Coconut Shell: ಕೈಗೆ ಚಿಪ್ಪು ಕೊಟ್ರೆ ಮ್ಯಾಜಿಕ್ ಮಾಡ್ತಾರೆ! ತೆಂಗಿನ ಚಿಪ್ಪು ಎಸೆಯೋ ಮುನ್ನ ಇಲ್ನೋಡಿ

ಈ ಅಂಥೋನಿ ಲೋಬೋ ಮೂಲತಃ ಗಾರೆ ಕೆಲಸ, ಪಂಕ್ಚರ್ ಕೆಲಸ ಮಾಡುವವರು. ಆದ್ರೆ ಈಗ ಇಂತಹ ನೈಪುಣ್ಯದ ಮೂಲಕ ಜನರ ನಡುವೆ ಸುದ್ದಿಯಾಗ್ತಿದ್ದಾರೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:

    ಉತ್ತರ ಕನ್ನಡ: ತೆಂಗಿನಕಾಯಿಯ ಗೊರಟೆಯಿಂದ ಆಟಿಕೆ, ಹೂ ಕುಂಡ, ಲಾಟೀನು,ಸೌಟು, ಜಗ್ಗು, ಬಟ್ಟಲು ಹೀಗೆ ನಾನಾ ವಿಧದ ಅಲಂಕಾರಿಕ ಹಾಗೂ ಗೃಹ ಬಳಕೆಯ ವಸ್ತುಗಳಿಗೆಲ್ಲ ತೆಂಗಿನಕಾಯಿ ವೇಸ್ಟ್​ಗಳೇ (Coconut Waste) ಸಾಧನ. ತೆಂಗಿನಕಾಯಿಯ ಚಿಪ್ಪಿನಿಂದ ಚಮಚದಿಂದ ಹಿಡಿದು ವಿದ್ಯುತ್ ಚಿಮಣಿವರೆಗೂ ತಯಾರಿಸಬಲ್ಲರು. ಮೋಸ ಹೋಗೋರ್ನ ನೋಡಿ ಹೇಳ್ತಾರಲ್ಲ ಕೊನೆಗೆ ನಿಮ್ ಕೈಗೆ ಚಿಪ್ಪೇ ಗತಿ ಅಂತಾ. ಆದ್ರೆ ಇವ್ರ ಕೈಲಿ ಚಿಪ್ಪು (Coconut Shell) ಕೊಟ್ರೂ ಅಲ್ಲೂ ಮ್ಯಾಜಿಕ್ ಮಾಡಬಲ್ಲರು. ಇವ್ರ ಕೈಗೆ ತೆಂಗಿನಕಾಯಿ ಚಿಪ್ಪು ಕೊಟ್ರೆ ಸಾಕು ಚಿಪ್ಪು ಚಿತ್ತಾರವಾಗಿ ಬದಲಾಗುತ್ತದೆ. ಅಂದಹಾಗೆ ಇವ್ರ ಹೆಸರು ಅಂಥೋನಿ ಲೋಬೋ. ಹೊನ್ನಾವರದ ಗೇರುಸೊಪ್ಪದ (Honnavar Gerusoppa) ನಿವಾಸಿ.


    ಅಷ್ಟೇನು ವಿದ್ಯಾಭ್ಯಾಸವಿಲ್ದೇ ಇದ್ರೂ ಇವರು ತಮ್ಮ ಕೈಚಳಕದಿಂದ ತೆಂಗಿನಕಾಯಿ ಗೊರಟೆ, ಚಿಪ್ಪುಗಳಿಂದ ಎಂತೆಂತಹ ಅದ್ಭುತ ಮಾಡಬಲ್ಲರು.


    ಲೋಬೋಗೆ ಪತ್ನಿಯ ಸಾಥ್
    ಈ ಅಂಥೋನಿ ಲೋಬೋ ಮೂಲತಃ ಗಾರೆ ಕೆಲಸ, ಪಂಕ್ಚರ್ ಕೆಲಸ ಮಾಡುವವರು. ಆದ್ರೆ ಈಗ ಇಂತಹ ನೈಪುಣ್ಯದ ಮೂಲಕ ಜನರ ನಡುವೆ ಸುದ್ದಿಯಾಗ್ತಿದ್ದಾರೆ. ಅವರ ಶ್ರೀಮತಿ ವೆರೋನಿಕಾ ಸದಾ ಅವ್ರ ಬೆನ್ನಿಗಿದ್ದು ಪ್ರೋತ್ಸಾಹಿಸ್ತಾರೆ. ಒಟ್ಟಿನಲ್ಲಿ ಅಂಥೋನಿ ಲೋಬೋ ಅವ್ರ ಕಲಾ ಚಾತುರ್ಯಕ್ಕೆ ಬೆರಗಾಗದೇ ಇರಲು ಸಾಧ್ಯವೇ ಇಲ್ಲ.

    Published by:guruganesh bhat
    First published: