ಉತ್ತರ ಕನ್ನಡ: ಸರ್ರನೆ ಜಾರುತ್ತಾ ಮುನ್ನುಗ್ಗುವ ಬಾಲಕಿ, ಸ್ಕೇಟಿಂಗ್ (Skating) ಕಾಲ್ಚಳಕದ ಮೂಲಕ ಎದುರಾಳಿಗೆ ತಡೆಗೋಡೆಯಾಗೋ ಆಟಗಾರ್ತಿ, ಈಕೆಯೇನಾದ್ರೂ ಗೋಲ್ ಬಾಕ್ಸ್ ಬಳಿ ಇದ್ರೆ ಪ್ರತಿಸ್ಪರ್ಧಿಯ ಗೋಲ್ ಆಸೆ ಭಗ್ನವಾಗೋದು ಗ್ಯಾರಂಟಿ. ಹಾಗಿದ್ರೆ ಈ ಬಾಲಕಿ ಯಾರು? ಸ್ಕೇಟಿಂಗ್ ಹಾಕಿಯಲ್ಲಿ (Skating Hockey) ಈಕೆಯದ್ದು ಸಾಧನೆ ಏನ್ ಅಂತೀರಾ? ಹೇಳ್ತೀವಿ ನೋಡಿ ಈ ಸ್ಟೋರೀಲಿ.
ಹೌದು, ಈ ಬಾಲಕಿಯೇ ಕರ್ನಾಟಕದ ರೋಲರ್ ಸ್ಕೇಟಿಂಗ್ ಹಾಕಿ ತಂಡದ ಕಿರಿಯ ವಿಭಾಗದ ನಾಯಕಿ ಕಂ ಗೋಲ್ ಕೀಪರ್. ಈಕೆ ಹೆಸರು ಖುಷಿ ಸಾಲೇರ್. 10 ವರ್ಷದ ಈ ಪುಟಾಣಿ ಶಿರಸಿಯ ಲಯನ್ಸ್ ಇಂಗ್ಲೀಷ್ ಮೀಡಿಯಂ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ. ಈ ಹಿಂದೆ ದಿಲೀಪ್ ಹಣಗಾರ್ ಎಂಬ ಕೈಗಾದ ಹಾಕಿ ಕೋಚ್ ಬಳಿ ಪಳಗಿದ ಖುಷಿ, ಮೊದಲ ವರ್ಷವೇ ಕರ್ನಾಟಕ ತಂಡವನ್ನು ಸೇರಿಕೊಂಡಳು.
ಟೀಮ್ ಕ್ಯಾಪ್ಟನ್ ಜವಾಬ್ದಾರಿಯೂ ಸಿಕ್ತು!
ಖುಷಿ, ಎರಡನೇ ವರ್ಷದಲ್ಲೇ ಇವಳ ಜೊತೆಗಾರ್ತಿ ಕೈಗಾದ ಆದ್ಯಾ ಜೊತೆ ನಾಯಕತ್ವದ ಹೊಣೆಹೊತ್ತಳು. ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಕರ್ನಾಟಕ ತಂಡವನ್ನ ಮುನ್ನಡೆಸುವಲ್ಲಿ ಖುಷಿ ಸಾಧನೆ ಅಪಾರ. ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮುಗ್ಗರಿಸಿದ್ದರೂ ಬೆಳ್ಳಿ ಪದಕ ಪಡೆದು ಖುಷಿ ಸಾಲೇರ್ ಕೀರ್ತಿ ಬೆಳಗಿದ್ದಾರೆ.
ಇದನ್ನೂ ಓದಿ: Uttara Kannada: ಕೌದಿ ಹೊಲಿಯಾಕ ಬಂದಾಳ ನೋಡ್ರಿ ಅಮೇರಿಕಾ ಹುಡುಗಿ!
ಸ್ಕೇಟಿಂಗ್ ಸಾಮಾನ್ಯವಾಗಿ ನಗರ ಭಾಗದಲ್ಲಿ ಕಂಡು ಬಂದರೂ, ಸ್ಕೇಟಿಂಗ್ ಹಾಕಿ ಆಟ ಅನ್ನೋದು ಅಪರೂಪ. ಆದರೆ ಶಿರಸಿಯ ಈ ಪುಟ್ಟ ಬಾಲಕಿ ಖುಷಿ ಸಾಲೇರ್ ಸ್ಕೇಟಿಂಗ್ ಹಾಕಿ ಮೂಲಕ ಅಮೋಘ ಸಾಧನೆ ಮೆರೆಯುತ್ತಿದ್ದಾರೆ.
ಇದನ್ನೂ ಓದಿ: Vande Bharat Express Train: ಬೆಂಗಳೂರಿನಿಂದ ಬೆಳಗಾವಿಯವರೆಗೂ ವಂದೇ ಭಾರತ್!
ಅದಕ್ಕೆ ತಕ್ಕಂತೆ ಪೋಷಕರು ಹಾಗೂ ಶಾಲೆಯಿಂದಲೂ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಖುಷಿ ತನ್ನ ಸಾಧನೆಯಿಂದ ಇನ್ನಷ್ಟು ವಿಜಯ ಪತಾಕೆ ಹಾರಿಸಲಿ, ರಾಷ್ಟ್ರೀಯ ತಂಡದಲ್ಲೂ ಸಾಧನೆ ಮಾಡಲಿ ಅನ್ನೋ ಹಾರೈಕೆ ನಮ್ಮದು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ