• Home
  • »
  • News
  • »
  • uttara-kannada
  • »
  • Bamboo Cracker: ಬಿದಿರಿನಿಂದ ತಯಾರಾಯ್ತು ಪಟಾಕಿ! ಉತ್ತರ ಕನ್ನಡ ಕೃಷಿಕನ ಸಂಶೋಧನೆ

Bamboo Cracker: ಬಿದಿರಿನಿಂದ ತಯಾರಾಯ್ತು ಪಟಾಕಿ! ಉತ್ತರ ಕನ್ನಡ ಕೃಷಿಕನ ಸಂಶೋಧನೆ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಈ ಬಿದಿರು ಪಟಾಕಿ ದೀಪಾವಳಿಗೆ ಮಾತ್ರವಲ್ಲ, ಸಾಮಾನ್ಯ ದಿನಗಳಲ್ಲಿ ಕಾಡುಪ್ರಾಣಿಗಳ ಉಪಟಳದಿಂದ ತಪ್ಪಿಸಲು ಕೃಷಿಕರು ಸುಲಭ ವಿಧಾನದಲ್ಲಿ ಬಳಸಬಹುದಾಗಿದೆ. ಇದನ್ನು ತಯಾರಿಸೋ ವಿಧಾನ ಇಲ್ಲಿದೆ ನೋಡಿ!

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಪಟಾಕಿ ಇಲ್ಲ, ಸುಡುಮದ್ದು ಇಲ್ಲ, ಆದ್ರೂ ಸಿಡಿಯುತ್ತೆ ಈ ಬಿದಿರು. ಬೆಂಕಿ ಉಗುಳಲ್ಲ, ವಿಪರೀತ ಹೊಗೆಯೂ ಇಲ್ಲ. ಆದ್ರೂ ಸೌಂಡ್ ಮಾಡುತ್ತೆ ಈ ಪಟಾಕಿ. ಹೌದು, ಯುದ್ಧಭೂಮಿಯಲ್ಲಿ ಬಳಸೋ ತೋಪಿನಂತೆ ಇದರ ಆಪರೇಷನ್. ಆದ್ರೂ ಆದ್ರೂ ಸಖತ್ ಮಜಾ ಕೊಡುತ್ತೆ ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada Bamboo Crackers) ತಯಾರಾಗಿರುವ ಹಳ್ಳಿ ಸೊಗಡಿನ ಇಕೋ ಫ್ರೆಂಡ್ಲಿ ಬಿದಿರು ಪಟಾಕಿ. ಈ ಪಟಾಕಿನ (Bamboo Crackers) ಸಿಡಿಸೋಕೆ ದೀಪಾವಳಿಯೇ ಬರಬೇಕೆಂದಿಲ್ಲ. ಯಾವಾಗ್ಬೇಕೀದ್ರೂ ಸಿಡಿಸಬಹುದು. ಈ ಪಟಾಕಿನ (Deepavali Crackers) ಸಿಡಿಸೋದ್ರಿಂದ ಯಾವುದೇ ರಿಸ್ಕೂ ಇಲ್ಲ, ಆರಾಮವಾಗಿ ಸಿಡಿಸಬಹುದು. ಒಂದು ತುದಿಯಲ್ಲಿ ಬೆಂಕಿ ಕಿಡಿ ತಾಗಿಸಿದರೆ ಸಾಕು ಮೇಲ್ತುದಿಯಲ್ಲಿ ಹೊಗೆಬೀರಿ ಸದ್ದು ನೀಡುತ್ತೆ. 


    ವಿಶೇಷ ಅಂದ್ರೆ ಕೇವಲ ಸೀಮೆಎಣ್ಣೆ ಮತ್ತು ಕಬ್ಬಿಣದ ಕಡ್ಡಿಯೊಂದಿದ್ರೆ ಈ ಬಿದಿರು ತೋಪಿನಿಂದ ನೂರಾರು ಪಟಾಕಿ ಸದ್ದು ಮೊಳಗಿಸಬಹುದು.


    ಬಿದಿರು ಪಟಾಕಿ ತಯಾರಿಸೋದು ಹೇಗೆ?
    ಈ ಪಟಾಕಿ ಮಾಡೋದ್ ಹೇಗಪ್ಪಾ ಅಂತಾ ಹೇಳೋದಕ್ಕೂ ಮೊದ್ಲು ಈ ಪಟಾಕಿನ ತಯಾರಿಸಿದ ಈ ವ್ಯಕ್ತಿಯ ಪರಿಚಯ ಮಾಡ್ಲೇಬೇಕು. ಇವ್ರು ಪುತ್ತೂರಿನ ಪಾಂಡುರಂಗ ಭಟ್. ಮೂಲತಃ ಶಿರಸಿಯವರಾಗಿರುವ ಇವರು ಬಿದಿರು ಪಟಾಕಿ ತಯಾರಿಕೆಯಲ್ಲಿ ನಿಷ್ಣಾತರು. ಇವ್ರು ತಯಾರಿಸೋ ಈ ಪಟಾಕಿ ಹೇಗಿದೆ ಅಂದ್ರೆ, ನಾಲ್ಕು ಅಂಚಿನ ಒಂದು ದಪ್ಪದಾದ ಬಿದಿರನ್ನು ತೆಗೆದುಕೊಂಡು ಅದರ ನಡುವಿನ ಗಂಟುಗಳನ್ನೆಲ್ಲ ತೆಗೆದು ಹಾಗೂ ಬಿದಿರಿನ ತುದಿಗೆ ರಂಧ್ರವನ್ನು ಮಾಡಿಕೊಳ್ಳಬೇಕು. ಅದರಲ್ಲಿ ಸೀಮೆಎಣ್ಣೆ ಅನ್ನು 50 ರಿಂದ 60 ML ನಷ್ಟು ತುಂಬಿ 75 ಡಿಗ್ರಿ ಸೆಲ್ಸಿಯಸ್ನಷ್ಟು ಬುಡವನ್ನು ಕಾಯಿಸಬೇಕು. 


    ಪರಿಸರ ಮಾಲಿನ್ಯವಿಲ್ಲ, ಮತ್ತೆ ಮತ್ತೆ ಬಳಸಲೂಬಹುದು!
    ಅದರ ನಂತರ ಕಡ್ಡಿಯಿಂದ ತುದಿಗೆ ಬೆಂಕಿ ತಾಗಿಸಿದರೆ ಸಾಕು ಪಟಾಕಿ ಸದ್ದು ಆರಂಭವಾಗುತ್ತವೆ. ಈಗಿನ ಗರ್ನಲ್​ಗಿಂತ ಮೂರು ಪಟ್ಟು ಹೆಚ್ಚಿಗೆ ಸೌಂಡನ್ನು ಈ ಬಿದಿರು ಪಟಾಕಿ ಮಾಡಬಲ್ಲದು. ಹೀಗೆ ಹೆಚ್ಚಿನ ಶಬ್ದದೊಂದಿಗೆ ಎಪ್ಪತ್ತರಿಂದ ಎಂಬತ್ತು ರೌಂಡ್ ಮದ್ದು ಹಾರಿಸಬಹುದು. ಅಷ್ಟೇ ಅಲ್ಲ ಇದು ರಿಯೂಸೇಬಲ್ ಮತ್ತು ಪೊಲ್ಯೂಶನ್ ಫ್ರೀ ಕೂಡಾ.


    ಇದನ್ನೂ ಓದಿ: Uttara Kannada: ಶಿವನಿಗೂ ಗಂಗೆಗೂ ಅದ್ದೂರಿ ಕಲ್ಯಾಣ! ಮದುವೆ ಆಲ್ಬಂ ನೋಡಿ!


    ಈ ಬಿದಿರು ಪಟಾಕಿ ದೀಪಾವಳಿಗೆ ಮಾತ್ರವಲ್ಲ, ಸಾಮಾನ್ಯ ದಿನಗಳಲ್ಲಿ ಕಾಡುಪ್ರಾಣಿಗಳ ಉಪಟಳದಿಂದ ತಪ್ಪಿಸಲು ಕೃಷಿಕರು ಸುಲಭ ವಿಧಾನದಲ್ಲಿ ಬಳಸಬಹುದಾಗಿದೆ. ಅತೀ ಕಡಿಮೆ ಖರ್ಚಿನಲ್ಲಿ ಹಾಗೂ ಪರಿಸರ ಪ್ರೇಮಿ ಪಟಾಕಿ ಆಗಿ ಇದನ್ನ ಬಳಸೋದ್ರ ಜೊತೆಗೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಬಹುದು.


    ಇದನ್ನೂ ಓದಿ: Uttara Kannada: ಮಹಿಳೆಯರಿಂದ ರುದ್ರ ಪಠಣ! ಮಂತ್ರಘೋಷದ ಝೇಂಕಾರ


    ದೊಡ್ಡ ಸೌಂಡಲ್ಲಿ ದೀಪಾವಳಿಯನ್ನೂ ಮಾಡಬೇಕು. ಮಾಲಿನ್ಯವನ್ನೂ ಮಾಡಬಾರದು ಪರಿಸರ ಸ್ನೇಹಿ ಪಟಾಕಿ ಬೇಕಂದ್ರೆ ಇವರನ್ನು ಖಂಡಿತ ಸಂಪರ್ಕಿಸಬಹುದಂತೆ: ಸಂಪರ್ಕ ಸಂಖ್ಯೆ: ಪಾಂಡುರಂಗ ಭಟ್:97418 10502


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: