Uttara Kannada: ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಾಗುತ್ತೆ ಟೈಲ್ಸ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಥೇಟ್ ಕಾಂಕ್ರೀಟ್ ಅಥವಾ ಸಿಮೆಂಟ್ ಇಂಟರ್​ಲಾಕ್​ಗಳಂತೆಯೇ ಕಾಣೋ ಇದು ಪಕ್ಕಾ ಪ್ಲಾಸ್ಟಿಕ್​ನಿಂದ ತಯಾರಿಸಿದ ಟೈಲ್ಸ್ ಅಂದ್ರೆ ಅಚ್ಚರಿಯಾಗುತ್ತೆ!

  • Share this:

    ಉತ್ತರ ಕನ್ನಡ: ಇದೇನ್ ಸಾಮಾನ್ಯ ಇಂಟರ್​ಲಾಕ್ ಅಲ್ಲ ಕಣ್ರೀ! ಸ್ಪೆಷಲ್ ಅಂದ್ರೆ ಭಾರೀ ಸ್ಪೆಷಲ್ ಟೈಲ್ಸ್​ಗಳಿವು.  ಅಷ್ಟಕ್ಕೂ ಇದನ್ನ ಯಾವುದ್ರಿಂದ ತಯಾರಿಸಿದ್ದು ಅಂತಾ ಕೇಳಿದ್ರೆ ನೀವ್ ಆಶ್ಚರ್ಯ ಪಡೋದು ಗ್ಯಾರಂಟಿ. ನಿಜ ಕಣ್ರೀ, ಈ ನೆಲದ ಹಾಸಿನ ಟೈಲ್ಸ್ ಇದ್ದಾವಲ್ಲ ಇದೊಂಥರ ನಿಮ್ಮ ಕ್ಯೂರಿಯಾಸಿಟಿ ಹೆಚ್ಚಿಸೋದು ಕನ್ಫರ್ಮ್.


    ಪ್ಲಾಸ್ಟಿಕ್ ವೇಸ್ಟೇಜ್ ಟೈಲ್ಸ್
    ಸಾಮಾನ್ಯವಾಗಿ ನಡೆದಾಡಿಕೊಂಡು ಹೋಗೋರೆಲ್ಲ ಇದೇನೋ ಸಾಮಾನ್ಯ ಸಿಮೆಂಟ್ ಇಂಟರ್​ಲಾಕ್​ಗಳು ಅಂದ್ಕೊಳ್ತಾರೆ. ಆದ್ರೆ ಈ ಇಂಟರ್​ಲಾಕ್ ಅಥವಾ ಟೈಲ್ಸ್​ಗಳು ತಯಾರಿಸಿರೋದು ಪ್ಲಾಸ್ಟಿಕ್ ವೇಸ್ಟೇಜ್​ನಿಂದ ಅಂದ್ರೆ ನೀವೆಲ್ಲ ನಂಬ್ಲೇಬೇಕು.


    ಎಲ್ಲಿದೆ ಈ ಅಚ್ಚರಿಯ ಇಂಟರ್​ಲಾಕ್?
    ಸದ್ಯ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ ವ್ಯಾಪ್ತಿಯ ಕಲಿಕಾ ಕೇಂದ್ರದ ಫ್ಲೋರಿಂಗ್​ಗೆ ಪ್ಲಾಸ್ಟಿಕ್​ ವೇಸ್ಟ್​ಗಳನ್ನು ಬಳಸಲಾಗಿದೆ. ಥೇಟ್ ಕಾಂಕ್ರೀಟ್ ಅಥವಾ ಸಿಮೆಂಟ್ ಇಂಟರ್​ಲಾಕ್​ಗಳಂತೆಯೇ ಕಾಣೋ ಇದು ಪಕ್ಕಾ ಪ್ಲಾಸ್ಟಿಕ್​ನಿಂದ ತಯಾರಿಸಿದ ಟೈಲ್ಸ್ ಅಂದ್ರೆ ಅಚ್ಚರಿಯಾಗುತ್ತೆ!


    ಫ್ಲೋರಿಂಗ್​ಗೆ ಬಳಕೆ
    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಪ್ಲಾಸ್ಟಿಕ್​ನಿಂದ ಟೈಲ್ಸ್ ಮಾಡುವ ಕಂಪೆನಿಯೊಂದಿದೆ. ಈ ಬಗ್ಗೆ ವಿಷಯ ತಿಳಿದುಕೊಂಡು ಕಾರವಾರ ನಗರಸಭೆಯು ಅಂತಹದ್ದೇ ಪ್ಲಾಂಟ್​ನ್ನ ಕಾರವಾರದಲ್ಲೂ ತಯಾರಿಸಲು ನಿರ್ಧರಿಸಿದೆ. ಈ ಮಧ್ಯೆ ಬೆಳ್ತಂಗಡಿಯಿಂದಲೇ ಟೈಲ್ಸ್ ತರಿಸಿಕೊಂಡು ಕಲಿಕಾಕೇಂದ್ರದ ಫ್ಲೋರಿಂಗ್ ತಯಾರಿಸಲಾಗಿದೆ.


    ಇದನ್ನೂ ಓದಿ: Uttara Kannada: ಜಿಲೇಬಿ ಮಾರಿ ಶಾಲೆ ಕಟ್ಟಿದ ಸಾಹಸಿ! ಶಿಕ್ಷಣ ಕ್ರಾಂತಿ ಮಾಡಿದ ಅಡುಗೆ ಭಟ್ಟರು!




    ಕಾರವಾರದಲ್ಲೂ ಟೈಲ್ಸ್ ಕಂಪನಿ
    ನೋಡಲು ಗಟ್ಟಿಮುಟ್ಟಾಗಿ ಕಾಣುವ ಈ ಟೈಲ್ಸ್​ಗಳು ಆಕರ್ಷಕವಾಗಿಯೂ ಇವೆ. ಮೇಲಾಗಿ ಉಳಿದ ಟೈಲ್ಸ್​ನಂತೆ ಇವು ಒಡೆದು ಹೋಗೋದಿಲ್ಲ. ಇನ್ನೇನು ಇದೇ ರೀತಿಯ ಟೈಲ್ಸ್ ತಯಾರಿಕಾ ಘಟಕ ಕಾರವಾರದಲ್ಲೂ ತಲೆ ಎತ್ತಲಿದೆ.


    ಇದನ್ನೂ ಓದಿ: Bedara Vesha: ಶಿರಸಿಯ ಬೀದಿಗಳಲ್ಲಿ ಬೇಡರ ವೇಷದ್ದೇ ಕಾರುಬಾರು! ವಿಶೇಷ ಕುಣಿತಕ್ಕೆ ಯುವಕರ ಸಖತ್ ಹೆಜ್ಜೆ


    ಹೀಗೆ ಆದ ಕಾರವಾರದಲ್ಲಿ ಪ್ರತಿದಿನ ಸಂಗ್ರಹಿಸುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಮುಕ್ತಿ ಸಿಕ್ಕಂತಾಗುವುದಲ್ಲದೇ, ಪರಿಸರ ಸ್ನೇಹಿ ಅಭಿವೃದ್ಧಿಯೂ ಸಾಧ್ಯವಾಗಲಿದೆ.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು