Uttara Kannada: ಕೃಷಿಯ ಭವಿಷ್ಯ ನಿರ್ಧರಿಸುವ ಪುಟಾಣಿ ಬಾಲಕಿಯರು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಗೌರಿ ಪೂಜೆಯನ್ನು ಬಂಜಾರ ಸಮುದಾಯವು ವಿಭಿನ್ನ ರೀತಿಯಲ್ಲಿ ಆಚರಿಸುತ್ತೆ. ಇದರ ಮೂಲಕ ಫಸಲು, ಮಳೆ ನಿರ್ಧರಿಸಲಾಗುತ್ತೆ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಬುಟ್ಟಿಯನ್ನ ತಲೆಯಲ್ಲಿ ಹೊತ್ತು ನಡೆಯುತ್ತಿರುವ ಪುಟ್ಟ ಮಕ್ಕಳು.. ಹಿರಿಯರ ಸಮ್ಮುಖದಲ್ಲಿ ನಡೆಯಿತು ವಿಭಿನ್ನ ಆಚರಣೆ. ಪ್ರಕೃತಿ ಜೊತೆಗಿನ ಒಡನಾಟ, ಕೃಷಿ ಬದುಕಿನ (Agriculture) ಮೆಲುಕು ಹಾಕುವ ವಿಶಿಷ್ಟ ಸಂಪ್ರದಾಯವಿದು. ಅಷ್ಟಕ್ಕೂ ಏನಿದು ಮಣ್ಣಿನ ಜೊತೆಗಿನ ಬೆಸುಗೆ ಅಂತೀರಾ? ಈ ಸ್ಟೋರಿ (Banjara Community Special Story) ನೋಡಿ ನಿಮ್ಗೇ ಗೊತ್ತಾಗುತ್ತೆ.


ಯೆಸ್‌, ಇದು ಉತ್ತರ ಕನ್ನಡದ ಬಂಜಾರ ಸಮುದಾಯದ ಗೌರಿ ಹಬ್ಬ ಆಚರಣೆ. ಕೃಷಿ ಪ್ರಧಾನ ಹಬ್ಬವಾಗಿರುವ ಈ ಆಚರಣೆಯಲ್ಲಿ ಪುಟ್ಟ ಹೆಣ್ಣು ಮಕ್ಕಳೇ ಕೇಂದ್ರಬಿಂದು. ಈ ಪುಟ್ಟ ಮಕ್ಕಳೇ ಬುಟ್ಟಿಯಲ್ಲಿ ಮಣ್ಣಿಗೆ ಹಾಕಲಾದ ಗೋಧಿ ಕಾಳುಗಳನ್ನ ಹೊತ್ತು ತರುತ್ತಾರೆ. ಮೊದಲು ಎರಡು ತಳಿಯ ಗೋಧಿಕಾಳುಗಳನ್ನು ಐದು ರೀತಿಯ ಮಣ್ಣಿನಲ್ಲಿ ಬೆರೆಸಿ ಸೇವಾಲಾಲ್ ಅವರ ಸನ್ನಿಧಿಯಲ್ಲಿ ಇಡಲಾಗುತ್ತದೆ. ತಾಂಡಾಕ್ಕೆ ಒಂದೊಂದರಂತಿರುವ ಬುಟ್ಟಿಯನ್ನು ಈ ಮಕ್ಕಳು ಹೊರುತ್ತಾರೆ.




ಮಳೆ, ಫಸಲು ನಿರ್ಧಾರ
ಬಂಜಾರ ಸಮುದಾಯದಲ್ಲಿ 5 ವರ್ಷಕ್ಕೊಮ್ಮೆ ಈ ಹಬ್ಬ ನಡೆಯುತ್ತದೆ. ಪ್ರಸ್ತುತ ಅಗಡಿ ಗ್ರಾಮದಲ್ಲಿ ಈ ಹಬ್ಬ ನಡೆದು 12 ವರ್ಷ ಕಳೆದಿತ್ತು. ವಿಶೇಷವೆಂದರೆ ಹೀಗೆ ಬುಟ್ಟಿಯಲ್ಲಿರುವ ಕಾಳುಗಳನ್ನು ಐದು ದಿವಸಗಳ ಕಾಲ ಬೆಳೆಯಲು ಬಿಡುತ್ತಾರೆ. ಆ ಫಸಲಿನ ಲಕ್ಷಣಗಳ ಮೇಲೆ ಕೃಷಿಯ ಭವಿಷ್ಯ ಹಾಗೂ ಮಳೆ ಇತ್ಯಾದಿ ನಿರ್ಧಾರವಾಗುತ್ತೆ.


ಹೆಣ್ಮಕ್ಕಳಿಂದ ವ್ರತಾಚರಣೆ
ಅದಕ್ಕಿಂತಲೂ ಮುಖ್ಯವಾಗಿ ಅಷ್ಟು ದಿನ ಆ ಹೆಣ್ಣುಮಕ್ಕಳು ಕಟ್ಟುನಿಟ್ಟು ವ್ರತಾಚರಣೆ ಮಾಡಬೇಕು. ಅರಿಶಿನ ತಿನ್ನುವಂತಿಲ್ಲ, ಯಾವುದೇ ಮಸಾಲೆ ಪದಾರ್ಥ ಮುಟ್ಟುವ ಹಾಗಿಲ್ಲ. ಹೊರಗಡೆಯ ಅಂಗಡಿಯ ತಿಂಡಿ ತಿನಿಸುಗಳನ್ನ ಸೇವಿಸುವಂತಿಲ್ಲ. ಹಾಗೇನಿದ್ದರೂ ಕೇವಲ ಅನ್ನ ಹಾಗೂ ಗಂಜಿ ಕುಡಿಯಬಹುದಷ್ಟೇ.


ತಪ್ಪಿದ್ರೆ ಹೀಗಾಗುತ್ತಂತೆ!
ಒಂಬತ್ತು ದಿನಗಳ ಕಾಲ ಅವರು ಶ್ರದ್ಧೆಯಿಂದ ವ್ರತ ಮಾಡಿದರೆ ಅದರ ಫಲ ಈ ಬುಟ್ಟಿಯಲ್ಲಿ ಕಾಣಬಹುದಾಗಿದೆ. ಇಲ್ದೇ ಹೋದ್ರೆ, ಫಸಲು ಕುಂಠಿತವಾಗುತ್ತದೆ, ಅರಿಶಿನ-ಮಸಾಲೆ ತಿಂದರೆ ಅದೇ ಬಣ್ಣ ಫಸಲಿಗೆ ಬರುತ್ತದೆ ಅನ್ನೋ ನಂಬಿಕೆ ಈ ಜನಾಂಗದ್ದು.


ಇದನ್ನೂ ಓದಿ: Uttara Kannada: ಇವರಿಗೆ ಆಕಾಶವೇ ಬಂಡವಾಳ, ಕಗ್ಗಾಡ ಹಳ್ಳಿಯಲ್ಲಿದೆ 40 ಲಕ್ಷದ ಆಸ್ಟ್ರೋ ಫಾರ್ಮ್!


ಬಳಿಕ ಒಂಭತ್ತು ದಿನದ ನಂತರ ಬಂದ ಫಸಲನ್ನು ಮಾರಿಕಾಂಬೆಗೆ ಹಾಗೂ ಸೇವಾಲಾಲರಿಗೆ ನೀಡಿ ಆ ಗೋಧಿ ಫಸಲಿನ ವಿಸರ್ಜನೆ ನಡೆಯುತ್ತದೆ. ಆಮೇಲೆ ಕುರಿ ಬೇಟೆಯನ್ನು ಮಾಡುತ್ತಾರೆ. ಅಷ್ಟೂ ದಿನ ಲಂಬಾಣಿ ಹಾಡುಗಳ ಹಾಗೂ ನೃತ್ಯದ ಪ್ರದರ್ಶನವಿರುತ್ತದೆ. ಇದೇ ಸಮಯದಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ತಮ್ಮ ಹಾಡುಗಾರಿಕೆ ಹಾಗೂ ನೃತ್ಯಕಲೆಯನ್ನು ಪರಿಚಯಿಸುವ ಕೊಡುವ ಸದಾವಕಾಶ.


ಇದನ್ನೂ ಓದಿ: Uttara Kannada: 142 ವರ್ಷಗಳ ಲಿಖಿತ ಇತಿಹಾಸವಿರುವ ಬಗ್ಗೋಣ ಪಂಚಾಂಗ ಬರೆಯುವ ಕನ್ನಡತಿ!


ಹೀಗಾಗಿ ಇದೊಂದು ಜಾನಪದ ಶಿಬಿರವಿದ್ದಂತೆ. ಬಂಜಾರ ಸಮುದಾಯದ ಮಕ್ಕಳು ಇದರಲ್ಲಿ ಭಾಗಿಯಾಗಿ ಸಂಪ್ರದಾಯ ಕಲಿಯುತ್ತಾರೆ. ಇಂತಹ ವಿಶಿಷ್ಟ ಗೌರಿ ಪೂಜೆಗೆ ಬಂಜಾರ ಸಮುದಾಯ ಸಾಕ್ಷಿಯಾಗುತ್ತೆ.

top videos


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    First published: