• Home
  • »
  • News
  • »
  • uttara-kannada
  • »
  • Bamboo Design: ಬಿದಿರಿನಿಂದ ಹೊಸ ಲೋಕವನ್ನೇ ಸೃಷ್ಟಿಸುವ ದಂಪತಿ; ಇವರ ಚಾಕಚಕ್ಯತೆಯೇ ಅಚ್ಚರಿ!

Bamboo Design: ಬಿದಿರಿನಿಂದ ಹೊಸ ಲೋಕವನ್ನೇ ಸೃಷ್ಟಿಸುವ ದಂಪತಿ; ಇವರ ಚಾಕಚಕ್ಯತೆಯೇ ಅಚ್ಚರಿ!

ಈ ದಂಪತಿಯ ಚಾಕಚಕ್ಯತೆ ನೋಡಿ

"ಈ ದಂಪತಿಯ ಚಾಕಚಕ್ಯತೆ ನೋಡಿ"

ಇವ್ರು ಸೃಷ್ಟಿಸೋ ವಿಧವಿಧದ ಬಿದಿರಿನ ಪರಿಕರಗಳು ಉಪಯೋಗದ ಜೊತೆ ನೋಡೋಕೂ ಚೆಂದ! ಅದ್ರಲ್ಲೂ ಬಿದಿರನ ಆಟಿಕೆ ರಥ, ಎತ್ತಿನಗಾಡಿ ಅಲಂಕಾರ ಗಣಪತಿ ಮೂರ್ತಿ, ಕ್ಲಿಪ್​ಗಳೂ ಸೇರಿ ಅನೇಕ ಹೊಸ ಪ್ರಯತ್ನಗಳು ಮೆಚ್ಚುಗೆ ಗಳಿಸಿ ಮಾರಾಟಗೊಂಡಿವೆ.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಲಾಟೀನು, ಆರತಿ ತಟ್ಟೆ, ಪೆನ್ ಸ್ಟ್ಯಾಂಡ್, ಫೋನ್ ಸ್ಟ್ಯಾಂಡ್, ತರಕಾರಿ ಟ್ರೇ, ಆಭರಣದ ಡಬ್ಬಿ ಹೀಗೆ ಎಲ್ಲವೂ ಬಿದಿರುಮಯ. ನಿಜ, ಇಲ್ಲಿರೋ ಈ ದಂಪತಿಗಳಿಗೆ ನೀವೇನಾದರೂ ಬಿದಿರು (Bamboo) ಕೊಂಡೊಯ್ದು ಕೊಟ್ರೆ ಹೀಗೆ ಅದಕ್ಕೊಂದು ಅದ್ಭುತ ರೂಪವನ್ನೇ ನೀಡ್ತಾರೆ. ಬಿದಿರಿನಿಂದ ಇಷ್ಟೆಲ್ಲ ತಯಾರಿಸೋಕೆ (Bamboo Art) ಸಾಧ್ಯಾನಾ ಅನ್ನೋ ಪ್ರಶ್ನೆನೂ ಮೂಡುತ್ತೆ! ಹೀಗೆ ನೆಲದ ಮೇಲೆ ಕೂತು ನೇಯುತ್ತಾ, ಜೋಡಿಸುತ್ತಾ ಇರೋ ಇವರು ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ ತಾರಗೋಡಿನ ದಂಪತಿ. ಹೆಸರು ಸೀತಾರಾಮ ಹೆಗಡೆ ಮತ್ತು ಭಾವನಾ ಹೆಗ್ಡೆ ಅಂತ. ಹವ್ಯಾಸಕ್ಕಾಗಿ ಆರಂಭಿಸಿದ್ದು ಮುಂದೆ ಫೇಮಸ್ ಆಗೋಕೂ ಕಾರಣವಾಯ್ತು. ಮುಂದೆ ಇದೇ ಚಾಕಚಕ್ಯತೆ ಸೀತಾರಾಮ ಹೆಗಡೆಯವರಿಗೆ 2011 ರಲ್ಲಿ ಆರ್ಯಭಟ ಪ್ರಶಸ್ತಿ ಅರಸಿ ಬರುವಂತೆಯೂ ಮಾಡ್ತು!


    ಇವ್ರು ಸೃಷ್ಟಿಸೋ ವಿಧವಿಧದ ಬಿದಿರಿನ ಪರಿಕರಗಳು ಉಪಯೋಗದ ಜೊತೆ ನೋಡೋಕೂ ಚೆಂದ! ಅದ್ರಲ್ಲೂ ಬಿದಿರನ ಆಟಿಕೆ ರಥ, ಎತ್ತಿನಗಾಡಿ ಅಲಂಕಾರ ಗಣಪತಿ ಮೂರ್ತಿ, ಕ್ಲಿಪ್​ಗಳೂ ಸೇರಿ ಅನೇಕ ಹೊಸ ಪ್ರಯತ್ನಗಳು ಮೆಚ್ಚುಗೆ ಗಳಿಸಿ ಮಾರಾಟಗೊಂಡಿವೆ. ಅಷ್ಟೇ ಅಲ್ಲ, ಕಣ್ರೀ ಇಡೀ ಕಲ್ಯಾಣ ಮಂಟಪವನ್ನೇ ಬಿದುರು ಮತ್ತು ಬಾಳೆದಿಂಡಿನಲ್ಲಿ ಕಟ್ಟುವಲ್ಲಿ ಸೀತಾರಾಮ ಹೆಗಡೆ ನಿಪುಣರು.


    ಇದನ್ನೂ ಓದಿ: Positive Story: ಬ್ರಿಟಿಷರ ವಿರುದ್ಧ ಹೋರಾಡಿ ದೇವರಾದ ಹಿಂದೂ-ಮುಸ್ಲಿಂ ಗೆಳೆಯರು, ಅಕ್ಕಪಕ್ಕದಲ್ಲೇ ಇದೆ ದೇವಸ್ಥಾನ


    ಹತ್ತು ಹಲವು ಶಿಬಿರಗಳನ್ನೂ ನಡೆಸಿ ತಮ್ಮಲ್ಲಿರೋ ಈ ಕಸುಬನ್ನ ಇತರರಿಗೂ ಕಲಿಸೋ ಪ್ರಯತ್ನವನ್ನೂ ಸೀತಾರಾಮ ಹೆಗಡೆಯವ್ರು ಮಾಡ್ತಿದ್ದಾರೆ. ಒಟ್ಟಿನಲ್ಲಿ ನೆಲಮೂಲದ ಕಲೆಯನ್ನ ಉಳಿಸಿ ಬೆಳೆಸುವಲ್ಲಿ ಇಂತಹ ಸಾಧಕರ ಛಲವೇ ಕಾರಣ ಅಂತ ಅನಿಸೋದಂತೂ ಸತ್ಯ.


    ಇದನ್ನೂ ಓದಿ: Yakshagana: ಯಕ್ಷಗಾನವೇ ಈ ಕುಟುಂಬದ ಉಸಿರು! ಯಕ್ಷಗಾನದ ಅಆಇಈ ಕಲಿಯೋಕೆ ಇಲ್ಲಿ ಬನ್ನಿ


    ನೀವೂ ಬಿದಿರು ಕಲಾವಿದರಾಗಲು ಹೀಗೆ ಮಾಡಿ
    ನೀವೂ ಕೂಡ ಇವರ ಸ್ಟೂಡೆಂಟ್ ಆಗಬೇಕೆ? ಹಾಗಾದರೆ ಈ 94807 90085 ಕರೆ ಮಾಡಿ, ಬಿದಿರು ಕಲಾವಿದರಾಗಿ!


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: