ಕಾರವಾರ: ನಿಮ್ಗೆ ಗುರುವಿಲ್ಲದೆ ಶಸ್ತ್ರಾಸ್ತ್ರ ಕಲಿತ ಏಕಲವ್ಯನ ಕಥೆ ಗೊತ್ತಿದೆಯಲ್ವಾ? ನಾವೀಗ ಹೇಳ ಹೊರಟಿರುವುದು ಕೂಡ ಅಂಥದ್ದೇ ಓರ್ವ ಕಲಾವಿದನ ಕಥೆಯನ್ನ. ಈತನ ಹೆಸ್ರು ಚಂದನ್ ದೇವಾಡಿಗ ಅಂತ. ಉತ್ತರ ಕನ್ನಡ ಜಿಲ್ಲೆಯ (Uttara Kannada Nwes) ಕಾರವಾರದ (Karwar News)ಬ್ರಾಹ್ಮಣಗಲ್ಲಿ ಸಮೀಪದ ಈ ಯುವಕ ಕೇವಲ ಯೂಟ್ಯೂಬ್ (YouTube) ನೋಡಿಯೇ ಚಿತ್ರಕಲೆ, ರಂಗೋಲಿ ಚಿತ್ತಾರ ಕಲಿತು ಸೆಲೆಬ್ರಿಟಿಗಳ ಗಮನವನ್ನೂ ಸೆಳೆದಿರೋ ಅಸಾಮಾನ್ಯ ಯುವಕ!
ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಬ್ಯಾಚುಲರ್ ಇನ್ ವಿಶ್ಯುಲವ್ ಆರ್ಟ್ಸ್ ಕಲಿಯುತ್ತಿರುವ ಚಂದನ್ಗೆ ಸಣ್ಣ ವಯಸ್ಸಲ್ಲೇ ಕಲೆಯ ಮೇಲೆ ಅಪಾರ ಆಸಕ್ತಿ. ಡ್ರಾಯಿಂಗ್, ಪೇಂಟಿಂಗ್ ಮಾಡ್ತಾ ಚಿಕ್ಕ ವಯಸ್ಸಲ್ಲೇ ಪ್ರತಿಭೆ ತೋರಿದ್ರು ಚಂದನ್. ಮುಂದೆ ರಂಗೋಲಿ ಪುಡಿಯಲ್ಲಿ ಚಿತ್ರಿಸುವುದನ್ನ ಕಲಿತು ಈಗ ನೂರಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Success Story: ಮಹಿಳೆಯೇ ಇಲ್ಲಿ ಮೇಸ್ತ್ರಿ, ಪುರುಷರನ್ನು ಮೀರಿಸಿದ ಧೀರೆ!
ಸಿದ್ದಾರ್ಥ ಮಲ್ಹೋತ್ರಾ, ಸೋನು ಸೂದ್ ಮೆಚ್ಚುಗೆ ಕಳಿಸಿದ ಯುವಕ!
ರಂಗೋಲಿ ಆರ್ಟ್ ಜೊತೆಗೆ ಆಕ್ರಿಲಿಕ್, ಆಯ್ಲ್ ಪೇಂಟಿಂಗ್, ಸ್ಪೀಡ್ ಪೇಂಟಿಂಗ್, ಮ್ಯೂರಲ್ ವಾಲ್ ಪೇಂಟಿಂಗ್ ಕೂಡ ಮಾಡುವ ಚಂದನ್ ಕೈಯಲ್ಲಿ ಅರಳಿದ ಚಿತ್ರಗಳು ಕಣ್ಮನ ಸೆಳೆಯುತ್ತೆ. ವಿಶೇಷ ಅಂತಂದ್ರೆ, ಚಂದನ್ ಇದ್ದಿಲಿನ ಪುಡಿಯಲ್ಲಿ ಬಿಡಿಸಿದ ರಂಗೋಲಿ ವಿಡಿಯೋಗಳನ್ನ ಬಾಲಿವುಡ್ ನಟರಾದ ಸಿದ್ದಾರ್ಥ ಮಲ್ಹೋತ್ರಾ, ಸೋನು ಸೂದ್ ಮೆಚ್ಚಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: Uttara Kannada: ಶಿರಸಿಯಲ್ಲಿ ಅರಳುತ್ತಿದೆ ಕಾಫಿ! ಅಡಿಕೆ ತೋಟದಲ್ಲಿ ಕೃಷಿಕರ ಪ್ರಯೋಗ
ಆಲ್ ದಿ ಬೆಸ್ಟ್ ಚಂದನ್!
ಒಟ್ಟಿನಲ್ಲಿ, ಚಿಕ್ಕಂದಿನ ಆಸಕ್ತಿ, ಹವ್ಯಾಸ ಚಂದನ್ರನ್ನ ಓರ್ವ ಕಲಾವಿದನನ್ನಾಗಿ ರೂಪಿಸಿದೆ. ಇನ್ನೂ ಸಣ್ಣ ವಯಸ್ಸಿನ ಚಂದನ್, ಇದೇ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ನಾವೂ ಹಾರೈಸೋಣ.
ವರದಿ: ದೇವರಾಜ್ ನಾಯ್ಕ್ , ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ