• Home
  • »
  • News
  • »
  • uttara-kannada
  • »
  • Sirsi Todadevu: ರುಚಿರುಚಿ ತೊಡದೇವು ತಯಾರಿಸಲು ಇವರು ಫೇಮಸ್! ರೆಸಿಪಿನೂ ಇಲ್ಲಿದೆ

Sirsi Todadevu: ರುಚಿರುಚಿ ತೊಡದೇವು ತಯಾರಿಸಲು ಇವರು ಫೇಮಸ್! ರೆಸಿಪಿನೂ ಇಲ್ಲಿದೆ

ಇಲ್ಲಿ ನೋಡಿ ತೊಡದೇವಿನ ವಿಡಿಯೋ

"ಇಲ್ಲಿ ನೋಡಿ ತೊಡದೇವಿನ ವಿಡಿಯೋ"

ಕಬ್ಬಿನ ಹಾಲಿನಿಂದ ತಯಾರಿಸೋ ಗಮ್ಮತ್ತಿನ ಈ ತೊಡದೇವನ್ನು ಮನಸಲ್ಲಿ ನೆನೆಸಿಕೊಂಡ್ರೂ ಬಾಯಲ್ಲಿ ನೀರೂರುತ್ತೆ. ಅಂದಹಾಗೆ ಈ ತೊಡದೇವು ಈ ಊರಿನ ಲ್ಯಾಂಡ್ ಮಾರ್ಕ್.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಒಲೆ ಮೇಲೆ ಕವಚಿ ಹಾಕಿದಂತಿರೋ ಮಡಿಕೆ, ಅದರ ಮುಂದೆ ಕುಳಿತು ದೋಸೆಯಂತೇ ಕಾಣೋ ಏನನ್ನೂ ತಯಾರಿಸ್ತಿರೋ ಮಹಿಳೆ.. ಅರೆ ಇದೆಂತಹ ದೋಸೆ ಅಂದ್ಕೊಂಡ್ರಾ? ಅಲ್ಲ ಕಣ್ರೀ ಇದು"ತೊಡದೇವು". ಹೆಸರು ಎಷ್ಟು ವಿಚಿತ್ರವೋ ಅಷ್ಟೇ ವಿಶೇಷ ತಿನಿಸು. ಕಬ್ಬಿನ ಹಾಲಿನಿಂದ (Sugarcane Milk) ತಯಾರಿಸೋ ಗಮ್ಮತ್ತಿನ ಈ ತೊಡದೇವನ್ನು ಮನಸಲ್ಲಿ ನೆನೆಸಿಕೊಂಡ್ರೂ ಬಾಯಲ್ಲಿ ನೀರೂರುತ್ತೆ. ಅದ್ರಲ್ಲೂ ಶಿರಸಿ ಯಲ್ಲಾಪುರದ ನಡುವೆ ಇರೋ ತುಡುಗುಣಿಯಲ್ಲಿ ತೊಡದೇವು ಪರಮೇಶ್ವರ್ ಹೆಗ್ಡೆಯವರ ಮನೆ ಅಂದ್ರೆ ಸಾಕು ಯಾರ್ ಬೇಕಾದ್ರೂ ನಿಮ್ಮನ್ನಿಲ್ಲಿ ತಲುಪಿಸ್ತಾರೆ. ಯಾಕಂದ್ರೆ ಈ ತೊಡದೇವು ಈ ಊರಿನ ಲ್ಯಾಂಡ್ ಮಾರ್ಕ್. ಪರಮೇಶ್ವರ ಅವ್ರ ಪತ್ನಿ ಪಾರ್ವತಿ ಹೆಗ್ಡೆಯವರು ತಮ್ಮ ಕೈಯಲ್ಲಿ ಹೂ ಅರಳಿದಂತೆ ತೊಡದೇವು ದೋಸೆ (Todadevu Dose) ಮಾಡ್ತಾರೆ. ಈ ಶಿರಸಿಯ ಪುಟ್ಟ ಹಳ್ಳಿಯ ತೊಡದೇವು (Sirsi Todadevu) ದೇಶ, ವಿದೇಶಗಳ ವಿಮಾನವನ್ನೂ ಏರುತ್ತೆ!


    ತೊಡೆದೇವು ರೆಸಿಪಿ ಇಲ್ಲಿದೆ ನೋಡಿ
    ಅಂದಹಾಗೆ ಈ ತೊಡೆದೇವು ರೆಸಿಪಿಯೂ ಅಷ್ಟೇ ವಿಶಿಷ್ಟ. ಇದನ್ನು ಕಬ್ಬಿನ ಹಾಲು ಹಾಗೂ ಚೆನ್ನಾಗಿ ರುಬ್ಬಿಕೊಂಡ ಅಕ್ಕಿಯಿಂದ ತಯಾರಿಸಲಾಗ್ತದೆ. ಕಬ್ಬಿನ ಹಾಗೂ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಬೇಕು. ಕಬ್ಬಿನ ಹಾಲನ್ನು ಕಾಯಿಸುತ್ತಾ ಇರಬೇಕು. ನಂತರ ಏಲಕ್ಕಿ ಪುಡಿಯನ್ನು ಬೆರೆಸಿ ಹಿಟ್ಟನ್ನು ತಯಾರಿಸಿಕೊಳ್ಳಬೇಕು.


    ನಂತರ ತೆಳುವಾದ ಕಾಟನ್ ಬಟ್ಟೆಯಲ್ಲಿ ಆ ಹಿಟ್ಟನ್ನು ಅದ್ದಿ ಬೋರಲಾಗಿಟ್ಟ ಮಡಿಕೆಯನ್ನು ಶೇಂಗಾ ಎಣ್ಣೆಯಿಂದ ಸವರಬೇಕು. ಅದಕ್ಕೆ ಅಡಿಯಿಂದ ಬೆಂಕಿ ಹಾಕಿ ಮಡಿಕೆಗೆ ತುಪ್ಪ ಸವರಿ ಆಮೇಲೆ ಹಿಟ್ಟನ್ನು ಪ್ಲಸ್ ಆಕಾರದಲ್ಲಿ ಎರೆದುಕೊಳ್ಳಬೇಕು. ತುಸು ಕಂದುಬಣ್ಣಕ್ಕೆ ತಿರುಗಿದ ಮೇಲೆ ಮರದ ಸೌಟಿಂದ ಜೋಪಾನವಾಗಿ ಇದನ್ನು ತೆಗೆಯಬೇಕು. ತ್ರಿಕೋನಾಕೃತಿಯಲ್ಲಿ ಮಡಿಚಿ ಎತ್ತಿಡಬೇಕು. ಇದೆಲ್ಲವೂ ಮಡಿಕೆಯ ಮೇಲೆ ಆಗಬೇಕು. ಆಗ ನೋಡಿ ಗರಿಗರಿಯಾದ ಸಿಹಿ ಸಿಹಿ ತಿಂಡಿ ನಿಮ್ಮ ಮುಂದಿರುತ್ತದೆ. ಅದಕ್ಕೆ ಕಾಯಿ ಹಾಲು ಮತ್ತು ತುಪ್ಪ ಸವರಿ ತಿನ್ನಬಹುದು.


    ಇದನ್ನೂ ಓದಿ: Uttara Kannada: ಶಿವನಿಗೂ ಗಂಗೆಗೂ ಅದ್ದೂರಿ ಕಲ್ಯಾಣ! ಮದುವೆ ಆಲ್ಬಂ ನೋಡಿ!


    ಕಳೆದ 40 ವರ್ಷದಿಂದ ಪರಮೇಶ್ವರ್ ಹೆಗಡೆ ಹಾಗೂ ಪಾರ್ವತಿ ಹೆಗಡೆ ದಂಪತಿ ತೊಡದೇವು ತಯಾರಿಸ್ತಿದ್ದಾರೆ. ಇವರ ರೈತಾಪಿ ಜೀವನಕ್ಕೆ ಈ ತೊಡದೇವು ಆಸರೆ ನೀಡಿದೆ. ಇವರು ಮಾಡುವ ಒಂದು ತೊಡದೇವಿಗೆ 12 ರೂಪಾಯಿ ಮಾತ್ರ.


    ಇದನ್ನೂ ಓದಿ: Uttara Kannada: ಮಹಿಳೆಯರಿಂದ ರುದ್ರ ಪಠಣ! ಮಂತ್ರಘೋಷದ ಝೇಂಕಾರ


    ಪ್ಯಾಕೇಟ್ ಸಹ ಸಿಗುತ್ತೆ
    ಮಾರ್ಕೆಟ್​ನಲ್ಲಿ ಐವತ್ತು ರೂಪಾಯಿನ ಪ್ಯಾಕೇಟ್ ಕೂಡ ಸಿಗುತ್ತೆ. ಉತ್ತರ ಕನ್ನಡದ ಕೆಲವು ಹೋಟೆಲಗಳಲ್ಲೂ ಇವರು ತಯಾರಿಸೋ ತೊಡದೇವಿನ ರುಚಿ ಸವಿಯಬಹುದು. ಜನರು ಇವರನ್ನು ಹುಡುಕಿಕೊಂಡು ಬಂದು ತೊಡದೇವು ಕೊಂಡು ಒಯ್ಯುತ್ತಾರೆ. ಹೀಗೆ ತೊಡದೇವು ಮೂಲಕ ಈ ದಂಪತಿ ಬದುಕು ಕಟ್ಟಿಕೊಂಡಿದ್ದು, ಅವರ ಬದುಕು ಕೂಡಾ ಗರಿಗರಿಯಾಗಿರಲಿ ಅಂತಾ ನಾವು ಸಹ ಆಶಿಸೋಣ.


    ವಿಶಿಷ್ಟ ತೊಡೆದೇವು ತಯಾರಕರ ಸಂಪರ್ಕ ಸಂಖ್ಯೆ ಇಲ್ಲಿದೆ


    ಪರಮೇಶ್ವರ್ ಹೆಗಡೆ: 94814 49221
    ಗಣಪತಿ ಹೆಗಡೆ: 91132 89025

    Published by:ಗುರುಗಣೇಶ ಡಬ್ಗುಳಿ
    First published: