Uttara Kannada: ಜೇನು ಮೇಣದಿಂದ ಪೇಪರ್ ತಯಾರಿ! ಯಲ್ಲಾಪುರದ ಕೃಷಿಕರ ವಿಶಿಷ್ಟ ಬ್ಯುಸಿನೆಸ್

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಜೇನು ಮೇಣ ಅನ್ನೋದು ಜೇನುಗೂಡಿನ ವೇಸ್ಟೇಜ್ ಅನ್ನೊದೇನು ನಿಜ. ಆದ್ರೆ, ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ ಆದಾಯ ಪಡೆಯಬಹುದು ಅನ್ನೋದಕ್ಕೆ ಇವರೇ ಉದಾಹರಣೆ!

  • News18 Kannada
  • 5-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಪೇಪರ್​ಗಳನ್ನ ಮರದಿಂದ ಮಾಡೋದನ್ನ ಕೇಳಿದ್ದೀವಿ. ಆದ್ರೆ ಈ ಪೇಪರ್ ಮಾತ್ರ ಜೇನಿನಿಂದ (Honey Business) ತಯಾರಾಗುತ್ತೆ ಅಂದ್ರೆ ನೀವ್ ನಂಬ್ಲೇಬೇಕು. ಹಾಗಿದ್ರೆ ಏನಿದು ಸ್ಪೆಷಲ್ ಪೇಪರ್ (Honey Paper Business) ಅನ್ನೋದನ್ನ ಹೇಳ್ತೀವಿ ನೋಡಿ.


    ಜೇನು ಹಾಳೆಗಳು
    ಹೌದು, ಇವು ಜೇನುನೊಣಗಳ ಗೂಡಿನಲ್ಲಿ ಕೊನೆಯದಾಗಿ ಉಳಿಯುವ ಜೇನು ಮೇಣದಿಂದ ತಯಾರಾಗ್ತಿರೋ ಪೇಪರ್​ಗಳು. ಇದನ್ನ ಜೇನುಹಾಳೆಗಳೆಂದೇ ಕರೆಯಲಾಗುತ್ತೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ದೋಣಗಾರಿನ ಮುಂಡಗೋಡಿಮನೆಯಲ್ಲಿ ಇಂತಹದ್ದೊಂದು ಪ್ರಕ್ರಿಯೆ ಸದಾ ನಡೆಯುತ್ತಿರುತ್ತೆ. ನಿರಂತರವಾಗಿ ಮಷಿನ್ ರನ್ ಆಗುತ್ತಲೇ ಒಂದೊಂದೇ ಹಾಳೆಗಳು ನಿರ್ದಿಷ್ಟ ಗಾತ್ರದಲ್ಲಿ ಕತ್ತರಿಸಿಕೊಂಡು ಹಾಳೆಗಳಾಗಿ ಫೈನಲ್ ಪ್ರಾಡಕ್ಟ್ ಆಗಿ ದೊರೆಯುತ್ತೆ. ಇಂತಹದ್ದೊಂದು ವಿಶಿಷ್ಟ ಮತ್ತು ವಿಭಿನ್ನ ವ್ಯವಹಾರ ನಡೆಸುತ್ತಿರುವವರು ತಿಮ್ಮಣ್ಣ ಭಟ್ಟರು. ಇವರು ಸುಮಾರು 25 ವರ್ಷದಿಂದ ಜೇನು ಸಾಕುವುದರ ಜೊತೆಗೆ, ಜೇನು ಹಾಳೆಯನ್ನು ತಯಾರಿಸುತ್ತಾ ಬಂದಿದ್ದಾರೆ.


    11 ಲಕ್ಷ ರೂಪಾಯಿಯ ಮೆಷಿನ್!
    ಮೊದಲು ಜೇನುಹಾಳೆಗಳನ್ನು 2 ಜನ ಕೆಲಸದವರೊಂದಿಗೆ ದಿನವಿಡೀ ಮಾಡಬೇಕಾಗಿತ್ತು. ಆಗ ದಿನಕ್ಕೆ 300 ಹಾಳೆ ಬರುತ್ತಿತ್ತು. ಆದರೆ ಈಗ ತಿಮ್ಮಣ್ಣ ಭಟ್ರು ಪಂಜಾಬ್​ನಿಂದ 11 ಲಕ್ಷ ಖರ್ಚು ಮಾಡಿ ಮಚಿನ್ ತರಿಸಿಕೊಂಡಿದ್ದಾರೆ. ಈ ಮಷಿನ್ ಚಕ್ ಚಕಾಂತ 50 ಕೆಜಿ ಜೇನು ಮೇಣವನ್ನು ಕರಗಿಸಿ ಹಾಳೆ ಮಾಡುತ್ತೆ. ಹೀಗಾಗಿ ನಿಮಿಷಕ್ಕೆ 10 ಹಾಳೆಗಳನ್ನ ಪಡೆಯಬಹುದಾಗಿದೆ.


    ಹೀಗಾಗುತ್ತೆ ಜೇನು ಹಾಳೆ
    ಮೊದಲು ಟ್ಯಾಂಕ್ ನಲ್ಲಿರುವ ಜೇನು ಮೇಣ ಕರಗಿ ನಂತರ ಅದು ಎರಡನೇ ಟ್ಯಾಂಕಲ್ಲಿ ನೀರಿನೊಂದಿಗೆ ಬೆರೆತು, ರೋಲರ್ ಮೇಲೆ ಬಿದ್ದು ಅಲ್ಲಿ ಫ್ಯಾನ್ ಮೂಲಕ ತಣಿಯುತ್ತದೆ. ಈ ವೇಳೆ ಅಲ್ಲಿ ಗ್ಲಿಸರಿನ್ ಮೂಲಕ ಅದನ್ನು ತೊಳೆಯಲಾಗುತ್ತದೆ. ನಂತರ ಹಾಳೆ ನಿರ್ದಿಷ್ಟ ಸೈಜಿನಲ್ಲಿ ಕಟರ್ ಮೂಲಕ ಕತ್ತರಿಸಲ್ಪಡುತ್ತದೆ.


    ಜೇನು ಮೇಣದಿಂದ ಹಾಳೆಗಳಿಂದ ಏನುಪಯೋಗ?
    ಅಂದಹಾಗೆ ಹೀಗೆ ತಯಾರಾದ ಜೇನು ಹಾಳೆಗಳನ್ನ ಜೇನು ಪೆಟ್ಟಿಗೆಯಲ್ಲಿರಿಸುತ್ತಾರೆ. ಅಂತಹ ಜೇನುಪೆಟ್ಟಿಗೆಗೆ ಜೇನು ನೊಣಗಳು ಬೇಗನೇ ಬಂದು ಸೇರುತ್ತವೆ. ಅಷ್ಟೇ ಬೇಗನೇ ಜೇನು ತುಪ್ಪತಯಾರಿಯ ಪ್ರಕ್ರಿಯೆಗಳು ನಡೆಯುತ್ತವೆ. ಹೀಗಾಗಿ ಜೇನು ಸಾಕಾಣೆದಾರರಿಂದ ಈ ಹಾಳೆಗಳಿಗೆ ಹೆಚ್ಚಿನ ಬೇಡಿಕೆಯಿದೆ.


    ಕೇರಳದಲ್ಲೂ ಡಿಮ್ಯಾಂಡ್
    ಇಲ್ಲಿ ತಯಾರಾಗೋ ಜೇನು ಹಾಳೆಗಳು ನೆರೆಯ ಕೇರಳ ರಾಜ್ಯಕ್ಕೂ ರವಾನೆಯಾಗುತ್ತೆ. ಅಷ್ಟರ ಮಟ್ಟಿಗೆ ಇದಕ್ಕೆ ಡಿಮ್ಯಾಂಡ್ ಇದೆ. ಅಂದಹಾಗೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಜೇನುಹಾಳೆಯ ಆಟೋಮೇಟೆಡ್ ಮೆಷಿನ್ ಅಳವಡಿಸಿಕೊಳ್ಳಲಾಗಿದೆಯಂತೆ.


    ಇದನ್ನೂ ಓದಿ:Uttara Kannada: ಆಟದ ಗೊಂಬೆಯೇ ಟೀಚರ್! ಮಕ್ಕಳಿಗೆ ಪಾಠ ಹೇಳಿಕೊಡುತ್ತೆ ಈ ರೋಬೋಟ್!


    ಜೇನು ಸಾಕಾಣಿಕೆಯೂ ಇದೆ
    ಇನ್ನು ತಿಮ್ಮಪ್ಪ ಭಟ್ಟರು ತಮ್ಮದೇ 400 ಜೇನುಪೆಟ್ಟಿಗೆಗಳನ್ನ ಹೊಂದಿದ್ದಾರೆ. ಹೀಗಾಗಿ ಜೇನು ಹಾಳೆಗಾಗಿ ಬೇಕಾದ ಮೇಣವೂ ದೊರೆಯುತ್ತವೆ. ಕೃಷಿ ಇಲಾಖೆಗೆ ಜೇನು ಪೆಟ್ಟಿಗೆಯನ್ನೂ ಒದಗಿಸುತ್ತಾರೆ. ಜೇನು ಮೇಣವನ್ನ ತಿಮ್ಮಪ್ಪ ಭಟ್ರು ಇತರೆ ಕಡೆಗಳಿಂದಲೂ ಹಣ ಕೊಟ್ಟು ಖರೀದಿಸುತ್ತಾರೆ.




    ಇದನ್ನೂ ಓದಿ: Underwater Proposal: ಲವರ್​ಗೆ ಸಮುದ್ರದೊಳಗೆ ಪ್ರಪೋಸ್ ಮಾಡಿ! ಇದು ಅದ್ಭುತ ಕಿಕ್ ಕೊಡುವ ವಿಸ್ಮಯ ತಾಣ


    ಒಟ್ಟಿನಲ್ಲಿ ಜೇನು ಸಾಕಾಣಿಕೆ ಅನ್ನೋದು ವೇಸ್ಟೇಜ್ ಇಲ್ಲದ ಲಾಭದಾಯಕ ಉದ್ದಿಮೆಯೂ ಹೌದು. ಆದರೆ, ಅದನ್ನ ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಅನ್ನೋದಕ್ಕೆ ಮುಂಡುಗೋಡಿ ಮನೆಯ ತಿಮ್ಮಪ್ಪ ಭಟ್ರೇ ಸಾಕ್ಷಿ.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: