!ಬಗೆಬಗೆಯ ನಾಣ್ಯಗಳು, ಬಳಕೆ ಮಾಡೋದ್ ಇರ್ಲಿ, ಇದುವರೆಗೆ ಕಣ್ಣಲ್ಲೂ ಕಂಡಿರದ (Rare Coins) ಕಾಯಿನ್ಗಳು, ಒಂದೊಂದು ನಾಣ್ಯಕ್ಕೂ (Coin) ಒಂದೊಂದು ಕಾಲಕ್ಕೆ ಕರೆದೊಯ್ಯುವಷ್ಟು ಇತಿಹಾಸ! ಇಲ್ಲಿರೋ ಯಾವೊಂದು ಕಾಯಿನ್ ನೀವ್ ನೋಡಿರೋಕೆ ಚಾನ್ಸೇ ಇಲ್ಲ. ಈ ನಾಣ್ಯಗಳನ್ನು ನೋಡ್ತಿದ್ರೆ ಸೀದಾ ಚೋಳರ, ವಿಜಯನಗರದ ಕಾಲಕ್ಕೆ ಹೋಗ್ಬಿಡ್ತೀವಿ. ಯೆಸ್, ವಿಧವಿಧದ ನಾಣ್ಯಗಳನ್ನ ಹೀಗೆ ಚೆಂದವಾಗಿ ಜೋಪಾನ ಮಾಡಿಟ್ಟುಕೊಂಡು ಕುಳಿತಿರೋ ಈ ವ್ಯಕ್ತಿಯ ಹೆಸರು ಚಿದಾನಂದ ಹೆಗಡೆ ಅಂತ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಲ್ಲಬ್ಬೆಯ ಕೃಷಿಕ ಮನೆತನದ ಇವರ ಬಳಿ ಸಾವಿರಾರು ನಾಣ್ಯಗಳ ಸಂಗ್ರಹವಿದೆ.
ಚಿದಾನಂದ ಅವರಿಗೆ ಹಳೆ ಕಾಲದ ನಾಣ್ಯಗಳನ್ನ ಸಂಗ್ರಹಿಸುವ ಹವ್ಯಾಸ. ಈ ಹವ್ಯಾಸದಿಂದಲೇ ಇವರ ಜೋಳಿಗೆಯಲ್ಲಿ ಸರಿಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ನಾಣ್ಯಗಳ ಸಂಗ್ರಹವಿದೆ.
ವಿಜಯನಗರ ಕಾಲದ ನಾಣ್ಯಗಳೆಲ್ಲ ಇವೆ
ಅದ್ರಲ್ಲೂ ಕ್ರಿಸ್ತ ಶಕ 950ರ ಚೋಳರ ಕಾಲದ ಚಿನ್ನದ ಕಿರುನಾಣ್ಯದಿಂದ ಹಿಡಿದು ವಿಜಯನಗರದ ಕಾಲದ ವರಹಗಳು, ಈಸ್ಟ್ ಇಂಡಿಯಾ ಕಂಪನಿ ಬಿಡುಗಡೆ ಮಾಡಿದ್ದ ನಾಣ್ಯಗಳು, ಪೈಸೆಗಳೂ ಇವೆ. ಭಾರತೀಯ ನಾಣ್ಯದ ಜೊತೆಗೆ ದೇಶ- ವಿದೇಶದ ನಾಣ್ಯಗಳೂ ಇವರ ಬಳಿಯಿವೆ. 5, 6ನೇ ಜಾರ್ಜ್ ಕಿಂಗ್ ಕಾಲದ ನಾಣ್ಯಗಳು, ವಿಕ್ಟೋರಿಯಾದ 1900ನೇ ಇಸವಿಯ ನಾಣ್ಯ, ಅಮೆರಿಕನ್ ಡಾಲರ್, ಜಪಾನ್, ಜರ್ಮನಿ, ನೈಜೀರಿಯಾ, ಸಿಂಗಾಪುರ್ ಹೀಗೆ ನೂರಾರು ದೇಶಗಳ ನಾಣ್ಯಗಳನ್ನ ಇವ್ರು ಕಾಪಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Inspiration: ಇಡೀ ಊರಿಗೇ ಅಗರಬತ್ತಿ ಪರಿಮಳ ಹರಡುವ ಸಾಧಕ! ಇವರದ್ದು ಸ್ಫೂರ್ತಿ ನೀಡುವ ಜೀವನ
ನಾಣ್ಯಗಳ ಸಾರ್ವಜನಿಕ ಪ್ರದರ್ಶನ
ಚಿದಾನಂದ ಹೆಗಡೆ ಅವರ ಬಳಿ ಕೇವಲ ನಾಣ್ಯಗಳಷ್ಟೇ ಅಲ್ಲ, ಹಳೆ ಕಾಲದ ಭಾರತೀಯ ಹಾಗೂ ವಿದೇಶಿ ನೋಟುಗಳು, ಪೋಸ್ಟಲ್ ಸ್ಟಾಂಪ್ಗಳೂ ಇವೆ. ಹಿಂದೆ ಹೆಗಡೆಯವ್ರು ಶಾಲಾ- ಕಾಲೇಜುಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಿಗೆ ತೆರಳಿ ನಾಣ್ಯಗಳ ಪ್ರದರ್ಶನ ನೀಡಿ ಮಾಹಿತಿ ಕೊಡ್ತಿದ್ರು. ಆದ್ರೀಗ ವಯಸ್ಸಿನ ಕಾರಣಕ್ಕೆ ಹಾಗೂ ನಾಣ್ಯಗಳು ಹಾಳಾಗುವ ಆತಂಕದಿಂದಾಗಿ ಶಾಲೆಗಳಿಂದ ಆಹ್ವಾನ ಬಂದರೆ ಮಾತ್ರ ತೆರಳಿ ಪ್ರದರ್ಶನ ನೀಡ್ತಾರೆ.
ಇದನ್ನೂ ಓದಿ: Robot: 7ನೇ ಕ್ಲಾಸ್ ಬಾಲಕ ರೋಬೋಟ್ ತಯಾರಿಸಿದ! ಇದು ಸೇನೆಗೂ ಸಹಾಯ ಮಾಡುತ್ತೆ!
ದೇಶದ ಅತಿ ದೊಡ್ಡ ಅಡಿಕೆಯೂ ಇವರಲ್ಲಿದೆ!
ಇಷ್ಟೇ ಅಲ್ಲ, ಚಿದಾನಂದ ಅವರ ಬಳಿ ಇರುವ ಮತ್ತೊಂದು ವಿಶಿಷ್ಟ ಸಂಗ್ರಹವೊಂದಕ್ಕೆ ರೆಕಾರ್ಡ್ ಮಾಡಿದ್ದಾರೆ. ಇವರ ತೋಟದಲ್ಲಿ ಬೆಳೆದ 10.6 ಸೆಂ.ಮೀ. ಸುತ್ತಳತೆಯ, 4 ಸೆಂ.ಮೀ. ಉದ್ದದ ಅಡಿಕೆಯೊಂದು ದೇಶದ ಅತಿದೊಡ್ಡ ಅಡಿಕೆ ಎಂಬ ಹೆಗ್ಗಳಿಕೆ ಪಡೆದಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲೂ ದಾಖಲಾಗಿದೆಯಂತೆ. ಹೀಗೆ ಚಿದಾನಂದ ಹೆಗಡೆ ಅವರ ವಿಶಿಷ್ಟ ಹವ್ಯಾಸ ಇತಿಹಾಸವನ್ನ ಮೆಲುಕು ಹಾಕಲು ಬಹುದೊಡ್ಡ ಪ್ರೇರಣೆ ಅಂದರೆ ತಪ್ಪಾಗದು.
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ