• Home
  • »
  • News
  • »
  • uttara-kannada
  • »
  • Uttara Kannada: ಸ್ವತಃ ಕರೆಂಟ್ ತಯಾರಿಸೋ ಶಿರಸಿಯ ಗ್ರಾಮಸ್ಥರು! ಇವರಿಗೆ ಸರ್ಕಾರಿ ವಿದ್ಯುತ್ ಬೇಕಂತಿಲ್ಲ!

Uttara Kannada: ಸ್ವತಃ ಕರೆಂಟ್ ತಯಾರಿಸೋ ಶಿರಸಿಯ ಗ್ರಾಮಸ್ಥರು! ಇವರಿಗೆ ಸರ್ಕಾರಿ ವಿದ್ಯುತ್ ಬೇಕಂತಿಲ್ಲ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ತುಳಗೇರಿಗೆ ಬಸ್ ಹೋಗೋದಿರ್ಲಿ, ನಡೆದು ಈ ಊರು ತಲುಪೋದೂ ಪ್ರಯಾಸದ ಪಯಣ. ಹೀಗಿರಬೇಕಾದ್ರೆ ಕರೆಂಟ್ ಕನೆಕ್ಷನ್ ಮಾತು ದೂರದ್ದು!

  • News18 Kannada
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಕರೆಂಟ್ ಉತ್ಪಾದಿಸೋಕೆ ಜೋಗದಂಥ ಜಲಪಾತ ಬೇಕು, ಆಣೆಕಟ್ಟು ಕಟ್ಟಬೇಕು, ಅಥ್ವಾ ದೊಡ್ಡ ವಿಂಡ್ ಮಿಲ್ ಸ್ಥಾಪಿಸಬೇಕು. ಆದ್ರೆ ನೀವ್ ಇಲ್ಲಿ ನೋಡ್ತಿರೋ ಪುಟ್ಟ ಝರಿಯಿಂದಲೂ ವಿದ್ಯುತ್ ಹುಟ್ಟುತ್ತಿದೆ  (Electricity Production) ಅಂತಂದ್ರೆ ನಂಬ್ಲೇಬೇಕು. ಝುಳುಝುಳು ತೊರೆ ಹರಿಯುತ್ತಿರೋ ಮಲೆನಾಡಿನ (Malenadu) ಉತ್ತರ ಕನ್ನಡ ಜಿಲ್ಲೆಯ (Uttara Kannada Positive Stories) ಈ ಪುಟ್ಟ ಹಳ್ಳಿಗೆ ಕರೆಂಟ್ ಹೋಗುತ್ತೆ ಅನ್ನೋ ಚಿಂತೆಯಿಲ್ಲ! ಏಕಂದ್ರೆ ತಮ್ಮ ಪಾಲಿನ ಕರೆಂಟ್​ನ್ನ ತಯಾರಿಸೋರೂ ಇವರೇ!


    ಝರಿಯಂತಿರೋ ನೀರನ್ನ ವೇಗವಾಗಿ ಹರಿಯುವಂತೆ ಮಾಡಿ ಅಲ್ಲೊಂದು ಟರ್ಬೈನ್ ಇರಿಸಿ ಉತ್ಪಾದಿಸುತ್ತಿರೋ ಕರೆಂಟ್ ಕಥೆಯಿದು.


    ಈ ಊರಿಗೆ ನಡೆದು ಹೋಗೋದೂ ಕಷ್ಟ!
    ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪುಟ್ಟ ಹಳ್ಳಿ ತುಳಗೇರಿಯ ಗ್ರಾಮಸ್ಥರ ಈ ಪ್ರಯೋಗ ಊರಿಗೆ ಸ್ವಾವಲಂಬಿತನ ತಂದಿದೆ. ತುಳಗೇರಿಗೆ ಬಸ್ ಹೋಗೋದಿರ್ಲಿ, ನಡೆದು ಈ ಊರು ತಲುಪೋದೂ ಪ್ರಯಾಸದ ಪಯಣ. ಹೀಗಿರಬೇಕಾದ್ರೆ ಕರೆಂಟ್ ಕನೆಕ್ಷನ್ ಮಾತು ದೂರದ್ದು. ಹಾಗಾಗಿಯೇ ನೋಡಿ ಕಾಡಿನ ನಡುವೆ ಇಂತಹ ಸಣ್ಣ ಸಣ್ಣದಾದ ವಿದ್ಯುತ್ ಉತ್ಪಾದನಾ ಬಾಕ್ಸ್​ಗಳು ಕಾಣಸಿಗ್ತವೆ.


    ದಿನದ 24 ಗಂಟೆಯೂ ಕರೆಂಟ್ ಇರುತ್ತೆ!
    ಈ ಊರಿನ ಜನ ಈಗಲೂ ವಿದ್ಯುತ್​ಗೆ ಸರ್ಕಾರವನ್ನು ಅವಲಂಬಿಸಿಲ್ಲ. ಬೆಟ್ಟದಿಂದ ಹರಿದು ಬರುವ ಜಲಧಾರೆಗೆ ಟರ್ಬೈನ್ ತಿರುಗುವ ಹಾಗೆ ಮಾಡಿ ತಮಗೆ ಬೇಕಾದ ವಿದ್ಯುತ್ ಅನ್ನು ತಾವೇ ತಯಾರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಲ್ಲಿ ದಿನದ 24 ಗಂಟೆಯೂ ಕರೆಂಟ್ ಇರುತ್ತೆ!


    ಇದನ್ನೂ ಓದಿ: Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ


    ಗಜಾನನ್ ಭಟ್ ಎಂಬವರ ಮುಂದಾಳತ್ವದಲ್ಲಿ ಪ್ರಕೃತಿ ಏಜೆನ್ಸಿಯ ಸಹಾಯ ಪಡೆದು ಈ ರೀತಿ ಪುಟ್ಟ ಪುಟ್ಟ ಟರ್ಬೈನ್ ಅನ್ನು ತಯಾರಿಸಲಾಗಿದೆ. ವರ್ಷದ 8 ತಿಂಗಳು ಜೋರಾಗಿ ಹರಿಯುವ ನೀರಲ್ಲಿ 19 ಎಮ್ ಎಮ್ ಗಾತ್ರದಲ್ಲಿ ಅತೀ ತೀಕ್ಷ್ಣವಾಗಿ ಹರಿಯುವಂತೆ ಮಾಡಿದ್ದಾರೆ. ಹೀಗೆ ಹುಟ್ಟಿದ ವಿದ್ಯುತ್​ಅನ್ನು ತಮ್ಮ ಮನೆಗೆ ಕೇಬಲ್ ಮೂಲಕ ಕನೆಕ್ಷನ್ ಕೊಟ್ಟು ಟಿವಿ, ಫ್ರಿಡ್ಜ್​ನಿಂದ ಹಿಡಿದು ಅಗತ್ಯ ಸಾಧನಗಳಿಗೆ ಬಳಸಿಕೊಳ್ತಿದ್ದಾರೆ.


    ಇದನ್ನೂ ಓದಿ: Uttara Kannada: ಕರೆಲಾಡು ಮತ್ತು ಖಾಜಿಮಿಜಿ! ಬಾಯಲ್ಲಿ ನೀರೂರಿಸೋ ಅಂಕೋಲಾ ಸ್ಪೆಷಲ್ ತಿಂಡಿಗಳು!


    ಇವರೇ ನೋಡಿ ಸ್ವಾವಲಂಬಿಗಳು
    ನಮ್ಮೂರು ಕುಗ್ರಾಮ, ಏನೂ ಸೌಲಭ್ಯ ಇಲ್ಲ ಅಂತ ಕೂರದೇ, ಇರೋದ್ರಲ್ಲೇ ಏನಾದ್ರೂ ಮಾಡ್ಬೇಕು ಅಂತ ಹೊರಟ ತುಳಗೇರಿಯ ಜನರು ಎಲ್ರಿಗೂ ಮಾದರಿಯಾಗಿದ್ದಾರೆ. ಸ್ವಾವಲಂಬಿ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: