• Home
  • »
  • News
  • »
  • uttara-kannada
  • »
  • Freedom Fighter: 117 ವರ್ಷದ ಈ ಸ್ವಾತಂತ್ರ್ಯ ಹೋರಾಟಗಾರ ಕೇವಲ‌ ಗಡ್ಡೆಗೆಣಸು ತಿಂದು ಬದುಕುತ್ತಿದ್ದಾರೆ!

Freedom Fighter: 117 ವರ್ಷದ ಈ ಸ್ವಾತಂತ್ರ್ಯ ಹೋರಾಟಗಾರ ಕೇವಲ‌ ಗಡ್ಡೆಗೆಣಸು ತಿಂದು ಬದುಕುತ್ತಿದ್ದಾರೆ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇತ್ತೀಚೆಗಿನ ಮೂರ್ನಾಲ್ಕು ತಿಂಗಳ ಹಿಂದೆಯೂ ಲಕ್ಷ್ಮಣ ಕುಣಬಿಯವರು ಬರಿಗಣ್ಣಿನಲ್ಲಿ ಪಂಚಾಂಗ ಓದಿ, ಜ್ಯೋತಿಷ್ಯ ಹೇಳುತ್ತಿದ್ರು. ಅಪ್ಪಟ ಕೊಂಕಣಿ ಭಾಷಿಗರಾದ ಲಕ್ಷ್ಮಣ ಕುಣಬಿಯವ್ರು ಚಹಾ ಬಿಟ್ಟರೆ ಗೆಡ್ಡೆ ಗೆಣಸುಗಳನ್ನಷ್ಟೇ ತಿನ್ತಾರೆ ಅಂದ್ರೆ ಯಾರಿಗಾದ್ರೂ ಅಚ್ಚರಿಯಾಗುತ್ತೆ!

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಈ ತಾತನನ್ನು ನೋಡಿ. ಎದ್ದು ಕೂರೋದಕ್ಕೂ ಈಗ ಸಾಧ್ಯವಾಗ್ದೇ ಇರ್ಬೋದು. ಆದ್ರೆ ಈ ಹಿರಿಜೀವ ದೇಶದ ಸ್ವಾತಂತ್ರ್ಯಕ್ಕಾಗಿ (Freedom Fighting) ಬ್ರಿಟಿಷರ ವಿರುದ್ಧ ತೊಡೆ ತಟ್ಟಿತ್ತು! ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಗಾಂಧೀಜಿಯಯವರನ್ನು (Mahatma Gandhiji) ಅನುಸರಿಸಿದ ಮಹಾನ್ ಚೇತನ ಇವರು! ಅಷ್ಟೇ ಅಲ್ಲ,ಕೃಷಿ, ಜ್ಯೋತಿಷ್ಯ ಸಲಹೆ ಅಂತ ಇಡೀ ಉತ್ತರ ಕನ್ನಡ ಜಿಲ್ಲೆಯ ಜನರು ಇವ್ರನ್ನು ಹುಡುಕಿ ಬರ್ತಿದ್ರು. ಅರೇ! ಈ ವಿಶೇಷ ವ್ಯಕ್ತಿ ಯಾರು ಅಂತಂದ್ರಾ? ಇವ್ರೇ ನೋಡಿ ಉತ್ತರ ಕನ್ನಡ ಜಿಲ್ಲೆ(Uttara Kannada) ಜೋಯ್ಡಾದ 117 ವರ್ಷದ ಲಕ್ಷ್ಮಣ್ ಕುಣಬಿ.


    ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಲಕ್ಷ್ಮಣ ಕುಣಬಿ ಅವರಿಗೆ 117 ವರ್ಷ. 1930 ರಲ್ಲಿ ನಡೆದಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿದ್ರು. ಗಾಂಧೀಜಿ ನಡೆಯನ್ನು ಅನುಸರಿಸಿದ್ದ ಇವರು ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟ ಕೈಗೊಂಡವರು. ಅಷ್ಟೇ ಏಕೆ, ಸ್ವಾತಂತ್ರ್ಯ ಭಾರತದಲ್ಲಿ ಪೊಲೀಸ್ ಆಗಿಯೂ ಕರ್ತವ್ಯ ಸಲ್ಲಿಸಿದ್ದ ಲಕ್ಷ್ಮಣ ಕುಣಬಿಯವರು


    ಸೂಪಾ ಆಣೆಕಟ್ಟಿನಿಂದ ಊರು ಮುಳುಗಡೆ
    ಮೂಲತಃ ಕರಂಜೋಯಿಡಾ ಇವರ ಊರು. ಆದ್ರೆ ಸೂಪಾ ಅಣೆಕಟ್ಟಿನಿಂದಾಗಿ ಊರು ಮುಳುಗಡೆಯಾದಾಗ ಇವರು ಜೋಯಿಡಾಕ್ಕೆ ಬಂದರು. ಇಲ್ಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು.


    ಇದನ್ನೂ ಓದಿ: Balloon Festival: ಇಲ್ಲಿ ಬಲೂನ್ ಹಾರಿಸಿದರೆ ಸಮಸ್ಯೆಗಳೆಲ್ಲ ಮಾಯ!


    ಚಹಾ ಬಿಟ್ಟರೆ ಗೆಡ್ಡೆ ಗೆಣಸುಗಳನ್ನಷ್ಟೇ ತಿನ್ತಾರೆ!
    ಇತ್ತೀಚಿಗಿನ ಮೂರ್ನಾಲ್ಕು ತಿಂಗಳ ಹಿಂದೆಯೂ ಲಕ್ಷ್ಮಣ ಕುಣಬಿಯವರು ಬರಿಗಣ್ಣಿನಲ್ಲಿ ಪಂಚಾಂಗ ಓದಿ, ಜ್ಯೋತಿಷ್ಯ ಹೇಳುತ್ತಿದ್ರು. ಅಪ್ಪಟ ಕೊಂಕಣಿ ಭಾಷಿಗರಾದ ಲಕ್ಷ್ಮಣ ಕುಣಬಿಯವ್ರು ಚಹಾ ಬಿಟ್ಟರೆ ಗೆಡ್ಡೆ ಗೆಣಸುಗಳನ್ನಷ್ಟೇ ತಿನ್ತಾರೆ ಅಂದ್ರೆ ಯಾರಿಗಾದ್ರೂ ಅಚ್ಚರಿಯಾಗುತ್ತೆ!


    ಇದನ್ನೂ ಓದಿ: Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ


    ಸ್ವಾತಂತ್ರ್ಯಕ್ಕಾಗಿ ಊರೂರು ಸುತ್ತಿದ್ದ ಲಕ್ಷ್ಮಣ ಕುಣಬಿ ಅವರು ಇಂದು ಇಳಿವಯಸ್ಸಿನಿಂದಾಗಿ ಮನೆಯಲ್ಲೇ ಇದ್ದಾರೆ. ತಮ್ಮ ಕೆಲಸಗಳನ್ನ ತಾವೇ ಮಾಡ್ಕೊಳ್ತಾರೆ. ಇಂಥಾ ಹಿರಿಜೀವಕ್ಕೆ ನಾವೂ ಒಂದು ಸೆಲ್ಯೂಟ್ ಮಾಡೋಣ ಅಲ್ವಾ?


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: