ಉತ್ತರ ಕನ್ನಡ: ರಾಷ್ಟ್ರೀಯ ಹೆದ್ದಾರಿಯಲ್ಲೊಂದು ಸುರಂಗ ಮಾರ್ಗ, ಅಚ್ಚರಿಯಿಂದ ವೀಕ್ಷಿಸುತ್ತಿರುವ ಜನರು. ಹಾರ್ನ್ ಹಾಕುತ್ತಾ ಟನಲ್ ಒಳಗಡೆ ವಾಹನಗಳ ಸಂಚಾರ. ಇದ್ಯಾವುದೋ ಉತ್ತರ ಭಾರತದಲ್ಲಿ ಕಂಡು ಬರುತ್ತಿರೋ ದೃಶ್ಯವಲ್ಲ. ಬದಲಿಗೆ ನಮ್ಮದೇ ಉತ್ತರ ಕನ್ನಡದಲ್ಲಿ (Uttara Kannada News) ಚಾಲನೆ ಪಡೆದ ನೂತನ ಸುರಂಗ ಮಾರ್ಗದ (Tunnel Road In Karwar) ಸುಂದರ ದೃಶ್ಯ!
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟನಲ್
ಹೌದು, ಸುರಂಗ ಮಾರ್ಗ ಅಥವಾ ಟನಲ್ ರೋಡ್ ಗಳು ಎಂದಾಗ ಉತ್ತರ ಭಾರತ ನೆನಪಿಗೆ ಬರೋದು ಕಾಮನ್. ಆದ್ರೀಗ ಕರಾವಳಿ ಕರ್ನಾಟಕದ ಮೊಟ್ಟ ಮೊದಲ ಟನಲ್ ವೊಂದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರಕ್ಕೆ ಮುಕ್ತವಾಗಿದ್ದು ಜನರು ಎಂಜಾಯ್ ಮಾಡುತ್ತಿದ್ದಾರೆ. ಈ ಮೂಲಕ ಕಾರವಾರದ ಮಂದಿಯ ಎಂಟು ವರ್ಷದ ಕನಸು ಕೊನೆಗೂ ನನಸಾಗಿದೆ.
ಅತ್ಯುತ್ತಮ ಸುರಂಗ ಮಾರ್ಗ
ರೈಲ್ವೇ ಸುರಂಗ ಮಾರ್ಗದಲ್ಲಿ ಹೋಗಿ ಅನುಭವವಿರುವ ಪ್ರಯಾಣಿಕರು ಈ ಟನಲ್ ಮಾರ್ಗವನ್ನು ತಮ್ಮ ಸ್ವಂತ ವಾಹನದಲ್ಲಿ ಹಾದು ಹೋಗುವ ವೇಳೆ ಸಂಭ್ರಮಿಸುತ್ತಿದ್ದಾರೆ. 350 ಮೀ ಉದ್ದದ ಸುರಂಗ ಮಾರ್ಗ ಇದಾಗಿದ್ದು, ಟನಲ್ ಉದ್ದಕ್ಕೂ ಲೈಟ್ ಗಳನ್ನು ಅಳವಡಿಸಲಾಗಿದೆ.
ಸಂಚಾರ ದಟ್ಟಣೆಗೆ ಬ್ರೇಕ್
ಎಂಟು ವರ್ಷದ ಹಿಂದೆಯೇ ಈ ಯೋಜನೆ ಮಂಜೂರಾಗಿತ್ತು. ಆದ್ರೀಗ ಸಂಚಾರಕ್ಕೆ ಮುಕ್ತವಾಗಿದೆ. ಹೀಗಾಗಿ ಕಾರವಾರಕ್ಕೆ ಆಗಮಿಸುವ ವಾಹನಗಳ ವೃಥಾ ಸಂಚಾರ ದಟ್ಟಣೆಯಿಂದ ಇದ್ರಿಂದ ತಪ್ಪಲಿದೆ ಅನ್ನೋ ಮಾತು ಕೇಳಿ ಬರ್ತಿದೆ. ಒಟ್ಟಿನಲ್ಲಿ ಉತ್ತರ ಭಾರತದ ಮಾದರಿಯಲ್ಲೇ ಉತ್ತರ ಕನ್ನಡದಲ್ಲೂ ಟನಲ್ ನಿರ್ಮಾಣವಾಗಿದ್ದು ಜನರು ಖುಷಿ ಪಡುವಂತೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ