Uttara Kannada: ರಾತ್ರಿಯಿಡೀ ಹಗ್ಗಜಗ್ಗಾಟ! ಗಮ್ಮತ್ತಿನ ಆಟದ ಝಲಕ್ ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮಧ್ಯರಾತ್ರಿ  12.30 ಗೆ ಶುರುವಾದ ಈ ಆಟ ಜಾಗರಣೆಯ ರೀತಿ ಬೆಳಗಾಗುವವರೆಗೆ ನಡೆಯಿತು. ಅಲ್ಲಿ ಕಂಡುಬಂದ ಪೈಪೋಟಿಯಂತೂ ಜನರನ್ನ ಅತ್ತಿತ್ತ ಕದಲದಂತೆ ಮಾಡಿತು.

  • News18 Kannada
  • 2-MIN READ
  • Last Updated :
  • Uttara Kannada, India
  • Share this:

    ಕುಮಟಾ: ಅಬ್ಬಬ್ಬ, ಅದೆಂತಹಾ ಜಿದ್ದಾಜಿದ್ದಿ! ನೀ ಕೊಡೆ ನಾ ಬಿಡೆ ಅನ್ನೋ ಪೈಪೋಟಿ. ಹಗ್ಗದ ನಡುವೆ ಶಕ್ತಿ ಪ್ರದರ್ಶನ ಮಾಡೋ ಯುವಕರು. ಅವರನ್ನ ಹುರಿದುಂಬಿಸೋ ಚಿಯರ್ ಬಾಯ್ಸ್. ಕುತೂಹಲದಿಂದ ತುದಿಗಾಲಲ್ಲಿ ನಿಂತು ಮ್ಯಾಚ್ ನೋಡೋ (Tug Of War Competition) ಆಡಿಯನ್ಸ್. ಯೆಸ್, ಇದುವೇ ನೋಡಿ ಹಗ್ಗಜಗ್ಗಾಟದ (Rug Of War) ಕದನ ಕುತೂಹಲ.

    ಹೌದು, ಉತ್ತರ ಕನ್ನಡದ ಕುಮಟಾ ತಾಲೂಕು ಮರಳು ಉದ್ದಿಮೆದಾರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕ್ರೀಡೆಯಲ್ಲಿ ಗ್ರಾಮೀಣ ಸೊಗಡಿನ ಹಗ್ಗಜಗ್ಗಾಟ ಸಾಕ್ಷಿಯಾಯಿತು.


    ಗುಡ್ಡಗಳ ಊರಲ್ಲಿ ಹಗ್ಗಜಗ್ಗಾಟ
    ಪುರುಷರು ಹಾಗೂ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಹಲವು ತಂಡಗಳು ಭಾಗವಹಿಸಿದ್ದು, ಸ್ಪರ್ಧೆಯನ್ನು ವೀಕ್ಷಿಸಲು ಕುಮಟಾದ ಗುಡ್ಡಗಳ ಬೀಡಾದ ದೀವಗಿ ಗ್ರಾಮದಲ್ಲಿ ಜನಸಂದಣಿ ತುಂಬಿಹೋಗಿತ್ತು. ಎಲ್ಲಿ ನೋಡಿದರಲ್ಲಿ ಹಿಡಿಯಾ ಬಿಡ್ಬೇಡ, ಎಳೆದು ಹಿಡಿಯಾ ಅನ್ನೋ ಚಿಯರ್​ಗಳು ಕೇಳಿ ಬರ್ತಿದ್ರೆ. ಇತ್ತ ಟೀಂ ಮೇಟ್​ಗಳು ತಮ್ಮ ತಮ್ಮ ತಂಡಕ್ಕೆ ಬೆನ್ನೆಲುಬಾಗಿ ನಿಂತು ಆಟಗಾರರನ್ನು ಇನ್ನಷ್ಟು ಹುರಿದುಂಬಿಸಿದ್ರು.


    ಇದನ್ನೂ ಓದಿ: Kavadikere Lake Temple: ಕವಡೆಯ ನೀರಿನಿಂದ ತುಂಬಿದ 60 ಎಕರೆಯ ಕೆರೆ! ದಟ್ಟ ಅಡವಿಯ ನಡುವಿನ ಕವಡಿಕೆರೆ ಮಹಾತ್ಮೆಯಿದು

    ರಾತ್ರಿಯಿಡೀ ಸ್ಪರ್ಧೆ
    ಮಧ್ಯರಾತ್ರಿ  12.30 ಗೆ ಶುರುವಾದ ಈ ಆಟ ಜಾಗರಣೆಯ ರೀತಿ ಬೆಳಗಾಗುವವರೆಗೆ ನಡೆಯಿತು. ಅಲ್ಲಿ ಕಂಡುಬಂದ ಪೈಪೋಟಿಯಂತೂ ಜನರನ್ನ ಅತ್ತಿತ್ತ ಕದಲದಂತೆ ಮಾಡಿತು. ಮುಂದಿನ ಪಂದ್ಯಕ್ಕೆ ಯಾರಾಗ್ತಾರೆ ಕ್ವಾಲಿಫೈ ಅನ್ನೋ ಕುತೂಹಲ ನೋಡುಗರಲ್ಲಿ ಮನೆ ಮಾಡಿತ್ತು.




    ಇದನ್ನೂ ಓದಿ: Uttara Kannada: ಆಟೋ ಸಾರಥಿಯಾಗಿ ಬದುಕು ಕಟ್ಟಿಕೊಂಡ ಮಹಿಳೆ


    ತಮ್ಮಿಷ್ಟದ ತಂಡಗಳನ್ನು ಕೇಕೆ ಹಾಕುತ್ತಾ ಪ್ರೇಕ್ಷಕರು ಹುರಿದುಂಬಿಸಿದ್ರು. ಹೀಗೆ ಕುಮಟಾದಿಂದ ಹಿಡಿದು ಮುರುಡೇಶ್ವರದವರೆಗೆ ಸಂಕ್ರಾತಿಯ ನಂತರ ಆಡಲಾಗುವ ಹಗ್ಗಜಗ್ಗಾಟದಲ್ಲಿ ಹಲವು ತಂಡಗಳು ತಮ್ಮ ಶಕ್ತಿ ಪ್ರದರ್ಶನ ಮೆರೆದು ಸೈ ಎನಿಸಿಕೊಂಡವು.


    ವರದಿ: ಎ.ಬಿ.ನಿಖಿಲ್,ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು