ಹಚ್ಚ ಹಸಿರಿನ ಕಾಫಿ ತೋಟ. ಕಾಫಿ ಗಿಡಗಳ ರಾಶಿ ನೋಡಿ ಇದ್ಯಾವುದು ಕೊಡಗೋ, ಚಿಕ್ಕಮಗಳೂರೋ ಅಂದ್ಕೊಂಡ್ರಾ? ಖಂಡಿತಾ ಅಲ್ಲ. ಇದು ಉತ್ತರ ಕನ್ನಡ! (Uttara Kannada News) ಉತ್ತರ ಕನ್ನಡದಲ್ಲಿ ಇಲ್ಲವೆ ಇಲ್ಲ ಅನ್ನೋ ಕಾಫಿಯ (Coffee) ಚಿಕ್ಕ ಲೋಕವನ್ನೇ ರೈತರೊಬ್ಬರು ಹುಟ್ಟಿಹಾಕಿದ್ದಾರೆ. ನಿಜ, ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ ಮಹೇಶ್ ಹೆಗಡೆ ಅರಗಿನಮನೆಯವರ ತೋಟದಲ್ಲೀಗ ಕಾಫಿಯ (Coffee Plant) ಘಮಘಮ!
ಶಿರಸಿಯ ಸೋಂದಾದಿಂದ ಎರಡು ಕಿಲೋಮೀಟರ್ ಒಳಗೆ ಹೋದರೆ ಅರಗಿನ ಮನೆ ಸಿಗುತ್ತದೆ. ಅಲ್ಲಿ ಮಹೇಶ್ ಹೆಗಡೆ ಜಬರ್ದಸ್ತಾಗಿ ಕೃಷಿ ಮಾಡುತ್ತಿದ್ದಾರೆ. ಸಮಗ್ರ ಕೃಷಿಗೆ ಹೆಸರಾದ ಇವರಿಗೆ ಮಣ್ಣು ಒಲಿಯಿತೋ ಅಥವಾ ಇವರ ಬೆವರು ಫಲ ನೀಡಿತೋ ಗೊತ್ತಿಲ್ಲ. ನಾಲ್ಕು ಎಕರೆ ಪ್ರದೇಶದಲ್ಲಿ ಹಾಕಿರುವ ಕಾಫಿ ಎರಡೇ ವರ್ಷಕ್ಕೆ ಎರಡು ಕ್ವಿಂಟಾಲ್ ಫಲ ನೀಡಿದೆ.
ಇದನ್ನೂ ಓದಿ: Uttara Kannada: ಪದ್ಮಶ್ರೀ ಗೆಳತಿಯರ ಭೇಟಿ! ವೃಕ್ಷಮಾತೆಯರ ಆತ್ಮೀಯ ಮಾತುಕತೆ
ಹೀಗೆ ಶಿರಸಿಯ ಕೃಷಿಕರೊಬ್ಬರು ಪ್ರಯೋಗಾತ್ಮಕವಾಗಿ ಬೆಳೆದ ಕಾಫಿ ಕೃಷಿ ಸಕ್ಸಸ್ ಆಗಿರೋದು ಉತ್ತರ ಕನ್ನಡಿಗರು ಕಾಫಿ ಬೆಳೆಯಲು ಮುನ್ನುಡಿ ಬರೆದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ