• Home
  • »
  • News
  • »
  • uttara-kannada
  • »
  • Uttara Kannada: ಪ್ರವೀಣ್ ಗೋಡ್ಖಿಂಡಿ ನುಡಿಸುವ ಕೊಳಲು ತಯಾರಿಸೋದು ಇವರೇ!

Uttara Kannada: ಪ್ರವೀಣ್ ಗೋಡ್ಖಿಂಡಿ ನುಡಿಸುವ ಕೊಳಲು ತಯಾರಿಸೋದು ಇವರೇ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

Flute Maker In Uttara Kannada: ಒಮ್ಮೆ ಹಂಸಲೇಖ ಅವರು ಒಂದೇ ರಾಗ ನುಡಿಸಬಲ್ಲ ಐದು ಕೊಳಲು ಬೇಕು ಎಂದಾಗ ಅದನ್ನು ತಯಾರಿಸಿಕೊಟ್ಟು ಅವರ ಕೈಯಿಂದಲೇ ಸನ್ಮಾನ ಪಡೆದ ಸಾಧಕ ಇವರು!

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಆಹಾ! ಅದೆಂಥಾ ಇಂಪು! ಇಷ್ಟೊಳ್ಳೆ ಕೊಳಲು ನಾದಕ್ಕೆ ತಲೆದೂಗದವರಿಲ್ಲ. ಆದ್ರೆ ಸುಮಧುರ ನಾದ ಹೊಮ್ಮಿಸೋ ಕೊಳಲನ್ನ ತಯಾರಿಸೋರು ಯಾರು ಅಂತ ಎಂದಾದ್ರೂ ಯೋಚಿಸಿದ್ದೀರಾ? ಇವರೇ ನೋಡಿ ಅತಿರಥ ಮಹಾರಥ ಕಲಾವಿದರಿಗೂ ಕೊಳಲು ತಯಾರಿಸಿಕೊಡೋ (Flute Maker) ತೆರೆ ಹಿಂದಿನ ಸಾಧಕ. ಸ್ವತಃ ಕೊಳಲು ತಯಾರಿಸೋದೊಂದೇ ಅಲ್ದೇ, ಕೊಳಲು‌ ನುಡಿಸೋಕೂ ಬರೋ ಉತ್ತರ ಕನ್ನಡ ಜಿಲ್ಲೆಯ (Uttara Kannada) ಹೆಸರು ಮಂಜುನಾಥ್ ಹೆಗಡೆ ಅಂತ. ಕೊಳಲು ವಾದನ ಎಂದಾಗ ನೆನಪಿಗೆ ಬರೋ ಪ್ರವೀಣ್ ಗೋಡ್ಖಿಂಡಿಯವರಂತಹ (Praveen Godkhindi) ಹಲವು ಪ್ರಖ್ಯಾತ ಕಲಾವಿದರಿಗೂ ಇದೇ ಮಂಜುನಾಥ ಹೆಗಡೆಯವರೇ ಕೊಳಲು ಪೂರೈಸ್ತಾರೆ ಅಂದ್ರೆ ನೀವು ನಂಬ್ಲೇಬೇಕು.


    ಅಷ್ಟರಮಟ್ಟಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ನೆಟಗಾರಿನ ಈ ಕೊಳಲು ತಯಾರಕ ಮಂಜುನಾಥ್ ಹೆಗಡೆ ಫೇಮಸ್ಸು.


    45 ವರ್ಷಗಳಿಂದ ಕೊಳಲು ತಯಾರಿ!


    ಕಳೆದ 45 ವರ್ಷದಿಂದ ಕೊಳಲಿನ ವಿವಿಧ ಆಯಾಮಗಳ ಅಭ್ಯಾಸ ಮಾಡುತ್ತಿರುವ ಮಂಜುನಾಥ ವಿ ಹೆಗಡೆ ಅವರು ಅಪ್ರತಿಮ ಕೊಳಲು ವಾದಕರೂ ಹೌದು, ತಯಾರಕರೂ ಹೌದು.


    ಹಂಸಲೇಖ ಸಹ ಶ್ಲಾಘಿಸಿದ್ರು
    ಒಮ್ಮೆ ಹಂಸಲೇಖ ಅವರು ಒಂದೇ ರಾಗ ನುಡಿಸಬಲ್ಲ ಐದು ಕೊಳಲು ಬೇಕು ಎಂದಾಗ ಅದನ್ನು ತಯಾರಿಸಿಕೊಟ್ಟು ಅವರ ಕೈಯಿಂದಲೇ ಸನ್ಮಾನ ಪಡೆದ ಸಾಧಕ.


    ಇದನ್ನೂ ಓದಿ: Bank Jobs: ಈ ಪ್ರತಿಷ್ಠಿತ ಬ್ಯಾಂಕ್​ನಲ್ಲಿದೆ ಉದ್ಯೋಗ! ಹೀಗೆ ಅಪ್ಲೈ ಮಾಡಿ


    ಗುರುಪ್ರಸಾದ್ ವರ್ಕ್ಸ್ ಎಂಬಲ್ಲಿ ಕಳೆದ 30 ವರ್ಷದಿಂದ ಕೊಳಲು ತಯಾರಿಸುವ ಇವರು ಸಿದ್ಧಾಪುರದಲ್ಲಿ ಸಣ್ಣ ಮಕ್ಕಳಿಂದ ಹಿಡಿದು‌ ಹಿಡಿದು ದೊಡ್ಡ ಬಾನ್ಸುರಿವರೆಗೂ ಎಲ್ಲಾ ಮಾದರಿಯ ಕೊಳಲನ್ನು ತಯಾರಿಸಿದ್ದಾರೆ.


    ಇದನ್ನೂ ಓದಿ: Uttara Kannada: ಘನತ್ಯಾಜ್ಯದಿಂದ ಗೊಬ್ಬರ! ಇದು ಅಡಿಕೆಗೂ ಭಾರೀ ಬೆಸ್ಟ್ ಅಂತೆ!


    ಮಂಜುನಾಥ.ವಿ.ಹೆಗಡೆ: 88671 42118
    ಕೊಳಲು ತರಬೇತಿ: 83105 10202


    ಕೊಳಲು ಹೇಗೆ ತಯಾರಿಸ್ತಾರೆ?
    ಬಿದಿರಿನಿಂದ‌ ಕೊಳಲು ತಯಾರಿಸುವ ಮುನ್ನ ಮೊದಲಿಗೆ ಬಿದುರಿನ ಬಾಂಬುಗಳನ್ನು ತಂದು ಒಂದು ವಾರ ಒಣಗಿಸಿ ತುತ್ತಸುಣ್ಣದಲ್ಲಿ ನೆನೆಸಿಡ್ತಾರೆ. ನಂತರ ಮತ್ತೆ ಒಣಗಿಸಿ ಅದಕ್ಕೆ ಆರು ಹೋಲ್ ಮಾಡಿ ಟ್ಯೂನ್ ಮಾಡಲಾಗುತ್ತೆ. ಅಂತರಾಷ್ಟ್ರೀಯ ಖ್ಯಾತಿಯ ಪ್ರಸಿದ್ಧ ಕಲಾವಿದರು‌ ನುಡಿಸೋ ಕೊಳಲಿನ ಕಲಾವಿದ ಉತ್ತರ ಕನ್ನಡದ ಸಿದ್ಧಾಪುರದವರು ಅನ್ನೋದು ಜಿಲ್ಲೆಯ ಜನರಿಗಂತೂ ಭಾರೀ ಹೆಮ್ಮೆ ಮೂಡಿಸಿದೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: