Horse Riding: ಶಿರಸಿಲಿ ಶಿವಾಜಿ ಹವಾ! ದಂಪತಿ ಮಾಡ್ತಾರೆ ಸವಾರಿ!

ಕಾರು, ಬಸ್ ಓಡಾಟ ಮಾಡುವ ರಸ್ತೆಗಳಲ್ಲಿ ಕುದುರೆಯ ಕಾರುಬಾರು. ಶಿರಸಿ ಪಟ್ಟಣದಲ್ಲೋರ್ವ ಅಶ್ವಪ್ರಿಯ ಸದಾಕಾಲ ಕುದರೆಯನ್ನೇರಿ ಸವಾರಿ ಮಾಡುತ್ತಾ ಗಮನಸೆಳೆಯುತ್ತಿದ್ದಾರೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

 • Share this:
  ಉತ್ತರ ಕನ್ನಡ: ರಸ್ತೇಲಿ ಟಕ್ ಟಕ್ ಅಂತಾ ಶಬ್ದ. ಅರೇ! ಏನಿದು ಅಂತ ಶಿರಸಿ ಜನರೆಲ್ಲ ಮನೆಯಿಂದ ಹೊರಗೆ ಇಣುಕಿ ನೋಡುತ್ತಿದ್ದಾರೆ. ಕುದುರೆಯೊಂದು ಪಟಪಟಾಂತ ಹೆದ್ದಾರಿಲಿ ಸವಾರಿ ಮಾಡ್ತಿದ್ರೆ ಬೈಕು, ಕಾರು ಸವಾರರು ಕಣ್ಣು ಬಾಯ್ ಬಿಟ್ಕೊಂಡು ನಿಂತಲ್ಲೇ ನಿಂತು ಬಿಟ್ಟಿದ್ದಾರೆ. ಇದರ ಓನರ್ ಗಣೇಶ್ ಆಕಾ ಅವಿನಾಶ್, ಈ ಜೋಡಿ ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿ ಪೇಟೆಲಿ ಯಾವ ರೇಂಜಿಗೆ ಫೇಮಸ್ ಅಂದ್ರೆ ಎಲ್ರೂ ಖರಪುಟಗಳ ಸೌಂಡನ್ನ (Sisi Horse Riding Couple) ಈ ಅವಿನಾಶ್ ಖದರ್ ಅನ್ನ ಕಣ್ಣು ಮಿಟುಕಿಸದೇ ನೋಡ್ತಾನೆ ಇರ್ತಾರೆ. ದಿನಾ ಒಂದ್ ರೌಂಡ್ ಇಬ್ರೂ ಊರು ಸುತ್ತುತಾರೆ.

  ಶಿವಾಜಿ ಅನ್ನೋ ಕುದುರೆ
  ಹೌದು, ಶಿರಸಿಯ ಪಟ್ಟಣದಲ್ಲೇನಾದ್ರೂ ಕುದುರೆ ಗೊರಸೆ ಸಪ್ಪಳ ಕೇಳ್ತಿದ್ರೆ, ಅದು ಶಿವಾಜಿ ಎಂಟ್ರಿ ಅಂತಾನೇ ಅರ್ಥ. ಜೊತೆಗೆ, ಅದರ ಓನರ್ ಗಣೇಶ್ ಅವರು ಕೂಡಾ ಸಿಟಿಗೆ ಬಂದ್ರೂ ಅಂತಾನೇ ಅರ್ಥ. ಹೀಗೆ ನಗರದಲ್ಲಿ ಲಾಯ ಕಟ್ಟಿದ ಈ ಕುದುರೆ ಮೇಲೆ ಸವಾರಿ ಮಾಡುತ್ತಾ ಹೋಗೋದಂದ್ರೆ ಗಣೇಶ್ ಅವರಿಗೆ ಎಲ್ಲಿಲ್ಲದ ಕ್ರೇಝು. ಇನ್ನು ಅವರ ಪತ್ನಿ ಕೂಡಾ ಹಾರ್ಸ್ ರೈಡ್ ಮಾಡಬಲ್ಲರು. ಬರೇ ಅಶ್ವ ಮಾತ್ರವಲ್ಲ ನಾಯಿಗಳಂದರೂ ಇವ್ರಿಗೆ ಎಲ್ಲಿಲ್ಲದ ಪ್ರೀತಿ. ಪ್ರಾಣಿ ಬಗ್ಗೆನೇ ವಿಶೇಷ ಕಾಳಜಿ ಹೊಂದಿದ ದಂಪತಿಯಾಗಿದ್ದಾರೆ ಇವರು.

  ಇದನ್ನೂ ಓದಿ: Edible Tea Cups: ಟೀ ಕುಡಿದ್ರೆ ಕಪ್ ತಿನ್ಬೇಕು! ಉತ್ತರ ಕನ್ನಡದಲ್ಲೇ ಇದೇ ಮೊದಲ ಬಾರಿಗೆ!

  ಡಾಗ್ ಟ್ರೈನರ್ ಗಣೇಶ್
  ಮೂಲತಃ ಒಬ್ಬ ಸರ್ಟಿಫೈಡ್ ಡಾಗ್ ಟ್ರೈನರ್ ಆಗಿರುವ ಗಣೇಶ್ ಅವರಿಗೆ ಕುದುರೆ ಬಗ್ಗೆನೂ ವಿಶೇಷ ಪ್ರೀತಿ. ಹಾಗಾಗಿ ಬೈಕ್, ಕಾರುಗಳ ಬದಲಿಗೆ ಸಿಟಿಯಲ್ಲಿ ತನ್ನಿಷ್ಟದ ಶಿವಾಜಿ ಹೆಸರಿನ ಕುದುರೆಯನ್ನೇ ನೆಚ್ಚಿಕೊಳ್ಳುತ್ತಾರೆ. ಏಳಡಿ ಎತ್ತರದ ಏಳೂವರೆ ವರ್ಷದ ಶಿವಾಜಿಯೂ ಅಷ್ಟೇ ತನ್ನ ಮಾಲಕನಿಗೆ ವಿಧೇಯನಾಗಿರುತ್ತಾನೆ. ಇನ್ನು ಗಣೇಶ್ ಅವರು ಡೇಂಜರಸ್ ಪಿಟ್ ಬುಲ್ ನಿಂದ ಹಿಡಿದು ತೀರಾ ಮುಗ್ಧ ಮುದ್ದು ನಾಯಿಗಳಿಗೂ ಟ್ರೈನಿಂಗ್ ನೀಡಿ ಅದನ್ನ ಪಳಗಿಸುವಲ್ಲಿ ನಿಷ್ಣಾತ.

  ಅವಿನಾಶ್ ಅವರ ಸಂಪರ್ಕ ಸಂಖ್ಯೆ: 7899119091

  ಇದನ್ನೂ ಓದಿ: Uttara Kannada: ಅಡಿಕೆ ಕೊಳೆರೋಗಕ್ಕೆ ಮನೆಮದ್ದು! ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್

  ಪಂಚಕಲ್ಯಾಣಿ ತಳಿ ಕುದುರೆ
  ಗಣೇಶ್ ಅವರ ಬಳಿ ಇರುವ ಶಿವಾಜಿ ಅಶ್ವವು ಕಾಟೇವಾರಿ ಪಂಚಕಲ್ಯಾಣಿ ತಳಿಗೆ ಸೇರಿದ್ಧಾಗಿದೆ. ಇದನ್ನ ಅವಿನಾಶ್ ಅವರು ಬೆಳಗಾವಿಯಿಂದ ಖರೀದಿಸಿ ತಂದಿದ್ದಾರೆ. ಹೀಗೆ ಬೇಕೆಂದಾಗಲೆಲ್ಲ ಕುದುರೆ ಏರಿ ಸವಾರಿ ಮಾಡೋ ಗಣೇಶ ದಂಪತಿ ಈಗ ಶಿರಸಿ ತುಂಬಾನೇ ಫೇಮಸ್ ಆಗಿದ್ದಾರೆ.
  Published by:ಗುರುಗಣೇಶ ಡಬ್ಗುಳಿ
  First published: