲ್

    Published by:ಗುರುಗಣೇಶ ಡಬ್ಗುಳಿ
    First published: