Uttara Kannada: ಈ ದೇಗುಲಕ್ಕೆ ನಾಗರ ಕಲ್ಲುಗಳೇ ಗೋಡೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ನಾಗೇಶ್ವರ ದೇಗುಲದ ತೀರ್ಥವನ್ನು ಕೇವಲ ನಾಗಸಂಸ್ಕಾರ ಹಾಗೂ ಪ್ರತಿಷ್ಠೆಗೆ ಬಳಸುತ್ತಾರೆ. ಯಾರೂ ಇಲ್ಲಿ ಕೈ ಕಾಲು ತೊಳೆಯುವಂತಿಲ್ಲ. ಅತೀ ಚಿಕ್ಕ ಕುಂಡವೆನಿಸುವ ನಾಗತೀರ್ಥ ಪಾತಾಳಕ್ಕೆ ಚಾಚಿದೆ ಎಂಬ ನಂಬಿಕೆಯಿದೆ!

  • Share this:

    ಉತ್ತರ ಕನ್ನಡ: ಗೋಡೆಯ ತುಂಬೆಲ್ಲ ಬಾಕ್ಸ್​ನಂತಿರೋ ಪುಟ್ಟದಾದ ಕೋಣೆಗಳು. ಅದ್ರಲ್ಲಿ ಪ್ರತಿಷ್ಠಾಪನೆ ಆಗಿವೆ ನೋಡಿ ನಾಗನ ಮೂರ್ತಿಗಳು. ಒಳಗಡೆ ದೊಡ್ಡದಾದ ಲಿಂಗ, ಅದರ ಮುಂದೆ ಪುಟ್ಟದಾದ ನಂದಿ, ಸಮೀಪದಲ್ಲೇ ಆದಿಶೇಷನ (Adishesha) ಸಾನಿಧ್ಯ. ಹೀಗೆ ದೇಗುಲ ಸುತ್ತಲೂ ನಾಗರ ಕಲ್ಲುಗಳನ್ನ (Naga Temple) ಹೊಂದಿರೋ ಈ ಜಾಗವಾದ್ರೂ ಯಾವುದು ಅಂತೀರಾ? ಹೇಳ್ತೀವಿ ನೋಡಿ..


    ನಾಗರಕಲ್ಲುಗಳೇ ಗೋಡೆ
    ಹೀಗೆ ನಾಗರಕಲ್ಲುಗಳ ಗೋಡೆಯಿಂದಲೇ ಆವೃತವಾಗಿರುವ ಈ ದೇವಸ್ಥಾನ ಇರೋದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ. ಇಲ್ಲಿನ ಶ್ರೀನಾಗೇಶ್ವರ ದೇವಸ್ಥಾನಕ್ಕೆ ಕಲ್ಲಿನ ಗೋಡೆಗಳಿಗಿಂತಲೂ, ಸುತ್ತಲೂ ನಾಗರಕಲ್ಲಿನ ಆವರಣವೇ ಜಾಸ್ತಿ. ಇನ್ನು ದೇಗುಲದ ಒಳಗಿರುವ ಶಿವಲಿಂಗ ದೊಡ್ಡ ಗಾತ್ರದಲ್ಲಿದ್ದರೆ, ಅದರ ಮುಂದಿರೋ ನಂದಿ ಪುಟ್ಟದಾಗಿದ್ದು ಗಮನ ಸೆಳೆಯತ್ತೆ. ಅಷ್ಟೇ ಅಲ್ದೇ ಆದಿಶೇಷನ ಸಾನಿಧ್ಯವಿರುವ ಇಲ್ಲಿ ವಾಸುಕಿಯ ಸಂಚಾರ ಇತ್ತು ಎನ್ನಲಾಗಿದೆ.‘




    ವಾಸ್ತುಶಿಲ್ಪವೂ ಅತೀ ವಿಶಿಷ್ಟ!
    ಈ ದೇಗುಲವು ಕದಂಬರ ಕಾಲದಲ್ಲಿ ನಿರ್ಮಾಣವಾಗಿದ್ದು, ವಿಶಿಷ್ಟ ವಾಸ್ತುಶಿಲ್ಪ ಮತ್ತು ಕಲ್ಪನೆಯನ್ನು ಹೊಂದಿವೆ. ಹೊರಭಾಗದ ಪೂರ್ತಿ ಗೋಡೆಯಲ್ಲಿ ನಾಗರ ಕಲ್ಲಿನ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿಯೊಂದಕ್ಕೂ ಪ್ರತ್ಯೇಕ ಸ್ಥಾನವಿದೆ. ಒಳಗಡೆ ನಾಗನ ಪರಿವಾರ ಹಾಗೂ ನಾಗಯಕ್ಷಿ, ವಿವಿಧ ನಾಗರಗಳ ರೂಪ, ನವನಾಗರ ಇತ್ಯಾದಿಗಳನ್ನೆಲ್ಲಾ ಗಮನಿಸಿದಾಗ ನಾಗದೋಷಕ್ಕೆ ಸಂಬಂಧಿಸಿದ ಆಚರಣೆಗಳು ಬಹು ಹಿಂದಿನಿಂದಲೂ ಇಲ್ಲಿದ್ದವಂತೆ!


    ಇದನ್ನೂ ಓದಿ: Uttara Kannada: ಹೋಳಿ ಹಬ್ಬಕ್ಕಿಲ್ಲ ಬಣ್ಣದೋಕುಳಿ; ಇಲ್ಲಿ ಬೂದಿಯೇ ರಂಗು!




    ಪವಿತ್ರ ನಾಗತೀರ್ಥ
    ಇನ್ನು ನಾಗೇಶ್ವರ ದೇಗುಲದ ತೀರ್ಥವನ್ನು ಕೇವಲ ನಾಗಸಂಸ್ಕಾರ ಹಾಗೂ ಪ್ರತಿಷ್ಠೆಗೆ ಬಳಸುತ್ತಾರೆ. ಯಾರೂ ಇಲ್ಲಿ ಕೈ ಕಾಲು ತೊಳೆಯುವಂತಿಲ್ಲ. ಅತೀ ಚಿಕ್ಕ ಕುಂಡವೆನಿಸುವ ನಾಗತೀರ್ಥ ಪಾತಾಳಕ್ಕೆ ಚಾಚಿದೆ ಎಂಬ ನಂಬಿಕೆಯಿದೆ!


    ಇದನ್ನೂ ಓದಿ: Uttara Kannada: ಜಿಲೇಬಿ ಮಾರಿ ಶಾಲೆ ಕಟ್ಟಿದ ಸಾಹಸಿ! ಶಿಕ್ಷಣ ಕ್ರಾಂತಿ ಮಾಡಿದ ಅಡುಗೆ ಭಟ್ಟರು!


    ಇಲ್ಲಿ ಯಾರನ್ನೂ ಇಳಿಯಲು ಅಥವಾ ಈಜಲು ಬಿಡುವುದಿಲ್ಲ. ಹೀಗೆ ನಾಗತೀರ್ಥ ಹಾಗೂ ನಾಗೇಶ್ವರ ದೇವಸ್ಥಾನ ಪ್ರಕೃತಿ ಆರಾಧನೆಯ ಸಾರಸಹಿತ ವೈಭವವನ್ನು ನಮ್ಮ ಕಣ್ಮುಂದೆ ತೆರೆದಿಡುತ್ತದೆ.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: