• Home
 • »
 • News
 • »
 • uttara-kannada
 • »
 • Sirsi Students Japan Trip: ಶಿರಸಿ ಸರ್ಕಾರಿ ಶಾಲೆ ಮಕ್ಕಳ ಜಪಾನ್ ಪ್ರವಾಸ!

Sirsi Students Japan Trip: ಶಿರಸಿ ಸರ್ಕಾರಿ ಶಾಲೆ ಮಕ್ಕಳ ಜಪಾನ್ ಪ್ರವಾಸ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ವರ್ಷದ ರಾಷ್ಟ್ರಮಟ್ಟದ ಇನ್ ಸ್ಪೈರ್ ಅವಾರ್ಡ್​ನಲ್ಲಿ ಭಾಗವಹಿಸಿ 650 ಸ್ಪರ್ಧಿಗಳಲ್ಲಿ ಟಾಪ್-60ರಲ್ಲಿ ಸೆಲೆಕ್ಟ್ ಆಗಿ ಈಗ ಜಪಾನ್​ಗೆ ಹೊರಟಿದ್ದಾರೆ ಶಿರಸಿಯ ಸರ್ಕಾರಿ ಶಾಲೆಯ ಮಕ್ಕಳು.

 • Share this:

  ಪ್ರವಾಸ ಅಂತ ಬಂದ್ರೆ ಎಲ್ರ ಕಿವಿನೂ ಒಮ್ಮೆ ನೆಟ್ಟಗಾಗುತ್ತೆ! ಅದ್ರಲ್ಲೂ ಶಾಲೆ ಪ್ರವಾಸದ ಗಮ್ಮತ್ತೇ ಬೇರೆ, ಈ ಸರ್ಕಾರಿ ಶಾಲೆಯ ಮೂರು ಮಕ್ಕಳು ಸಹಾ ಪ್ರವಾಸಕ್ಕೆ ಹೊರಟಿದ್ದಾರೆ. ಅದೂ ಜಪಾನ್​ಗೆ! ಅರೇ! ಈ ಮೂರು ಮಕ್ಕಳೇಕೆ ಈಗ ಜಪಾನ್​ಗೆ (Japan) ಹೋಗ್ತಿದ್ದಾರೆ? ಅಲ್ಲೇ ಇದೆ ನೋಡಿ ಸರ್ಕಾರಿ ಶಾಲೆಗಳ ಬಗ್ಗೆ ಹೆಮ್ಮೆ ಅನಿಸುವಂಥಾ ವಿಷಯ. ಶಿರಸಿಯ (Sirsi Government Schools) ಗಣೇಶ ನಗರದ ಪ್ರೌಢಶಾಲೆಯ ಈ ಮೂವರು ಮಕ್ಕಳ ಸಾಧನೆಯೇ ಅವರನ್ನ ಜಪಾನ್ ಪ್ರವಾಸಕ್ಕೆ (Japan Trip)  ಕರೆದೊಯ್ಯುತ್ತಿದೆ. ಧನ್ಯಾ ಸಿ. ಆಚಾರಿ, ಸಾಯಿನಾಥ್, ಸುಮನಾ ಗೋಸಾಯಿ ಎಂಬ ಮೂವರು ವಿದ್ಯಾರ್ಥಿಗಳೇ ಜಪಾನ್ ತಲುಪಲಿರುವ ಸಾಧಕರು.


  ಧನ್ಯಾ ಸಿ ಆಚಾರಿ, ವಸ್ತುಗಳು ಅದೆಷ್ಟೇ ಗಟ್ಟಿಯಿದ್ದರೂ ಸುಲಭವಾಗಿ ಪುಡಿ ಮಾಡುವ ಸಾಧನವನ್ನ ಕಂಡು ಹಿಡಿದಿದ್ದಾಳೆ. ಗ್ಯಾರೇಜ್​ನಲ್ಲಿ ಸಿಕ್ಕ ವೇಸ್ಟ್​ಗಳಿಂದ ವೆಲ್ಡಿಂಗ್ ಮಾಡುವ ಮೂಲಕ ಅದಕ್ಕೊಂದು ರೂಪ ನೀಡಿದ್ದಾರೆ. ಇನ್ನು ಹತ್ತನೇ ತರಗತಿ ವಿದ್ಯಾರ್ಥಿ ಸಾಯಿನಾಥ್ ಮಣ್ಣು ಅಗೆಯುವ ಯಂತ್ರ ಕಂಡುಹಿಡಿದಿದ್ದಾರೆ.


  ಟಾಪ್-60ರಲ್ಲಿ ಸೆಲೆಕ್ಟ್
  ಇನ್ನೋರ್ವ ವಿದ್ಯಾರ್ಥಿನಿ ಸುಮನಾ ಗೋಸಾಯಿ ಅನ್ವೇಷಣೆ ಕಡಿಮೆಯದ್ದೇನಲ್ಲ. 9ನೇ ತರಗತಿಯ ಈಕೆ ಎರಡು ಇಂಚಿನ ಪಿವಿಸಿ ಪೈಪಿಗೆ ಒಂದು ಕನೆಕ್ಟರ್ ಹಾಕಿ ಮತ್ತೊಂದು ತುದಿಗೆ ಗ್ಯಾರೇಜ್ ವೇಸ್ಟಿಂದ ವೆಲ್ಡ್ ಮಾಡಿಸಿದ ಕಬ್ಬಿಣದ ಅಗಲವಾದ ಆಕೃತಿಯನ್ನು ಜೋಡಿಸಿದ್ದಾಳೆ.


  ಇದನ್ನೂ ಓದಿ: Success Story: ಇದು ಶಾಲೋದ್ಯಮ! ಮಹಿಳೆಯರ ಬಾಳು ಬೆಳಗಿದ ಶಾಲು!


  ಗೆರಟೆ, ಸಲಾಕೆ ಬಳಸಿ ಈ ಸಾಧನದ ಮೂಲಕ ಅನಾಯಾಸವಾಗಿ ಕೆಲಸ ಮಾಡೋ ಸಾಧನ ರೂಪಿಸಿದ್ದಾಳೆ. ಈ ವರ್ಷದ ರಾಷ್ಟ್ರಮಟ್ಟದ ಇನ್ ಸ್ಪೈರ್ ಅವಾರ್ಡ್​ನಲ್ಲಿ ಭಾಗವಹಿಸಿ 650 ಸ್ಪರ್ಧಿಗಳಲ್ಲಿ ಟಾಪ್-60ರಲ್ಲಿ ಸೆಲೆಕ್ಟ್ ಆಗಿ ಈಗ ಜಪಾನ್​ಗೆ ಹೊರಟಿದ್ದಾರೆ ಶಿರಸಿಯ ಸರ್ಕಾರಿ ಶಾಲೆಯ ಮಕ್ಕಳು.


  ಇದನ್ನೂ ಓದಿ: Horse Riding: ಶಿರಸಿಲಿ ಶಿವಾಜಿ ಹವಾ! ದಂಪತಿ ಮಾಡ್ತಾರೆ ಸವಾರಿ!


  ಹೀಗೆ ಸರಕಾರಿ ಶಾಲೆಯ ಮೂವರು ಮಕ್ಕಳು ತಮ್ಮ ಮಣ್ಣಿನ ಗುಣಕ್ಕೆ ಅನುಗುಣವಾಗಿ ಮಾಡಿರುವ ಈ ಸಂಶೋಧನೆ ಅವರನ್ನು ಜಪಾನ್ ದೇಶಕ್ಕೆ ಕರೆದೊಯ್ಯುತ್ತಿದೆ. ವಿದೇಶದಲ್ಲೂ ಈ ಮಕ್ಕಳು ದೇಶದ ಕೀರ್ತಿ ಪತಾಕೆ ಹಾರಿಸಲಿ ಎಂದು ನಾವು ಶುಭ ಹಾರೈಸೋಣ.


  ವರದಿ: ಎ.ಬಿ.ನಿಖಿಲ್, ಮುಂಡಗೋಡು

  Published by:ಗುರುಗಣೇಶ ಡಬ್ಗುಳಿ
  First published: