ಕಾರವಾರ: ಕೀರ್ತನೆ ಹಾಡ್ತಾ ನಡೆಯುತ್ತಿರೋ ತಂಡ, ಟ್ರ್ಯಾಕ್ಟರ್ ಮೇಲೆ ಕುಳಿತು ಜೈಕಾರ ಕೂಗ್ತಿರೋ ಇನ್ನಷ್ಟು ಜನರು, ಬಿಸಿಲು, ಸೆಕೆಯನ್ನೂ ಲೆಕ್ಕಿಸದೇ ಹಿರಿಯರು, ಮಹಿಳೆಯರು, ಮಕ್ಕಳು ಅನ್ನೋ ಯಾವ ಬೇಧವೂ ಇಲ್ಲದೇ ಬೇಗಬೇಗ ಹೆಜ್ಜೆಹಾಕ್ತಿರೋ ಇವರೆಲ್ಲಾ ಹೊರಟಿದ್ದಾದ್ರೂ ಎಲ್ಲಿ ಅಂತೀರಾ? ಪ್ರತಿವರ್ಷವೂ ಹೀಗೆ ಚೆನ್ನಬಸವಣ್ಣರ ದೇಗುಲ ಹಾಗೂ ಸಮಾಧಿ ಇರುವ ಉತ್ತರ ಕನ್ನಡದ (Uttara Kannada News) ಉಳವಿಗೆ (Ulavi) ಧಾರವಾಡದಿಂದ (Dharwad) ಸಾವಿರಾರು ಮಂದಿ ಸಾಗಿಬರ್ತಾರೆ. ಈ ಬಾರಿಯಂತೂ ಈ ಸಂಖ್ಯೆಯಲ್ಲಿ ಹೆಚ್ಚಾಗಿದ್ದು 6 ಸಾವಿರ ಮಂದಿ ರಸ್ತೆಯುದ್ದಕ್ಕೂ ನಡೆಯುತ್ತಾ ಧಾರವಾಡದಿಂದ ಉಳವಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ: Football League: ಕರ್ನಾಟಕದಲ್ಲಿ ಫೀಮೇಲ್ ಫುಟ್ಬಾಲ್ ಸುಗ್ಗಿ! ಕಾಲ್ಚೆಂಡಿನ ಚಾಲಾಕಿಗಳ ಬೊಂಬಾಟ್ ಆಟ
ಟ್ರ್ಯಾಕ್ಟರ್ ಶಬ್ದವೂ ತಣ್ಣಗಾಗುತ್ತೆ!
ಹೀಗೆ ಬರಬೇಕಾದರೆ ರಸ್ತೆಯುದ್ದಕ್ಕೂ ಸಂಕೀರ್ತನೆ, ವಚನಗಳನ್ನು ಹೇಳೋದನ್ನ ಕೇಳೋದೇ ಚಂದ. ಭಜನಾ ತಂಡಗಳಂತೂ ಟ್ರಾಕ್ಟರ್ ಏರಿ ಭಜನೆ ಹೇಳುತ್ತಾ ದೇವರ ನಾಮ ಸ್ಮರಣೆ ಮಾಡ್ತಿದ್ರೆ ಟ್ರಾಕ್ಟರ್ ಗದ್ದಲವೂ ತಣ್ಣಗಾಗುತ್ತೆ!
ಇದನ್ನೂ ಓದಿ: Best Travel Plan: ಗೋವಾಕ್ಕೆ ಪೈಪೋಟಿ ಕೊಡ್ತಿದೆ ಕರ್ನಾಟಕದ ಈ ಊರು!
150 ಕಿಲೋ ಮೀಟರ್ ನಡಿಗೆ!
ಸುಮಾರು 150 ಕಿಲೋ ಮೀಟರ್ ನಡೆದು ಉಳವಿಯಲ್ಲಿರೋ ಬಸವಣ್ಣನ ಸೋದರಳಿಯನಾದ ಚನ್ನಬಸವೇಶ್ವರನ ದರ್ಶನಕ್ಕೆ ಬರುವವರಿಗೆ ಸುಸ್ತು ಕಾಡಲ್ಲ. ಸಂಕೀರ್ತನೆ, ವಚನಗಳು ನಡೆದಾಡುವ ಅನುಭವ ಮಂಟಪ ಅನ್ನೋ ರೀತಿ ಭಾಸವಾಗುತ್ತೆ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ