• Home
  • »
  • News
  • »
  • uttara-kannada
  • »
  • Uttara Kannada: ನೀವು 18ರಿಂದ 45 ವರ್ಷ ವಯಸ್ಸಿನವರೇ? ಇಲ್ಲಿದೆ ನೋಡಿ ಒಳ್ಳೆ ಅವಕಾಶ

Uttara Kannada: ನೀವು 18ರಿಂದ 45 ವರ್ಷ ವಯಸ್ಸಿನವರೇ? ಇಲ್ಲಿದೆ ನೋಡಿ ಒಳ್ಳೆ ಅವಕಾಶ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇನ್ನು ತರಬೇತಿಯ ವಿಶೇಷತೆ ಬಗ್ಗೆ ಹೇಳುವುದಾದರೆ ಊಟ, ವಸತಿ ಸಂಪೂರ್ಣ ಉಚಿತ. ಗ್ರಾಮೀಣ ಭಾಗದ ಜನರಿಗೆ ಆದ್ಯತೆ ಇರಲಿದೆ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ  (Uttara Kannada) ಹಳಿಯಾಳದ ದೇಶಪಾಂಡೆ ರುಡ್ ಸೆಟ್ ಸಂಸ್ಥೆಯು ಯುವಕ-ಯುವತಿಯರಿಗೆ ನಾನಾ ರೀತಿಯ ವೃತ್ತಿಪರ ತರಬೇತಿಗಳನ್ನು ನೀಡಿ ಅವರನ್ನು ನಿರುದ್ಯೋಗಿಗಳಿಂದ ಉದ್ಯೋಗಿ, ವ್ಯಾಪಾರಸ್ಥ, ಮಾಲೀಕರನ್ನಾಗಿಸುವಲ್ಲಿ ಸಫಲವಾಗಿದೆ. ಈಗಾಗಲೇ ಸಂಸ್ಥೆಯ ಅಡಿಯಲ್ಲಿ ನೂರಾರು ತರಬೇತಿಗಳು ಅಸ್ತಿತ್ವದಲ್ಲಿವೆ. ಈಗ ಇದೇ ಹಳಿಯಾಳದ ರುಡ್ ಸೆಟ್ ಸಂಸ್ಥೆಯು (Canara Bank Deshpande Rural Self Employment Training Institute)  ಕೆನರಾ ಬ್ಯಾಂಕ್ ಸಹಯೋಗದಲ್ಲಿ ಮತ್ತೊಂದು ವಿಶೇಷ ಕಾರ್ಯಕ್ರಮಕ್ಕೆ ಮುಂದಾಗಿದೆ ಅದೇನು? ಎಂದು ಕೇಳುತ್ತೀರಾ? ಇಲ್ಲಿದೆ ನೋಡಿ ಸಮಗ್ರ ಮಾಹಿತಿ!


    ಹಳಿಯಾಳದ ಕೆನರಾ ಬ್ಯಾಂಕ್ ಹಾಗೂ ದೇಶಪಾಂಡೆ ರುಡ್ ಸೆಟ್ ಇವೆರೆಡರ ಸಹಯೋಗದಲ್ಲಿ ಮೂರು ಉದ್ಯೋಗ ತರಬೇತಿಯನ್ನು ಗ್ರಾಮೀಣ ಭಾಗದ ನಿರುದ್ಯೋಗಿ ಯುವ ಜನತೆಗೆ ನೀಡಲಾಗುತ್ತಿದೆ.


    ಯಾವೆಲ್ಲ ತರಬೇತಿ ಸಿಗುತ್ತೆ?
    30 ದಿನಗಳ ದ್ವಿಚಕ್ರ ವಾಹನ ದುರಸ್ಥಿ, ಹೈನುಗಾರಿಕೆ, ಎರೆಹುಳು, ಗೊಬ್ಬರ ತಯಾರಿಕೆ. ಈ ಮೂರು ವಿಷಯಗಳನ್ನು ತಜ್ಞರ ಸಹಾಯದಿಂದ ಬೋಧಿಸಲಾಗುವುದು. ಇನ್ನು ತರಬೇತಿಯ ವಿಶೇಷತೆ ಬಗ್ಗೆ ಹೇಳುವುದಾದರೆ ಊಟ, ವಸತಿ ಸಂಪೂರ್ಣ ಉಚಿತ. ಗ್ರಾಮೀಣ ಭಾಗದ ಜನರಿಗೆ ಆದ್ಯತೆ ಇರಲಿದೆ.


    ಯಾವ ರೀತಿಯ ನಿಯಮಾವಳಿಗಳಿವೆ?
    ತರಬೇತಿಯಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ವಯೋಮಿತಿ 18-45ರ ಒಳಗಿರಬೇಕು. ನವೆಂಬರ್ 25ರ ಒಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ತರಬೇತಿ ಪಡೆದುಕೊಳ್ಳಲು ಬಯಸುವವರು ತಮ್ಮ ಭಾವಚಿತ್ರ ಹಾಗೂ ಆಧಾರ್ ಕಾರ್ಡ್ ಅನ್ನು ಸಂಸ್ಥೆಗೆ ಹೋಗಿ ಸಲ್ಲಿಸಬಹುದಾಗಿದೆ.


    ಇದನ್ನೂ ಓದಿ: Siddapur Stone Bridge: ಉತ್ತರ ಕನ್ನಡದ ಈ ಬೃಹತ್ ಕಲ್ಲಿನ ಸೇತುವೆ ನಿರ್ಮಿಸಿದ್ದಾದ್ರೂ ಯಾರು!?


    ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ವಿವರ
    ಹೆಚ್ಚಿನ ಮಾಹಿತಿಗಾಗಿ ಹಳಿಯಾಳ ಕೆನರಾ ಬ್ಯಾಂಕ್ ಹಾಗೂ ದೇಶಪಾಂಡೆ ರುಡ್ ಸೆಟ್ ಗಳನ್ನು ಸಂಪರ್ಕಿಸಲು ಈ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 


    ಕೆನರಾ ಬ್ಯಾಂಕ್ ದೇಶಪಾಂಡೆ ರುಡ್ ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾನಗರ, ಹಳಿಯಾಳ, 581329


    ದೂರವಾಣಿ ಸಂಖ್ಯೆ: 9482188780,9483485489


    ಇದನ್ನೂ ಓದಿ: Uttara Kannada: 22 ಸಾವಿರ ಕಿಮೀ ದೂರದಿಂದ ಉತ್ತರ ಕನ್ನಡಕ್ಕೆ ಹಾರಿಬಂದ ಅತಿಥಿಗಳು!


    ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಮೇಲೆ ನೀಡಿದ ಕೊಂಡಿಯ ಮೂಲಕ ಉದ್ಯೋಗಾವಕಾಶ ಹಾಗೂ ತರಬೇತಿಗಳ ಮಾಹಿತಿ ಪಡೆದುಕೊಳ್ಳಬಹುದು.
    ಡಿಸೆಂಬರ್ ತಿಂಗಳಿನಲ್ಲಿ ತರಬೇತಿಗಳು ಆರಂಭವಾಗಲಿವೆ.

    Published by:ಗುರುಗಣೇಶ ಡಬ್ಗುಳಿ
    First published: