Uttara Kannada: ಕಾಮನಬಿಲ್ಲು ಮೂಡಿಸೋ ಸುಂದರ ಜಲಪಾತವಿದು, ಮಳೆಗಾಲದಲ್ಲಿ ಮಿಸ್ ಮಾಡ್ಬೇಡಿ

X
ಬ್ರಿಟಿಷ್‌ ಅಧಿಕಾರಿ ಅನ್ವೇಷಿಸಿದ ಜಲಪಾತ

"ಬ್ರಿಟಿಷ್‌ ಅಧಿಕಾರಿ ಅನ್ವೇಷಿಸಿದ ಜಲಪಾತ"

ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯೋ ಉಂಚಳ್ಳಿ, ಬೇಸಿಗೆ ಆರಂಭವಾಗುತ್ತಿದ್ದಂತೆ ರೇಷ್ಮೆ ನೂಲಿನಂತೆ ಹರಿದು ಹೋಗುತ್ತೆ. ಈ ಸ್ಥಳವನ್ನ ನೋಡುವುದೇ ಒಂದು ಸುಂದರ ಅನುಭವ. ಈ ಸುಂದರ ಫಾಲ್ಸ್​ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಕರಿ ಬಂಡೆ ಕಲ್ಲಿನ (Stone) ಮೇಲೆ ಹಾಲ್ನೊರೆಯಾಗಿ ಧುಮ್ಮಿಕ್ಕೋ ಈ ಜಲಪಾತದ (Falls) ಸೊಬಗು ಅದ್ಭುತ. ಆವಾಗಲೋ, ಈವಾಗಲೋ ಒಮ್ಮೆ ಮೂಡಿಸೋ ಕಾಮನಬಿಲ್ಲಿನ (Rainbow) ಚಿತ್ತಾರ ಈ ಜಲಪಾತಕ್ಕೊಂದು ಅಲಂಕಾರ. ಮಳೆ ಶುರುವಾಯಿತೆಂದ್ರೆ ಅಬ್ಬರಿಸೋ ಈ ಫಾಲ್ಸ್‌, ಅದೇ ಬೇಸಿಗೆಯಲ್ಲಿ ಶಾಂತ ಸ್ವರೂಪಿ. ಹಾಗಿದ್ರೆ ವಿಶಾಲವಾಗಿ ಚಾಚಿಕೊಂಡಿರುವ ಈ ಜಲಪಾತವಾದ್ರೂ ಯಾವುದು ಅಂತೀರ? ಈ ಕುರಿತ ಡೀಟೆಲ್ಸ್‌ ಇಲ್ಲಿದೆ ನೋಡಿ.


ಲುಷಿಂಗ್‌ ಟನ್‌ ಫಾಲ್ಸ್‌ !


 ಇದು ಉತ್ತರ ಕನ್ನಡ ಸಿದ್ಧಾಪುರದ ಉಂಚಳ್ಳಿ ಫಾಲ್ಸ್.. ಈ ಜಲಪಾತ ಯಾವುದೇ ಸಮಯದಲ್ಲೂ ಕಿಕ್‌ ನೀಡಬಲ್ಲಷ್ಟು ಸೊಬಗನ್ನು ಹೊಂದಿದೆ. ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯೋ ಉಂಚಳ್ಳಿ, ಬೇಸಿಗೆ ಆರಂಭವಾಗುತ್ತಿದ್ದಂತೆ ರೇಷ್ಮೆ ನೂಲಿನಂತೆ ಹರಿದು ಹೋಗುತ್ತೆ. ಸ್ಥಳೀಯವಾಗಿ ಇದನ್ನ ಕಪ್ಪೆ ಜೋಗ ಅಂತಾ ಕರೆದ್ರೆ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್‌ ಅಧಿಕಾರಿ ಲುಷಿಂಗ್‌ ಟನ್‌ ಈ ಜಲಪಾತವನ್ನು ಕಂಡು ಹಿಡಿದ್ರಿಂದ ಇಂದಿಗೂ ದಾಖಲೆಗಳಲ್ಲಿ ಇದ್ರ ಹೆಸರು ಲುಷಿಂಗ್‌ ಟನ್ ಫಾಲ್ಸ್‌ ಎಂದೇ ಗಮನಿಸಬಹುದಾಗಿದೆ. ಏನೇ ಇರಲಿ ಪ್ರಕೃತಿಯ ನಡುವೆ ಅಘನಾಶಿನಿಯ ವಿಶಾಲ ಹಳ್ಳದಿಂದ ಕಣಿವೆ ಧುಮ್ಮಿಕ್ಕೋ ಈ ಜಲಪಾತಕ್ಕೆ ಅದ್ಯಾವ ಹೆಸರಿನ ಹಂಗೂ ಇಲ್ಲದೇ, ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತೆ.



ಕಾಮನಬಿಲ್ಲಿನ ರಂಗು


ವಿಶೇಷ ಅಂದ್ರೆ 116 ಅಡಿ ಎತ್ತರದಿಂದ ಕಪ್ಪು ಬಂಡೆಗಳ ಮೇಲೆ ಧುಮ್ಮಿಕ್ಕುವ ಈ ಜಲಪಾತ ಆಗೊಮ್ಮೆ ಈಗೊಮ್ಮೆ ನೀರ ನಡುವೆ ಹುಟ್ಟಿಸುವ ಕಾಮನಬಿಲ್ಲಿನ ರಂಗು ನೋಡೋದೆ ಚಂದ. ನೀರಿನ ಜೊತೆ ರಂಗು ಬೆರೆಸಿ ಮೂಡುವ ಮಾಯೆಗೆ ಮನಸೋಲದವರೇ ಇಲ್ಲ. ಅದೇ ರೀತಿ ಕಾರ್ತಿಕ ಹುಣ್ಣಿಮೆಯ ದಿನದಿಂದ ಎರಡ್ಮೂರು ದಿವಸದವರೆಗೆ ಇಲ್ಲಿ ಮಧ್ಯರಾತ್ರಿ ಚಂದ್ರಧನಸ್ಸು ಮೂಡುತ್ತವೆಯಂತೆ. ಇಂತಹ ಚಂದ್ರಧನುಸ್ಸು ಬೀಳುವ ಕೆಲವೇ ಕೆಲವು ಜಲಪಾತಗಳಲ್ಲಿ ಈ ಉಂಚಳ್ಳಿಯೂ ಒಂದು ಅನ್ನೋ ಹೆಗ್ಗಳಿಕೆಯಿದೆ. ದಟ್ಟ ಕಾಡಿನ ನಡುವೆ ಮೂಡುವ ವಿಸ್ಮಯಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದ್ಯಂತೆ.


ಎಲ್ಲಿದೆ ಈ ಫಾಲ್ಸ್‌?


ಶಿರಸಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿ ಜಲಪಾತವಿದೆ. ಹೆಗ್ಗರಣಿ ಬಸ್ಸನ್ನು ಹತ್ತಿ ಉಂಚಳ್ಳಿ ಬಸ್ ಸ್ಟ್ಯಾಂಡಿನ ಬಳಿ ಇಳಿದು ಹತ್ತು ರೂಪಾಯಿ ಟಿಕೇಟ್ ಮಾಡಿಸಿ 2.5 ಕಿಲೋಮೀಟರ್ ನಡೆದುಕೊಂಡು ಹೋದರೆ ಮೂರು ವೀವ್ ಪಾಯಿಂಟ್ ಗಳಲ್ಲಿ ಜಲಪಾತವನ್ನು ನೋಡಬಹುದು.


ಇದನ್ನೂ ಓದಿ: ಈ ಊರಲ್ಲಿ ಮನುಷ್ಯರಿಗಿಂತ ಅರಳಿ ಮರಗಳೇ ಜಾಸ್ತಿಯಂತೆ, ನೆಟ್ಟಿದ್ಯಾರು ನೋಡಿ

ಬೆಳಗ್ಗೆ 9 ರಿಂದ ಸಂಜೆರವೆಗೆ ಮಾತ್ರ ಪ್ರವೇಶವಿದ್ದು ವೀಕೆಂಡ್‌ ನಲ್ಲಿ ಸುತ್ತಾಡಲು ಹೇಳಿಟ್ಟ ಜಾಗದಂತಿದೆ. ಬರೇ ಫಾಲ್ಸ್‌ ಅಷ್ಟೇ ಅಲ್ದೇ, ಉಂಚಳ್ಳಿಯಲ್ಲಿ ನಡೆದು ಸಾಗುವಾಗ ವೈವಿಧ್ಯಮಯ ಎತ್ತರದ ಗಿಡಮರಗಳ ದರ್ಶನವಾಗುತ್ತದೆ. ಹೀಗೆ ಪ್ರಕೃತಿ ಸೊಬಗಿನ ನಡುವೆ ಜಲಪಾತದ ರಂಗು ಕಿಕ್‌ ನೀಡುತ್ತೆ ಅನ್ನೋದ್ರಲ್ಲಿ ಸಂಶಯನೇ ಬೇಡ..


ವರದಿ: ಎಬಿ ನಿಖಿಲ್‌, ನ್ಯೂಸ್‌ 18 ಕನ್ನಡ, ಉತ್ತರ ಕನ್ನಡ

First published: