• Home
 • »
 • News
 • »
 • uttara-kannada
 • »
 • Sirsi Petrol Price: ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಡಾಕ್ಟರ್!

Sirsi Petrol Price: ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಡಾಕ್ಟರ್!

ವಿಡಿಯೋ ನೋಡಿ

"ವಿಡಿಯೋ ನೋಡಿ"

ಇವತ್ತಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಲ್ಲಿ ಪೆಟ್ರೋಲ್, ಡೀಸೆಲ್ ರೇಟ್ ಏನಾದ್ರೂ ಕಡಿಮೆ ಇದೆ ಅಂದ್ರೆ ಅದ್ಕೆ ಕಾರಣ ಇದೇ ವೈದ್ಯರು!

 • Share this:

  ಉತ್ತರ ಕನ್ನಡ: ಡಾ. ರವಿಕಿರಣ್ ಪಟವರ್ಧನ್ ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿ ತಾಲೂಕಿನ ಹೆಸರಾಂತ ಆಯುರ್ವೇದಿಕ್ ವೈದ್ಯ. ದಿನವೊಂದಕ್ಕೆ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ರೋಗ ಶಮನ ಮಾಡಬಲ್ಲರು. ಆದ್ರೆ ಸದ್ಯ ಇವ್ರು ಸುದ್ದಿಯಾಗ್ತಿರೋದು ಇದ್ಯಾವ ಕಾರಣಕ್ಕೂ ಅಲ್ಲ, ಬದಲಾಗಿ ಇವ್ರು ಮಾಡಿದ ಸಾರ್ವಜನಿಕ ಸೇವೆಗಾಗಿ. ಹೌದು, ಇವತ್ತಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಲ್ಲಿ ಪೆಟ್ರೋಲ್, ಡೀಸೆಲ್ ರೇಟ್ (Uttara Kannada Petrol Rates) ಏನಾದ್ರೂ ಕಡಿಮೆ ಇದೆ ಅಂದ್ರೆ ಅದ್ಕೆ ಕಾರಣ ಇದೇ ವೈದ್ಯರು! ಹೌದು, ಓರ್ವ ಡಾಕ್ಟರ್​ರಿಂದ ಒಂದಿಡೀ ತಾಲೂಕಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಾಗಿದೆ!


  ಪ್ರಧಾನಿಗೆ ಪತ್ರ ಬರೆದ ವೈದ್ಯ
  ನಿಜ, ಜಿಲ್ಲೆಯ ಪ್ರಮುಖ ಪಟ್ಟಣವಾದ ಶಿರಸಿಗೆ ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್ ಆಮದಾಗುತ್ತಿತ್ತು. ಇದ್ರಿಂದಾಗಿ ತೈಲ ಬೆಲೆ ಹೆಚ್ಚು ತೆರಬೇಕಾದ ಪರಿಸ್ಥಿತಿ ಇತ್ತು. ಇದನ್ನ ಮನಗಂಡ ಡಾ.ರವಿಕಿರಣ್ ಪ್ರಧಾನ ಮಂತ್ರಿ ಅವ್ರಿಗೆ ಪತ್ರ ಬರೆದು, ಮಂಗಳೂರು ಬದಲಾಗಿ ಹುಬ್ಬಳ್ಳಿಯಿಂದ ಶಿರಸಿಗೆ ಪೆಟ್ರೋಲ್ ವಿತರಿಸುವಂತೆ ಮನವಿ ಮಾಡಿದ್ದರು.


  ಪಿಎಂ ಕಚೇರಿಯಿಂದ ನೋ ರೆಸ್ಪಾನ್ಸ್!
  ಒಂದು ವೇಳೆ ಹೀಗೆ ಮಾಡಿದ್ದಲ್ಲಿ ಕನಿಷ್ಟ 2ರೂ. ಇಳಿಕೆ ಆಗುವ ಸಾಧ್ಯತೆ ಬಗ್ಗೆ ವಿವರಿಸಿದ್ದರು. ಆದರೆ, ಪ್ರಧಾನಿ ಕಚೇರಿಯಿಂದ ಯಾವುದೇ ರೆಸ್ಪಾನ್ಸ್ ಬಂದಿರಲಿಲ್ಲ. ಪ್ರಯತ್ನ ಬಿಡದ ವೈದ್ಯರು, ಬಳಿಕ ವಿತ್ತ ಸಚಿವೆ, ಸ್ಥಳೀಯ ಸಂಸದ ಹಾಗೂ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರವನ್ನು ಬರೆದು ಸಮಸ್ಯೆಯನ್ನ ವಿವರಿಸಿದ್ರು.


  ಇದನ್ನೂ ಓದಿ: Success Story: ಇದು ಶಾಲೋದ್ಯಮ! ಮಹಿಳೆಯರ ಬಾಳು ಬೆಳಗಿದ ಶಾಲು!


  ಕೇಂದ್ರ ಸರ್ಕಾರದ ರೆಸ್ಪಾನ್ಸ್
  ಆದರೆ ಈ ಬಾರಿ ಪತ್ರಕ್ಕೆ ಸ್ಪಂದನೆ ಸಿಕ್ಕಿತ್ತು. ಸಮಸ್ಯೆ ಅರಿತುಕೊಂಡ ಕೇಂದ್ರ ಸರಕಾರ ತಕ್ಷಣವೇ ಹುಬ್ಬಳ್ಳಿಯಿಂದ ಪೆಟ್ರೋಲ್, ಡೀಸೆಲ್ ಸರಬರಾಜಿಗೆ ಆದೇಶಿಸಿತು.


  ಇದನ್ನೂ ಓದಿ: Uttara Kannada: ಅಡಿಕೆ ಕೊಳೆರೋಗಕ್ಕೆ ಮನೆಮದ್ದು! ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್


  ಇಂಧನ‌ ರೇಟ್ ಕಡಿಮೆ ಕ್ರೆಡಿಟ್!
  ಹೀಗೆ ವೈದ್ಯರು ತೋರಿದ ಸಾಮಾಜಿಕ ಕಳಕಳಿಗೆ ಸರಕಾರವೂ ಉತ್ತಮವಾಗಿಯೇ ಸ್ಪಂದಿಸಿದೆ. ಜೊತೆಗೆ, ವೈದ್ಯರು ಅಂದರೆ ಬರೇ ಜನರ ರೋಗವನ್ನಷ್ಟೇ ಶಮನ ಮಾಡೋರಲ್ಲ, ಬದಲಿಗೆ ಜನರ ಸಮಸ್ಯೆಯನ್ನೂ ಪರಿಹರಿಸುವವರು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.


  ವರದಿ: ಎ.ಬಿ.ನಿಖಿಲ್, ಮುಂಡಗೋಡು

  Published by:ಗುರುಗಣೇಶ ಡಬ್ಗುಳಿ
  First published: