Edible Tea Cups: ಟೀ ಕುಡಿದ್ರೆ ಕಪ್ ತಿನ್ಬೇಕು! ಉತ್ತರ ಕನ್ನಡದಲ್ಲೇ ಇದೇ ಮೊದಲ ಬಾರಿಗೆ!

ರಾಗಿ ಹಾಗೂ ಬೆಲ್ಲದಿಂದ ತಯಾರಿಸಿದ ಈ ಕಪ್​ನಲ್ಲಿ ಚಹಾ ಕುಡಿದರೆ ಈ ಕಪ್​ನ್ನೂ ತಿನ್ನಬಹುದು. ಹಾಗಾಗಿ ಟೀ ಮಚ್ಚಾಕ್ಕೆ ಬರೋ ಗ್ರಾಹಕರು ಇದಕ್ಕೆ ಫಿದಾ ಆಗಿದ್ದಾರೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಉತ್ತರ ಕನ್ನಡ: ಇಲ್ಲಿ ಚಹಾ ಕುಡಿದ್ರೆ ಕಪ್ ಎಸೆಯುವಂತಿಲ್ಲ. ಆ ಕಪ್ ಅನ್ನೂ ನೀವು  ತಿನ್ನಲೇಬೇಕು. ಒಂದು ವೇಳೆ ತಿಂದಿಲ್ಲ ಅಂದ್ರೆ ನಿಮ್ಗೆ ಲಾಸ್. ಅರೆ ಇದೇನಿದು ಚಹಾ ಕುಡಿಯೋ ಕಪ್ ಅನ್ನೂ ತಿನ್ಬೇಕು (Edible Tea Cups) ಅಂದ್ರೆ ಹೆಂಗೆ? ಇದ್ಯಾಕಾಗಿ ಹಿಂಗೆ ಅಂತೀರಾ? ವಿಷ್ಯ ಏನೂಂತ ಹೇಳ್ತೀವಿ ಕೇಳಿ. ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ ಟೀ ಮಚ್ಚಾ ಟೀ ಸ್ಟಾಲ್​ನಲ್ಲಿ (Sirsi Tea Stall) ಉಪ್ಪು ತಿಂದವನು ನೀರು ಕುಡಿಯಬೇಕು ಅನ್ನೋ ಹಾಗೆ ಚಾ ಕುಡಿದವನು ಅದ್ರ ಕಪ್ ಸಮೇತ ತಿನ್ನಲೇಬೇಕು. ಹಾಗಂತ ಕಡ್ಡಾಯ ಏನಿಲ್ಲ , ಆದರೆ ತಿನ್ನಬಹುದಾದ ಕಪ್ ಅದು. ನಿಜ, ಅದೊಂಥರಾ ನಾವ್ ನೀವ್ ತಿನ್ನೋ ಕಾರ್ನೆಟ್ ಐಸ್ ಕ್ರೀಂ ಥರ.

    ರಾಗಿ ಹಾಗೂ ಬೆಲ್ಲದಿಂದ ತಯಾರಿಸಿದ ಈ ಕಪ್​ನಲ್ಲಿ ಚಹಾ ಕುಡಿದರೆ ಈ ಕಪ್​ನ್ನೂ ತಿನ್ನಬಹುದು. ಹಾಗಾಗಿ ಟೀ ಮಚ್ಚಾಕ್ಕೆ ಬರೋ ಗ್ರಾಹಕರು ಇದಕ್ಕೆ ಫಿದಾ ಆಗಿದ್ದಾರೆ. ಜೊತೆಗೆ, ಅನಗತ್ಯ ವೇಸ್ಟೇಜ್ ಅನ್ನು ಕೂಡಾ ತಪ್ಪಿಸಬಹುದು.

    ಇದನ್ನೂ ಓದಿ: Gadi Mari: ಈ ದೇವಿಗೆ ರಸ್ತೆಬದಿಯೇ ಗತಿ! ಊರಿಂದೂರಿಗೆ ಕಸ ಸಾಗಿಸುವ ದೇವರು!

    ಪ್ಲಾಸ್ಟಿಕ್ ಲೋಟಕ್ಕೆ ಬೈ ಬೈ
    ಟೀ ಮಚ್ಚಾ ನಡೆಸುತ್ತಿರುವ ಯುವಕ ರಾಘವೇಂದ್ರ ಕೆಲ ಸಮಯಗಳ ಹಿಂದೆ ಇಂತಹ ಬದಲಾವಣೆಯನ್ನ ಆಲೋಚಿಸಿದ್ದರು. ಅನಗತ್ಯವಾಗಿ ಕಸ ನಿರ್ಮಿಸೋದ್ರಿಂದ ಪರಿಸರಕ್ಕೂ ಹಾನಿ ಎಂದು, ಪರ್ಯಾಯ ವ್ಯವಸ್ಥೆಗೆ ಮುಂದಾಗಿದ್ದಾರೆ. ಹೀಗಾಗಿ ಈ ಹೊಸ ಐಡಿಯಾ ಅವರಿಗೆ ಹೊಳೆಯಿತು. ಬೆಂಗಳೂರು, ಚೆನ್ನೈಗಳಲ್ಲಿ ಸಿಗೋ ಈ ರಾಗಿ ಕಪ್ ತರಿಸಿಕೊಂಡಿದ್ದಾರೆ. ಪೌಷ್ಟಿಕಾಂಶವೂ ಹೊಂದಿರುವ ಈ ಕಪ್​ನಿಂದ ಚಹಾ ಹೀರುವುದು ಗ್ರಾಹಕರಿಗೂ ಖುಷಿ ವಿಚಾರ.

    Ashwini Circle Sirsi ಟೀ ಮಚ್ಚಾಗೆ ಹೀಗೆ ಬನ್ನಿ

    ಇದನ್ನೂ ಓದಿ: Uttara Kannada: ಅಡಿಕೆ ಕೊಳೆರೋಗಕ್ಕೆ ಮನೆಮದ್ದು! ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್

    ಈ ಕಪ್ ಜೀವಕ್ಕೆ ಒಳ್ಳೇದು
    ಹೀಗೆ ಟೀ ಮಚ್ಚಾದಲ್ಲಿ ಬರೇ ಚಹಾ ಅನ್ನೋ ಅಸಡ್ಡೆ ತೋರುವಂತಿಲ್ಲ. ಟೀ ಕುಡಿಯಲು ಕೊಡುವ ಕಪ್ ಅನ್ನೂ ತಿನ್ನೋ ಮೂಲಕ ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳಬಹುದು. ಏನೇ ಇರಲಿ, ಪರಿಸರ ಸ್ನೇಹಿ ಈ ಚಹಾವನ್ನ ಶಿರಸಿಯ ಅಶ್ವಿನಿ ಸರ್ಕಲ್ ಕಡೆ ಹೋದ್ರೆ ನೀವು ಸವಿಯಬಹುದು.

    ವರದಿ: ಎ.ಬಿ.ನಿಖಿಲ್, ಮುಂಡಗೋಡು
    Published by:ಗುರುಗಣೇಶ ಡಬ್ಗುಳಿ
    First published: